Friday, 22 December 2017

Christmass and new year celebration

ವರ್ಕಾಡಿ ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ Christmas ಹಬ್ಬವನ್ನು ಆಚರಿಸಲಾಯಿತು. ಮಕ್ಕಳಿಗೆ star ನಿರ್ಮಾಣ ರೀತಿ ತೋರಿಸಿಕೊಡಲಾಯಿತು. ಮತ್ತು ಮದ್ಯಾಹ್ನದ ಭೋಜನ ವ್ಯವಸ್ಥೆಯನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರವತಿ ಯವರು ತಮ್ಮ ಪುತ್ರನ ವಿವಾಹದ ಸವಿ ನೆನಪಿನ ಸಲುವಾಗಿ ಕೊಡುಗೆಯಾಗಿ ನೀಡಿದರು.

Thursday, 16 November 2017

Tuesday, 14 November 2017

CHILDRENS DAY 2017

ಮಕ್ಕಳ ಹಬ್ಬ 2017 

ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಬಾಲ ಸಭೆ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯ ರು ನಡೆಸಿದರು. 

 

 

Saturday, 30 September 2017

Monday, 4 September 2017

Onam celebration 2017

ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ಓಣಂ ಆಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೂ ರಕ್ಷಕರಿಗೂ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

Tuesday, 15 August 2017

71st Indian independence Celebration

71  ನೇ ಸ್ವಾತಂತ್ರೋತ್ಸವ ಆಚರಣೆ  
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಶಾಲೆಯಲ್ಲಿ 71 ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆಯನ್ನು ಬಹಳ ವಿಜೃಂಭಣೆ ಯಿಂದ ಆಚರಿಸಲಾಯಿತು. ಬೆಳಗ್ಗೆ 9.30 ಕ್ಕೆ ಶಾಲಾ ರಕ್ಷಕ-ಶಿಕ್ಷಕ  ಸಂಘದ ಅಧ್ಯಕ್ಷರಾದ ಶ್ರೀ ಶಿವರಾಜ್ ಭಟ್ಟ್ ರವರು ಧ್ವಜಾರೋಹಣ ನಡೆಸಿದರು. ಬಳಿಕ ಸಭಾ ಕಾರ್ಯಕ್ರಮವು ಜರಗಿತು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಪ್ರಬಂಧಕರಾದ ಶ್ರೀ ದೇವಪ್ಪ ಶೆಟ್ಟಿ ಯವರು ವಹಿಸಿದರು ಅತಿಥಿಗಳಾಗಿ ಶಾಲಾ ಹಳೆ ವಿದ್ಯಾರ್ಥಿ ಸಂಘ ದ ಅಧ್ಯಕ್ಷ ಮುಸ್ತಾಫ್ತ್ , ಮಾಜಿ ಪಿ ಟಿ ಎ ಅಧ್ಯಕ್ಷರುಗಳಾದ ಸೋಮನಾಥ್ ಕಾರಂತ್ ,ಅಬ್ದುಲ್ ರಹಿಮಾನ್ ಮುಂತಾದವರು ಭಾಗವಹಿಸಿದ ಕಾರ್ಯಕ್ರಮಕ್ಕೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಕೆ ಯವರು ಸ್ವಾಗತಿಸಿ ಶಾಲಾ ಶಿಕ್ಷಕಿ ಶ್ರೀಮತಿ ಶಶಿಕಲಾ ರವರು ಧನ್ಯವಾದವಿತ್ತರು . ಶಾಲಾ ಶಿಕ್ಷಕ ಶೈಲೇಶ್ ಹಾಗು ಶಿಕ್ಷಕಿಯಾದ ಫೌಸಿಯ  ಕಾರ್ಯಕ್ರಮದ  ನಿರೂಪಣೆಯನ್ನು ನಡೆಸಿಕೊಟ್ಟರು. ಇದರೊಂದಿಗೆ ಶಾಲಾ ವಿದ್ಯಾರ್ಥಿಗಳಿಕೆ ಶಾಲಾಮಟ್ಟದಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಣೆಯು ಜರಗಿತು. ಬಳಿಕ ಶಾಲಾ ಪುಟಾಣಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕಿ ಶ್ರೀಮತಿ ಚಿತ್ರಾ ರವರು ನಡೆಸಿಕೊಟ್ಟರು . 

ಕಾರ್ಯಕ್ರಮದ ಕೆಲವು ಚಿತ್ರ ಗಳು 

 
  

Tuesday, 1 August 2017

ತರಕಾರಿ ಬೀಜ ವಿತರಣೆ  
ವರ್ಕಾಡಿ ಕೃಷಿ ಇಲಾಖೆಯಿಂದ ದೊರೆತ ಉಚಿತ ತರಕಾರಿ ಬೀಜವನ್ನು ವಿತರಿಸುವುದು 





