ಇಂದು 08.06.2026 ನಮ್ಮ ಶಾಲಾ ಮ್ಯಾನೇಜರ್ ಹಾಗೂ ಕುಟುಂಬಸ್ಥರು ಸೇರಿ ಶಾಲಾ ಮಕ್ಕಳಿಗೆ ಭರ್ಜರಿ ಮಧ್ಯಾಹ್ನದೂಟವನ್ನು ಒದಗಿಸಿಕೊಟ್ಟರು. ಪಾಲವ್,ಸಲಾಡ್,ಪೂರಿ,ಪನೀರ್ ಕರಿ, ಗೋಬಿ ಮಂಚೂರಿ, ಉಪ್ಪಿನಕಾಯಿ,ಐಸ್ ಕ್ರೀಮ್, ಪಾಯಸ ,ಹೋಳಿಗೆ ಮುಂತಾದವುಗಳಿಂದ ಭೋಜನವು ಸಮೃದ್ಧವಾಗಿತ್ತು. ಈ ಒಂದು ಭೋಜನದ ವ್ಯವಸ್ಥೆ ಮಾಡಿಕೊಟ್ಟ ನಿಮಗೆ ಶಾಲಾ ಪರವಾಗಿಯೂ, ಮಕ್ಕಳ ಪರವಾಗಿಯೂ ಅನಂತಾನಂತ ಧನ್ಯವಾದಗಳು🙏🏻
Monday, 8 June 2026
ಪರಿಸರ ದಿನಾಚರಣೆ 2026
ಎಸ್ ಎಸ್ ಎ ಎಲ್ ಪಿ ಶಾಲೆ ಮುಡೂರುತೋಕೆಯಲ್ಲಿ ಪರಿಸರ ದಿನಾಚರಣೆ ಯನ್ನು ಆಚರಿಸಲಾಯಿತು.ಶಾಲಾ ಅಸೆಂಬ್ಲಿಯಲ್ಲಿ ಮುಖ್ಯೋಪಾಧ್ಯಾಯರು ಪರಿಸರ ದಿನದ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಟ್ಟರು.ಪರಿಸರವನ್ನು ಸಂರಕ್ಷಿಸುವ ಪ್ರತಿಜ್ಞೆ ಕೈಗೊಳ್ಳಲಾಯಿತು.ತರಗತಿ ಮಟ್ಟದಲ್ಲಿ ಪೋಸ್ಟರ್ ನಿರ್ಮಾಣ,ಪರಿಸರಕ್ಕೆ ಸಂಬಂಧಿಸಿದ ಚಿತ್ರ ರಚನೆ, ಘೋಷಣಾ ವಾಕ್ಯಗಳ ರಚನೆ ಮೊದಲಾದ ಚಟುವಟಿಕೆಗಳನ್ನು ನಡೆಸಲಾಯಿತು. ಕೃಷಿ ಭವನದಿಂದ ಲಭಿಸಿದ ಗಿಡವನ್ನು ಶಾಲಾ ಪರಿಸರದಲ್ಲಿ ನಡಲಾಯಿತು.ಮಕ್ಕಳು ತಂದಂತಹ ಗಿಡಗಳನ್ನು ಶಾಲಾ ಕೃಷಿ ತೋಟದಲ್ಲಿ ಮಕ್ಕಳೇ ನೆಟ್ಟು ಸಂಭ್ರಮಿಸಿದರು.
