Saturday 13 July 2024

School Parliament Election 2024

 2024 ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆಯು ತಾರೀಕು 12 ಶುಕ್ರವಾರ 2024 ರಂದು ಜರಗಿತು. ನೂತನ ತಂತ್ರಜ್ಞಾನ ದ ಸಹಾಯದೊಂದಿಗೆ ಸಮ್ಮತಿ ಎಂಬ ಅಪ್ಲಿಕೇಶನ್ ಮೂಲಕ ಮತದಾನ ನಡೆಯಿತು . ಮಕ್ಕಳೇ ಚುನಾವಣಾ ಅಧಿಕಾರಿಗಳಾಗಿ ಸೇವೆಸಲ್ಲಿಸಿದರು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ಬಳಗದವರು ಮಕ್ಕಳಿಗೆ ಅಗತ್ಯವಾದ ಸಹಾಯಗಳನ್ನು ಒದಗಿಸಿದರು. 

ಶಾಲಾ ನಾಯಕನಾಗಿ ಅಝೀಮ್ ಅಹ್ಮದ್  ಹಾಗೂ ಉಪನಾಯಕಿಯಾಗಿ ಆಯಿಷತ್ ಶೈಮಾ ಆಯ್ಕೆಗೊಂಡರು . 





Thursday 11 July 2024

LSS 2024 WINNER

 

2023-24 ನೇ ಶೈಕ್ಷಣಿಕ ವರ್ಷದಲ್ಲಿ ನಡೆದ LSS ಪರೀಕ್ಷೆಯಲ್ಲಿ ನಮ್ಮ ಶಾಲೆಯ ಮತ್ತೊಂದು ಸಾಧನೆ. ಒಟ್ಟು 2 ಮಕ್ಕಳು scholarship ಗೆ ಅರ್ಹತೆ ಪಡೆದಿರುತ್ತಾರೆ
1. ವೃದ್ಧಿ ಕೆ
2. ಸಾಧಿಕಾ ನಿಶಾ ಬಿ ಯಂ

ಅಭಿನಂದನೆಗಳು ಮಕ್ಕಳೇ...💐


Monday 1 July 2024

Anti Drug day 2024


 

ಮುಡೂರು ತೋಕೆ ಶಾಲೆ ರಕ್ಷಕ ಶಿಕ್ಷಕ ಸಂಘದ ಸಭೆ

 ವರ್ಕಾಡಿ : ಎಸ್.ಎಸ್.ಎ. ಎಲ್.ಪಿ ಶಾಲೆ ಮುಡೂರು ತೋಕೆ ಶಾಲೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಪ್ರಥಮ ಪಿ.ಟಿ.ಎ ಸಭೆಯು ಶುಕ್ರವಾರ ಜರಗಿತು. ನೂತನ ಪಿ ಟಿ ಎ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ನೂತನ ಪಿ.ಟಿ.ಎ ಅಧ್ಯಕ್ಷರಾಗಿ ಶ್ರೀ ಉಮ್ಮರ್ ಕುಂ‌‌ಞ್ಞ ಉಪಾಧ್ಯಕ್ಷರಾಗಿ ಶ್ರೀ ಅಬ್ದುಲ್ ಕಾಸಿಂ ಮಾತೃ ಪಿ.ಟಿ.ಎ ಅಧ್ಯಕ್ಷೆಯಾಗಿ ಶ್ರೀಮತಿ ಸುಮಲತಾ ಉಪಾಧ್ಯಕ್ಷೆಯಾಗಿ ಶ್ರೀಮತಿ ಸರಿತಾರವರು ಆಯ್ಕೆಯಾದರು. ಸಭೆಯಲ್ಲಿ ಶಾಲಾ ಪ್ರಬಂಧಕರಾದ ಶ್ರೀ ದೇವಪ್ಪ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಯರು ಶ್ರೀ ಶೈಲೇಶ್ , ಶಾಲಾ ಶಿಕ್ಷಕರು, ಮತ್ತು ಮಕ್ಕಳ ರಕ್ಷಕರು ಭಾಗವಹಿಸಿದರು.











