Friday, 16 June 2023
Friday, 2 June 2023
PRAVESHOTSAVAM 2023-24
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದ್ಯಸ್ಯರಾದ ಶ್ರೀ ಅಬ್ದುಲ್ ಲತೀಫ್ ರವರು ನೆರವೇರಿಸಿದರು. ಶಾಲಾ ನಿವೃತ್ತ ಮುಖ್ಯೋಪದ್ಯಯಿನಿಯರದ ಶ್ರೀಮತಿ ಚಂದ್ರಾವತಿ ಯವರು ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕರಾದ ಶ್ರೀ ದೇವಪ್ಪ ಶೆಟ್ಟಿಯವರು ವಹಿಸಿದರು. ಶ್ರೀ ಶಿವರಾಜ್ ಕೆದುಂಬಾಡಿ, ಅಬೂಬಕರ್ ಸಿದ್ದಿಕ್, ರೇಷ್ಮಾ ಜಯಪ್ರಕಾಶ್ ಮುಂತಾದವರು ಕಾರ್ಯಕಮಕ್ಕೆ ಶುಭ ಹಾರೈಸಿದರು. ನವಾಗತರದ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಣೆಯನ್ನು ಶ್ರೀ ಮನೋಜ್ ಕುಮಾರ್ ರವರು ಪುಸ್ತಕಗಳನ್ನು ಜಯಪ್ರಕಾಶ್ ಬಂಡಾರ ಮನೆ ಯವರು ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶೈಲೇಶ್ ರವರು ಸ್ವಾಗತಿಸಿದ ಕಾರ್ಯಕ್ರಮಕ್ಕೆ ಶಿಕ್ಷಕಿ ಶ್ರೀಮತಿ ಲಾವಣ್ಯ ವಂದಿಸಿದರು. ಶಾಲಾ ಶಿಕ್ಷಕಿ ಶ್ರೀ ಮತಿ ಚಿತ್ರಾ ಕಾರ್ಯಕ್ರಮ ನಿರೂಪಿಸಿದರು.
Subscribe to:
Posts (Atom)