ಶಾಲಾ ಪ್ರವೇಶೋತ್ಸವ 2026-27
ಎಸ್.ಎಸ್.ಎ.ಎಲ್.ಪಿ.ಶಾಲೆ ಮುಡೂರುತೋಕೆ ಯಲ್ಲಿ ದಿನಾಂಕ 1-6-2026 ನೇ ಸೋಮವಾರದಂದು 2026-27 ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಸಮಯ ಸರಿಯಾಗಿ 9.45 ಕ್ಕೆ ಶಾಲಾ ಅಸೆಂಬ್ಲಿಯನ್ನು ನಡೆಸಲಾಯಿತು. ಸೈಬರ್ ಸೇಫ್ಟಿ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ನಂತರ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶೈಲೇಶ್ ರವರು ಬಂದಿರುವ ಅತಿಥಿಗಳನ್ನು ಸ್ವಾಗತಿಸಿದರು.ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ದೇವಪ್ಪ ಶೆಟ್ಟಿಯವರು ನೆರವೇರಿಸಿದರು.LSS ವಿಜೇತೆಯಾದ ಝಲ್ಫಳನ್ನು ಈ ಸಮಯದಲ್ಲಿ ಗೌರವಿಸಲಾಯಿತು.1 ರಿಂದ 4 ನೇ ತರಗತಿಯ ಮಕ್ಕಳಿಗೆ ಉಚಿತವಾಗಿ ನೋಟ್ಸ್ ಪುಸ್ತಕಗಳನ್ನು ಶ್ರೀ ಜಯಪ್ರಕಾಶ ಭಂಡಾರ ಮನೆ ಇವರು ನೀಡಿದರು. 1ನೇ ತರಗತಿ ಮಕ್ಕಳಿಗೆ ಉಚಿತ 23 ಶಾಲಾ ಬ್ಯಾಗ್ ಗಳನ್ನು ಗೋಲ್ಡ್ ಸ್ಟಾರ್ ಫ್ರೆಂಡ್ಸ್ ಕ್ಲಬ್ ನವರು , 1 ಬ್ಯಾಗ್ ಅನ್ನು ಶ್ರೀ ಲೋಕೇಶ್ ಪಾವಳ ಹಾಗೂ 1 ಬ್ಯಾಗ್ ಅನ್ನು ಅಧ್ಯಾಪಕಿ ಚಿತ್ರ ಇವರು ವಿತರಿಸಿದರು.ಗೋಲ್ಡ್ ಸ್ಟಾರ್ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರು ಶ್ರೀ ಝಾಹಿದ್ ರವರು ಉಪಸ್ಥಿತರಿದ್ದರು.ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರೀತಿಕ ಹಾಗೂ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಅಬೂಬಕ್ಕರ್ ಸಿದ್ದೀಕ್ ರವರು ಶುಭ ಹಾರೈಸಿದರು. ಪಿ. ಟಿ. ಎ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಧ್ಯಾಪಕಿ ಶ್ರೀ ಲಾವಣ್ಯ ರವರು ನಿರೂಪಿಸಿದರು. ಅಧ್ಯಾಪಕಿ ಚಿತ್ರರವರು ವಂದಿಸಿದರು.
Saturday, 31 January 2026
Saturday, 14 June 2025
Praveshotsava 2025-26
ಎಸ್.ಎಸ್.ಎ.ಎಲ್.ಪಿ.ಎಸ್ ಮೂಡೂರುತೋಕೆ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಶುಭಾರಂಭವನ್ನು ಪ್ರವೇಶೋತ್ಸವದ ಮೂಲಕ ಅತ್ಯಂತ ಸಂಭ್ರಮದೊಂದಿಗೆ ಆಚರಿಸಲಾಯಿತು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಗಣ್ಯರು ಉಪಸ್ಥಿತರಿರುವ ಈ ಕಾರ್ಯಕ್ರಮವು ಹೊಸ ಶೈಕ್ಷಣಿಕ ವರ್ಷದ ಉತ್ಸಾಹಪೂರ್ಣ ಆರಂಭವನ್ನು ಸೂಚಿಸಿತು.
ಕಾರ್ಯಕ್ರಮದ ವಿವರಗಳು
ಕಾರ್ಯಕ್ರಮದ ಉದ್ಘಾಟನೆ:
ಕಾರ್ಯಕ್ರಮವನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ದೇವಪ್ಪ ಶೆಟ್ಟಿ ಅವರು ಉದ್ಘಾಟಿಸಿ ಶುಭಕೋರಿದರು.
ಅಧ್ಯಕ್ಷತೆ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಉಮ್ಮರ್ ಕುಂಜ್ಹಿ, ಪಿಟಿಎ ಅಧ್ಯಕ್ಷರು ವಹಿಸಿದ್ದರು. ತಮ್ಮ ಭಾಷಣದಲ್ಲಿ ಅವರು ಪೋಷಕರ ಪಾತ್ರ ಹಾಗೂ ಮಕ್ಕಳ ಶಿಕ್ಷಣದಲ್ಲಿ ಸಮುದಾಯದ ಸಹಕಾರದ ಮಹತ್ವವನ್ನು ವಿವರಿಸಿದರು.
ಸ್ವಾಗತ ಭಾಷಣ:
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶೈಲೇಶ್ ಎಂ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ, ಶಾಲೆಯ ಉದ್ದೇಶಗಳು ಹಾಗೂ ವರ್ಷದ ಯೋಜನೆಗಳನ್ನು ವಿವರಿಸಿದರು.