Monday 10 June 2024

Praveshotsavam 2024

 ವರ್ಕಾಡಿ: ಎಸ್.ಎಸ್.ಎ. ಎಲ್.ಪಿ ಶಾಲೆ ಮುಡೂರುತೋಕೆ ಶಾಲೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ವರ್ಕಾಡಿ ಪಂಚಾಯತು ಮಟ್ಟದ ಶಾಲಾ ಪ್ರವೇಶೋತ್ಸವವು ವಿಜೃಂಭಣೆಯಿಂದ ಜರಗಿತು. ವರ್ಕಾಡಿ ಪಂಚಾಯತು ಅಧ್ಯಕ್ಷೆ ಶ್ರೀಮತಿ ಭಾರತಿ .ಎಸ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಕ್ಕಳಿಗೆ ಶುಭ ಹಾರೈಸಿದರು. ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಮಮತಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಅಲಂಕರಿಸಿದ್ದರು. ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್, ಶಾಲಾ ಪ್ರಬಂಧಕರಾದ ಶ್ರೀ ದೇವಪ್ಪ ಶೆಟ್ಟಿ , ಪಿಟಿಎ ಅಧ್ಯಕ್ಷ ಶ್ರೀ ನವೀನ್,ಉಪಾಧ್ಯಕ್ಷರಾದ ಶ್ರೀ ಉಸ್ಮಾನ್ ಮಾತೃ ಪಿಟಿಎ ಅಧ್ಯಕ್ಷೆ ಶ್ರೀಮತಿ ಸರಿತಾ,ಉಪಾಧ್ಯಕ್ಷೆ ಶ್ರೀಮತಿ ರೇಖಾ, ಸಿಆರ್ ಸಿ ಕೋರ್ಡಿನೇಟರ್ ಶ್ರೀ ಮತಿ ಚಂದ್ರಿಕಾ , ಮೂಸ ತೌಡುಗೋಳಿ ಮುಂತಾದವರು ಭಾಗವಹಿಸಿದ್ದರು. ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕವನ್ನು ಉದ್ಯಮಿ ಶ್ರೀ ಜಯಪ್ರಕಾಶ್ ಶೆಟ್ಟಿ ಬಂಡಾರಮನೆ ಹಾಗೂ ಉಚಿತ ಬ್ಯಾಗ್ ನ್ನು ಶ್ರೀ ಮೊಯಿದೀನ್ ತೋಕೆ ಯವರು ನೀಡಿದರು. ಶಾಲಾ ಮುಖ್ಯೋಪಾಧ್ಯಯರಾದ ಶ್ರೀ ಶೈಲೇಶ್ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಅಧ್ಯಾಪಕಿ ಶ್ರೀಮತಿ ಜಯಲಕ್ಷ್ಮ್ ವಂದಿಸಿದರು. ಶಾಲಾ ಅಧ್ಯಾಪಕಿ ಶ್ರೀಮತಿ ಲಾವಣ್ಯ ಕಾರ್ಯಕ್ರಮವನ್ನು ನೀರೂಪಿಸಿದರು. ಈ ಸಂದರ್ಭದಲ್ಲಿ ಶಾಲಾ ಅಧ್ಯಾಪಕಿ ಶ್ರೀ ಮತಿ ಚಿತ್ರಾ ರವರು ಮಕ್ಕಳ ರಕ್ಷಕರಿಗೆ ವಿಶೇಷ ಮಾಹಿತಿ ತರಬೇತಿಯನ್ನು ನೀಡಿದರು.
















