ಕಲಿಕೋತ್ಸವ 2025
ಮುಡೂರ್ ತೋಕೆ : 2024-25ನೇ ಶೈಕ್ಷಣಿಕ ವರ್ಷದ ಕಲಿಕೋತ್ಸವವು 28/2/2025 ನೇ ಶುಕ್ರವಾರದಂದು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಜರುಗಿತು.
ಮೊದಲು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಪ್ರಬಂಧಕರಾದ ಶ್ರೀ
ದೇವಪ್ಪ ಶೆಟ್ಟಿಯವರು ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶೈಲೇಶ್ ರವರು
ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.3ನೇ ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್
ರವರು ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಉಮ್ಮರ್ ಕುಂಜಿ ,ಉಪಾಧ್ಯಕ್ಷರಾದ ಶ್ರೀ
ಕಾಸಿಮ್, ಮಾತೃ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಸುಮಲತ, ಉಪಾಧ್ಯಕ್ಷೆಯಾದ ಶ್ರೀಮತಿ
ಸರಿತಾರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. "ಮಕ್ಕಳ ಹಿರಿಮೆಗಳನ್ನು ರಕ್ಷಕರ
ಮುಂದೆ ಪ್ರದರ್ಶಿಸಲು ಇರುವಂತಹ ಉತ್ತಮ ವೇದಿಕೆಯಾಗಿದೆ,ಸಾರ್ವಜನಿಕ ಸಂಸ್ಥೆಗಳತ್ತ
ರಕ್ಷಕರು ಒಲವು ತೋರಿಸಲಿ" ಎಂಬುದಾಗಿ ಪ್ರಬಂಧಕರು ಶುಭ ಹಾರೈಸಿದರು. ಅರೇಬಿಕ್ ಅಲ್
ಮಾಹಿರ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿ ಕುಮಾರಿ ಆಯಿಷತ್ ಶೈಮಾ ಳನ್ನು ಈ
ಸಂದರ್ಭದಲ್ಲಿ ಅಭಿನಂದಿಸಲಾಯಿತು .ಅಧ್ಯಾಪಕಿ ಶ್ರೀಮತಿ ಚಿತ್ರರವರು ನಿರೂಪಿಸಿದ
ಕಾರ್ಯಕ್ರಮಕ್ಕೆ ಅಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿಯವರು ಧನ್ಯವಾದ ಸಮರ್ಪಿಸಿದರು. ಸಭಾ
ಕಾರ್ಯಕ್ರಮಮದ ಬಳಿಕ ಮಕ್ಕಳ ವಿವಿಧ ಚಟುವಟಿಕೆಗಳು ನೆರವೇರಿತು. ಮಕ್ಕಳ ಕಲಿಕೋತ್ಸವದ
ಕಾರ್ಯಕ್ರಮವನ್ನು ಮಕ್ಕಳೇ ನಿರೂಪಿಸಿದರು . ಈ ಸಮಯದಲ್ಲಿ ಮಕ್ಕಳ ನಡೆಸಿಕೊಟ್ಟ
ಕಾರ್ಯಕ್ರಮಗಳು ರಕ್ಷಕರ ಮನ ಸೂರೆಗೊಂಡಿತು.ಪಠ್ಯ ಪುಸ್ತಕದ ಪದ್ಯಗಳು,ಅರೇಬಿಕ್ ಪದ್ಯಗಳು,
ರಸ್ತೆ ಸುರಕ್ಷತೆಯ ಕುರಿತಾದ ಮೈಮ್, ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು ಎಂಬ
ಆಶಯದ ಹಾವು ಮುಂಗುಸಿಯ ಕಥಾ ರೂಪಕ, ಸತ್ಯವೇ ದೇವರು ಎಂದು ನಂಬಿಕೊಂಡಿರುವ ಪುಣ್ಯಕೋಟಿಯ
ಕಥಾ ರೂಪಕ,ಅಭಿನಯ ಗೀತೆ, english description, ತರಕಾರಿಯ ಕುರಿತಾದ ವಿವರಣೆ,
ಇಂಗ್ಲಿಷ್ ನಾಟಕ ಮೊದಲಾದ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿದರು.
ಸುಮಾರು 2 ಗಂಟೆಗಳಷ್ಟು ಹೊತ್ತು ನಡೆದ ಕಾರ್ಯಕ್ರಮವು ರಾಷ್ಟ್ರಗೀತೆ ಹಾಡುವುದರೊಂದಿಗೆ
ಮುಕ್ತಾಯವಾಯಿತು.