ಉಚಿತ ನೋಟುಬುಕ್ ವಿತರಣೆ:
ಶಾಲೆಯ ಹಳೆಯ ವಿದ್ಯಾರ್ಥಿಯೂ ಹಾಗೂ ಉದ್ಯಮಿಯೂ ಆಗಿರುವ ಶ್ರೀ ಜಯಪ್ರಕಾಶ್ ಶೆಟ್ಟಿ ಅವರ ಪ್ರಾಯೋಜನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟುಬುಕ್‌ಗಳನ್ನು ವಿತರಿಸಲಾಯಿತು. ಅವರ ಅನುಪಸ್ಥಿತಿಯಲ್ಲಿ ಶ್ರೀಮತಿ ರೇಷ್ಮಾ (ಜಯಪ್ರಕಾಶ್ ಶೆಟ್ಟಿಯವರ ಪತ್ನಿ) ಅವರು ಮಕ್ಕಳಿಗೆ ನೋಟುಬುಕ್ ವಿತರಿಸಿದರು.
ಶಾಲೆ ಪ್ರಾಯೋಜಿತ ಶಾಲಾ ಬ್ಯಾಗ್ ವಿತರಣೆ:
ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಯೋಜನೆಯಲ್ಲಿ ವಿಶೇಷವಾಗಿ ಶಾಲಾ ಬ್ಯಾಗ್‌ಗಳು ವಿತರಿಸಲಾಯಿತು. ಇದು ಮಕ್ಕಳಲ್ಲಿ ಉತ್ಸಾಹವನ್ನೂ ಮತ್ತು ಸ್ವಾಗತದ ಭಾವನೆಯನ್ನು ಹೆಚ್ಚಿಸಿತು.
ಕಾರ್ಯಕ್ರಮದ ಸಂಚಾಲನೆ:
ಕಾರ್ಯಕ್ರಮದ ಯಶಸ್ಸಿಗೆ ಕೆಳಕಂಡರು ತಮ್ಮ ಕೊಡುಗೆಯನ್ನು ನೀಡಿದರು:
ಶ್ರೀಮತಿ ಸುಮಲತಾ – ಎಂ.ಪಿಟಿಎ ಅಧ್ಯಕ್ಷೆ
ಶ್ರೀ ಅಬ್ದುಲ್ ಕಾಸಿಂ – ಪಿಟಿಎ ಉಪಾಧ್ಯಕ್ಷರು
ಶ್ರೀಮತಿ ಸರಿತಾ – ಎಂ.ಪಿಟಿಎ ಉಪಾಧ್ಯಕ್ಷೆ
ಶೈಕ್ಷಣಿಕ ಸಾಧನೆಗೆ ಗೌರವ:
ಶಾಲೆಯ ವಿದ್ಯಾರ್ಥಿ ಮಾಸ್ಟರ್ ಸುಬ್ರಹ್ಮಣ್ಯ ಹೊಳ್ಳಾ ಅವರು ಎಲ್‌ಎಸ್‌ಎಸ್ ಪರೀಕ್ಷೆಯಲ್ಲಿ ಸಾಧನೆ ಮೆರೆದ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಲಾಯಿತು. ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಕೆಲಸಮಾಡುತ್ತದೆ.
ಕಾರ್ಯಕ್ರಮ ನಿರ್ವಹಣೆ:
ಕಾರ್ಯಕ್ರಮವನ್ನು ಸೃಜನಾತ್ಮಕವಾಗಿ ಮತ್ತು ಸರಳವಾಗಿ ಶಾಲಾ ಶಿಕ್ಷಕಿಯಾಗಿರುವ ಶ್ರೀಮತಿ ಚಿತ್ರಾ ಅವರು ನಿರ್ವಹಿಸಿದರು.
ಧನ್ಯವಾದ ವಿಧಿಯುತ ಭಾಷಣ:
ಕಾರ್ಯಕ್ರಮದ ಅಂತ್ಯದಲ್ಲಿ ಶಾಲಾ ಶಿಕ್ಷಕಿಯಾಗಿರುವ ಶ್ರೀಮತಿ ಫೌಸಿಯಾ ಅವರು ಎಲ್ಲ ಗಣ್ಯರು, ಪಾಲಕರು, ಪ್ರಾಯೋಜಕರು ಹಾಗೂ ಅತಿಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಪ್ರವೇಶೋತ್ಸವದ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ಹೊಸ ಶೈಕ್ಷಣಿಕ ವರ್ಷವನ್ನು ಹೊಸ ಆಸೆ ಮತ್ತು ಉತ್ಸಾಹದೊಂದಿಗೆ ಆರಂಭಿಸಿದರು.
Sunday, 30 March 2025
Padanolsavam 2025
ಕಲಿಕೋತ್ಸವ 2025















































