Tuesday, 14 July 2026

SCHOOL PARLIMENT ELECTION 2026

 ಶಾಲಾ ಚುನಾವಣೆ 2026

ಎಸ್.ಎಸ್.ಎ.ಎಲ್. ಪಿ ಶಾಲೆ ಮುಡೂರು ತೋಕೆಯಲ್ಲಿ ವಯಸ್ಕರ ರೀತಿಯಲ್ಲಿ ಮತದಾನವು ನಡೆಯಿತು.ಜುಲೈ 8 ರಂದು ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇರುವ 4 ಮಕ್ಕಳು ಶಾಲಾ ಮುಖ್ಯೋಪಾಧ್ಯಾಯರಿಗೆ ನಾಮ ಪತ್ರವನ್ನು ಸಲ್ಲಿಸಿದರು. ನಂತರದ ದಿನಗಳಲ್ಲಿ ಮತಗಳನ್ನು ಯಾಚಿಸಲಾಯಿತು.ಜುಲೈ 10 ರಂದು ಚುನಾವಣೆಯು ನಡೆಯಿತು. ಅಧ್ಯಾಪಕರ ನೇತೃತ್ವದಲ್ಲಿ ಶಾಲಾ ಮಕ್ಕಳೇ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಎಲ್ಲಾ ಮಕ್ಕಳು ಉತ್ಸಾಹದಿಂದಲೇ ಶಾಲಾ ಚುನಾವಣೆಯಲ್ಲಿ ಭಾಗವಹಿಸಿದರು. ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತ ಹಾಕಿದರು. ಬಳಿಕ ಚುನಾವಣಾ ಎಣಿಕಾ ಪ್ರಕ್ರಿಯೆ ಆರಂಭವಾಯಿತು. ಅತಿ ಹೆಚ್ಚು ಮತಗಳನ್ನು ಪಡೆದ ಮೊಹಮ್ಮದ್ ಮುಹಸಿನ್ ಶಾಲಾ ನಾಯಕನಾಗಿಯೂ, ನಾಫಿ ಉಪನಾಯಕನಾಗಿಯೂ ಆಯ್ಕೆಯಾದರು. ಶಾಲಾ ವಿವಿಧ ಇಲಾಖೆಯ ಮಂತ್ರಿಮಂಡಲವನ್ನು ರಚಿಸಿ ಮಂತ್ರಿಗಳನ್ನು ಆಯ್ಕೆ ಮಾಡಿ ಜವಾಬ್ದಾರಿಗಳನ್ನು ಹಂಚಲಾಯಿತು. ಬಳಿಕ ಪ್ರತಿಜ್ಞಾ ಸ್ವೀಕಾರ ನಡೆಯಿತು.





 

PTA GENERALBODY MEETING 2026

 ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ 2026

ದಿನಾಂಕ 10/07/2026 ನೇ ಶುಕ್ರವಾರದಂದು ಸರಿಯಾಗಿ 2 ಗಂಟೆಗೆ ಈ ವರ್ಷದ ಮೊದಲ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಜರುಗಿತು. ಶಾಲಾ ಪ್ರಬಂಧಕರು, ಪಿಟಿಎ ಅಧ್ಯಕ್ಷರಾದ ಶ್ರೀ ಅಬ್ದುಲ್ ಕಾಸಿಂ ,ಉಪಾಧ್ಯಕ್ಷರಾದ ಅಬೂಬಕರ್ ಸಿದ್ಧಿಕ್, ಮಾತೃ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಪ್ರೀತಿಕ ಹಾಗೂ ರಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಬಂಧಕರಾದ ಶ್ರೀದೇವಪ್ಪ ಶೆಟ್ಟಿ ಅವರು ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. .ಪಿಟಿಎ ಅಧ್ಯಕ್ಷರಾದ ಶ್ರೀ ಅಬ್ದುಲ್ ಕಾಸಿಮ್ ರವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಶಾಲಾ ಮುಖ್ಯೋಪಾಧ್ಯಯರಾದ ಶ್ರೀ ಶೈಲೇಶ್ ರವರು ಬಂದಿರುವ  ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಷಯಗಳನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು. ಕಳೆದ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ವರದಿಯನ್ನು ಅಧ್ಯಾಪಕಿ ಶ್ರೀಮತಿ ಚಿತ್ರ ರವರು ಮಂಡಿಸಿದರು. ಬಳಿಕ ನೂತನ ಪಿಟಿಎ ಅಧ್ಯಕ್ಷರ ಹಾಗೂ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ಶ್ರೀ ಅಬ್ದುಲ್ ಕಾಸಿಂ ರವರು ಪಿಟಿಎ ಅಧ್ಯಕ್ಷರಾಗಿ ,ಹಾಗೂ ಶ್ರೀ ಅಬೂಬಕ್ಕರ್ ಸಿದ್ದಿಕ್ ರವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಶ್ರೀಮತಿ ಸವಿತ ರವರು ಮಾತೃ ಸಂಘದ ಅಧ್ಯಕ್ಷೆ ಯಾಗಿಯೂ,ಶ್ರೀಮತಿ ಶೋಭಾರವರು ಉಪಾಧ್ಯಕ್ಷೆಯಾಗಿಯೂ ಆಯ್ಕೆಯಾದರು. ಬಳಿಕ ಕಾರ್ಯಕಾರಿ ಸಮಿತಿಯನ್ನು ರೂಪಿಸಲಾಯಿತು.ಅಧ್ಯಾಪಕಿ ಶ್ರೀಮತಿ ಲಾವಣ್ಯರವರು ಧನ್ಯವಾದ ಸಮರ್ಪಿಸಿದರು.