Group Photo 4th Std 2023-24 batch


 

Wednesday 6 March 2024

70th School Annual Day 2024

 ಮುಡೂರು ತೋಕೆ ಶಾಲಾ 70ನೆ  ವಾರ್ಷಿಕೋತ್ಸವ

ವರ್ಕಾಡಿ :  ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಮಾರ್ಚ್ 2 ರಂದು ಬೆಳಗ್ಗೆ 9.30ಕ್ಕೆ ಸರಿಯಾಗಿ ಶಾಲಾ ಪಿ ಟಿ ಎ ಅಧ್ಯಕ್ಷ ಶ್ರೀ ನವೀನ್  ಅವರು ಧ್ವಜಾರೋಹಣ ಗೈದರು. ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್ ಕಾರ್ಯಕ್ರಮದ ಉದ್ಘಾಟನೆ ಯನ್ನು ನೆರವೇರಿಸಿದರು.  ಸಂಜೆ 5 ರ ವರೆಗೆ ಶಾಲಾ ವೇದಿಕೆಯಲ್ಲಿ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.  ಬೆಳಗ್ಗೆ 10.30ಕ್ಕೆ  ಸರಿಯಾಗಿ ಶಾಲಾ ಪ್ರಭಂಡಕರು ಶ್ರೀ ದೇವಪ್ಪ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ಕೃಷ್ಣ ಮೂರ್ತಿಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್, ಶಿವರಾಜ್ , ಮೂಸ ಕುಂಙಿ, ನಿವೃತ್ತ ಅಧ್ಯಾಪಕಿ ಶ್ರೀಮತಿ ಚಂದ್ರಾವತಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ನವೀನ,ಮಾತೃ ಸಂಘದ ಅದ್ಯಕ್ಷೆಯಾದ ಶ್ರೀಮತಿ ಸರಿತಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದಯರು ಶ್ರೀ ಶೈಲೇಶ್  ಎಮ್ ರವರ ಸ್ವಾಗತದೊಂದಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕಿ ಶ್ರೀಮತಿ ಫೌಸಿಯವರು ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು.ಈ ಸಂದರ್ಭದಲ್ಲಿ ಶಾಲಾ ಅಡುಗೆ ಕರ್ಮಿಕರಾದ ಶ್ರೀಮತಿ ಕುಸುಮರವರಿಗೆ ಮತ್ತು ಶಾಲಾ ಪೂರ್ವ ವಿದ್ಯಾರ್ಥಿ ಮತ್ತು ಉದ್ಯಮಿ ಜಯಪ್ರಕಾಶ್ ರವರಿಗೆ ಗೌರಾವಾಭಿನಂದನೆಯನ್ನು ಮಾಡಲಾಯಿತು. ಶಾಲಾ ಅಧ್ಯಾಪಕಿ ಶ್ರೀಮತಿ ಚಿತ್ರಾ ಕಾರ್ಯಕ್ರಮ ನಿರೂಪಿಸಿ ಶಾಲಾ ಅಧ್ಯಾಪಿಕೆ ಶ್ರೀಮತಿ ಜಯಲಕ್ಷ್ಮಿ ವಂದಿಸಿದರು.

















Saturday 3 February 2024

Republic Day 2024

 



Samyuktha Dairy Publish

ಒಂದು ಮತ್ತು ಎರಡನೇ ತರಗತಿಯ ಮಕ್ಕಳ ಸ್ವಯಂ ರಚನೆ  ಸಂಯುಕ್ತ ಡಯಾರಿ ಬಿಡುಗಡೆಯ ಕ್ಷಣ 



Friday 24 November 2023

Childrens Haritha kerala sabha

 

ವೊರ್ಕಾಡಿ ಪಂಚಾಯತ್ ಮಟ್ಟದ ಮಕ್ಕಳ ಹರಿತ ಸಭೆ ಯಲ್ಲಿ ಭಾಗವಹಿಸಿದ ನಮ್ಮ ಶಾಲಾ ಮಕ್ಕಳು...

ACHIEVEMENTS IN KALOTSAVAM 2023

 ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ, ಕಲೋತ್ಸವಗಳಲ್ಲಿ ಬಹುಮಾನ ಗಳಿಸಿ ನಮ್ಮ ಶಾಲೆಯ ಕೀರ್ತಿ ಬೆಳಗಿಸಿದ ಪ್ರತಿಭಾವಂತ ಮಕ್ಕಳಿಗೆ ಅಭಿನಂದನೆಗಳು