 

Saturday, 13 June 2026

Information Campaion By KSEB Vorkady

 ತಾರೀಕು 12.06.2026 ನೇ ಶುಕ್ರವಾರದಂದು KSEB ವೊರ್ಕಾಡಿ ಇದರವತಿಯಿಂದ ಶಾಲಾ ಮಕ್ಕಳಲ್ಲಿ ವಿದ್ಯುತ್ ನ ಉಪಯೋಗ , ದುರ್ಬಳಕೆ , ಸುರಕ್ಷತೆ ಮುಂತಾದುದರ ಕುರಿತು ಮಾಹಿತಿ ಶಿಬಿರವು ಜರಗಿತು. 




 

Monday, 8 June 2026

Noon Meal Sponser

 ಇಂದು 08.06.2026 ನಮ್ಮ ಶಾಲಾ ಮ್ಯಾನೇಜರ್ ಹಾಗೂ ಕುಟುಂಬಸ್ಥರು ಸೇರಿ ಶಾಲಾ ಮಕ್ಕಳಿಗೆ ಭರ್ಜರಿ ಮಧ್ಯಾಹ್ನದೂಟವನ್ನು ಒದಗಿಸಿಕೊಟ್ಟರು. ಪಾಲವ್,ಸಲಾಡ್,ಪೂರಿ,ಪನೀರ್ ಕರಿ, ಗೋಬಿ ಮಂಚೂರಿ, ಉಪ್ಪಿನಕಾಯಿ,ಐಸ್ ಕ್ರೀಮ್, ಪಾಯಸ ,ಹೋಳಿಗೆ ಮುಂತಾದವುಗಳಿಂದ ಭೋಜನವು ಸಮೃದ್ಧವಾಗಿತ್ತು. ಈ ಒಂದು ಭೋಜನದ ವ್ಯವಸ್ಥೆ ಮಾಡಿಕೊಟ್ಟ ನಿಮಗೆ ಶಾಲಾ ಪರವಾಗಿಯೂ, ಮಕ್ಕಳ ಪರವಾಗಿಯೂ ಅನಂತಾನಂತ ಧನ್ಯವಾದಗಳು🙏🏻



 

ಪರಿಸರ ದಿನಾಚರಣೆ 2026

 ಎಸ್ ಎಸ್ ಎ ಎಲ್ ಪಿ ಶಾಲೆ  ಮುಡೂರುತೋಕೆಯಲ್ಲಿ ಪರಿಸರ ದಿನಾಚರಣೆ ಯನ್ನು ಆಚರಿಸಲಾಯಿತು.ಶಾಲಾ ಅಸೆಂಬ್ಲಿಯಲ್ಲಿ ಮುಖ್ಯೋಪಾಧ್ಯಾಯರು ಪರಿಸರ ದಿನದ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಟ್ಟರು.ಪರಿಸರವನ್ನು ಸಂರಕ್ಷಿಸುವ ಪ್ರತಿಜ್ಞೆ ಕೈಗೊಳ್ಳಲಾಯಿತು.ತರಗತಿ ಮಟ್ಟದಲ್ಲಿ ಪೋಸ್ಟರ್ ನಿರ್ಮಾಣ,ಪರಿಸರಕ್ಕೆ ಸಂಬಂಧಿಸಿದ ಚಿತ್ರ ರಚನೆ, ಘೋಷಣಾ ವಾಕ್ಯಗಳ ರಚನೆ  ಮೊದಲಾದ ಚಟುವಟಿಕೆಗಳನ್ನು ನಡೆಸಲಾಯಿತು. ಕೃಷಿ ಭವನದಿಂದ ಲಭಿಸಿದ ಗಿಡವನ್ನು ಶಾಲಾ ಪರಿಸರದಲ್ಲಿ ನಡಲಾಯಿತು.ಮಕ್ಕಳು ತಂದಂತಹ ಗಿಡಗಳನ್ನು ಶಾಲಾ ಕೃಷಿ ತೋಟದಲ್ಲಿ ಮಕ್ಕಳೇ ನೆಟ್ಟು ಸಂಭ್ರಮಿಸಿದರು.



 

ಶಾಲಾ ಪ್ರವೇಶೋತ್ಸವ 2026-27

 
ಎಸ್.ಎಸ್.ಎ.ಎಲ್.ಪಿ.ಶಾಲೆ ಮುಡೂರುತೋಕೆ ಯಲ್ಲಿ ದಿನಾಂಕ 1-6-2026 ನೇ ಸೋಮವಾರದಂದು 2026-27 ನೇ  ಶೈಕ್ಷಣಿಕ ವರ್ಷದ ಪ್ರವೇಶೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಸಮಯ ಸರಿಯಾಗಿ 9.45 ಕ್ಕೆ ಶಾಲಾ ಅಸೆಂಬ್ಲಿಯನ್ನು ನಡೆಸಲಾಯಿತು. ಸೈಬರ್ ಸೇಫ್ಟಿ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ನಂತರ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶೈಲೇಶ್ ರವರು ಬಂದಿರುವ ಅತಿಥಿಗಳನ್ನು ಸ್ವಾಗತಿಸಿದರು.ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ದೇವಪ್ಪ ಶೆಟ್ಟಿಯವರು ನೆರವೇರಿಸಿದರು.LSS ವಿಜೇತೆಯಾದ ಝಲ್ಫಳನ್ನು  ಈ ಸಮಯದಲ್ಲಿ ಗೌರವಿಸಲಾಯಿತು.1 ರಿಂದ 4 ನೇ ತರಗತಿಯ ಮಕ್ಕಳಿಗೆ ಉಚಿತವಾಗಿ ನೋಟ್ಸ್ ಪುಸ್ತಕಗಳನ್ನು ಶ್ರೀ ಜಯಪ್ರಕಾಶ ಭಂಡಾರ ಮನೆ ಇವರು ನೀಡಿದರು. 1ನೇ ತರಗತಿ ಮಕ್ಕಳಿಗೆ ಉಚಿತ 23 ಶಾಲಾ ಬ್ಯಾಗ್ ಗಳನ್ನು ಗೋಲ್ಡ್ ಸ್ಟಾರ್ ಫ್ರೆಂಡ್ಸ್ ಕ್ಲಬ್ ನವರು , 1 ಬ್ಯಾಗ್ ಅನ್ನು ಶ್ರೀ ಲೋಕೇಶ್ ಪಾವಳ ಹಾಗೂ 1 ಬ್ಯಾಗ್ ಅನ್ನು ಅಧ್ಯಾಪಕಿ ಚಿತ್ರ ಇವರು ವಿತರಿಸಿದರು.ಗೋಲ್ಡ್ ಸ್ಟಾರ್ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರು ಶ್ರೀ ಝಾಹಿದ್ ರವರು ಉಪಸ್ಥಿತರಿದ್ದರು.ಮಾತೃ ಸಂಘದ ಅಧ್ಯಕ್ಷೆ  ಶ್ರೀಮತಿ ಪ್ರೀತಿಕ ಹಾಗೂ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಅಬೂಬಕ್ಕರ್ ಸಿದ್ದೀಕ್ ರವರು ಶುಭ ಹಾರೈಸಿದರು. ಪಿ. ಟಿ. ಎ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಧ್ಯಾಪಕಿ ಶ್ರೀ ಲಾವಣ್ಯ ರವರು ನಿರೂಪಿಸಿದರು. ಅಧ್ಯಾಪಕಿ ಚಿತ್ರರವರು ವಂದಿಸಿದರು.