Monday, 3 July 2017

PTA General Body

ಶಾಲಾ ರಕ್ಷಕ ಶಿಕ್ಷಕ ಮಹಾಸಭೆ 
ತಾರೀಕು 30/06/2017 ರ ಶುಕ್ರವಾರದಂದು ಅಪರಾಹ್ನ ೩ ಗಂಟೆಗೆ ಸರಿಯಾಗಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಜರಗಿತು. ೨೦೧೭-೧೮  ಶಾಲಿನ ಶೈಕ್ಷಣಿಕ ವರ್ಷದ ನೂತನ ಪಿ ಟಿ ಎ ಅಧ್ಯಕ್ಷರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಸಿ ನೂತನ ಅಧ್ಯಕ್ಷರಾಗಿ ಶ್ರೀ ಶಿವರಾಜ್ ಬೋಳಪದವು ಹಾಗು ಉಪ ಪಿ ಟಿ ಎ ಅಧ್ಯಕ್ಷರಾಗಿ ಶ್ರೀ ಮೊಹಮ್ಮದ್ ಕೆದುಂಬಾಡಿ ರವರು ಆಯ್ಕೆ ಗೊಂಡರು. ಹಾಗು ಮಾತೃ ಪಿ ಟಿ ಎ ಅಧ್ಯಕ್ಷರಾಗಿ ಶ್ರೀಮತಿ ಮಮತಾ ರವರು ಉಪ ಮಾತೃ ಪಿ ಟಿ ಎ ಯಾಗಿ ಶ್ರೀಮತಿ  ಮಂಜುಳಾ ರವರು ಆಯ್ಕೆ ಗೊಂಡರು.  ಕಾರ್ಯಕ್ರಮಕ್ಕೆ ಶುಭ ಹಾರೈಸಲು ಶಾಲಾ ಪ್ರಬಂಧಕರು ಹಾಗು ಮಾಜಿ ಪಿ ಟಿ ಎ ಅಧ್ಯಕ್ಷರು ಉಪಸ್ಥಿತರಿದ್ದರು. ಇದರೊಂದಿಗೆ ಶಾಲಾ ವಿದ್ಯಾರ್ಥಿಗಳಿಗಿರುವ  ಉಚಿತ ಸಮವಸ್ತ್ರವನ್ನು ರಕ್ಷಕರ ಸಾನಿಧ್ಯದಲ್ಲಿ ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿ ಶಾಲಾ ಶಿಕ್ಷಕಿ ಶಶಿಕಲಾರವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಮುಕ್ತಯವಾಯಿತು.

Saturday, 24 June 2017

ELECTION 2017

ಮುಡೂರ್ ತೋಕೆಯಲ್ಲಿ ಚುನಾವಣೆ 2017
ವರ್ಕಾಡಿ ಜೂನ್ 24 : ತಾರೀಕು 23/06/2017 ರಂದು ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆಯಲ್ಲಿ 2017-18 ನೇ ಸಾಲಿನ ಮಕ್ಕಳ ಪಾರ್ಲಿಮೆಂಟ್ ಚುನಾವಣೆಯು ವಯಸ್ಕರ ಮತದಾನದ ಮಾದರಿಯಲ್ಲಿ ನಡೆಸಲಾಯಿತು. ಶಾಲಾ ನಾಯಕನಾಗಿ ಅಬ್ದುಲ್ ರಹಿಮಾನ್ ಸಾಫ್ವಾನ್ ಹಾಗು ಉಪನಾಯಕನಾಗಿ ಇಬ್ರಾಹಿಂ ಉದೈಫ್ ಆಯ್ಕೆ ಗೊಂಡರು. ಬಳಿಕ ಮಂತ್ರಿ ಮಂಡಲ ರಚಿಸಿ ಇನ್ನಿತರ ಮಂತ್ರಿಗಳನ್ನು ಆರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾದ್ಯಾಯರು ಹಾಗು ಶಿಕ್ಷಕರು ಉಪಸ್ಥಿತರಿದ್ದರು. 
ನಾಮಪತ್ರ ಸಲ್ಲಿಕೆ













 

Friday, 9 June 2017


THANK YOU. Mr.Jayaprakash & Mr.Asif for free note book to Childres.

Free notebook Distribution

ಉಚಿತ ನೋಟ್ ಪುಸ್ತಕ ವಿತರಣೆ  
ವರ್ಕಾಡಿ : ಜೂನ್ 9 : ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರು ತೋಕೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಶಾಲಾ ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶ್ರೀ ಜಯಪ್ರಕಾಶ್ ತೌಡುಗೋಳಿ ಮತ್ತು ಹಳೇ ವಿದ್ಯಾರ್ಥಿ ಸಂಘದ ಸದಸ್ಯ ಆಸೀಫ್ ತೌಡುಗೋಳಿಯವರು ಉಚಿತವಾಗಿ ನೀಡಿದರು.

 

Tuesday, 6 June 2017

ವಿಶ್ವ ಪರಿಸರ ದಿನ 2017-18

ವಿಶ್ವ ಪರಿಸರ ದಿನ 2017-18

ಕೆಲವು ಚಿತ್ರಗಳು...




Monday, 5 June 2017

PRAVESHOTSAVA 2017-18

 ಶಾಲಾ ಪ್ರವೇಶೋತ್ಸವ

ಶಾಲಾ ಪ್ರವೇಶೋತ್ಸವ : ವರ್ಕಾಡಿ ಜೂನ್ 1: ಶ್ರೀ ಸುಭ್ರಮಣ್ಯ ಎ ಎಲ್ ಪಿ ಶಾಲೆ ಮುಡೂರುತೋಕೆಯಲ್ಲಿ 2017-18 ನೇ ಸಾಲಿನ ಶಾಲಾ ಪ್ರವೇಶೋತ್ಸವವು ಜರಗಿತು. ಪ್ರವೇಶೋತ್ಸವದ ಉಧ್ಫಾಟನೆಯನ್ನು ವಾರ್ಡ ಸದಸ್ಯೆ ಶ್ರೀಮತಿ ಜಸಿಂತ ಡಿಸೋಜರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಭಂದಕರು,ರಕ್ಷಕ-ಶಿಕ್ಷಕ ಸಂಘದ ಅದ್ಯಕ್ಷರು ಹಾಗು ಇತರರು ಉಪಸ್ತಿತರಿದ್ದರು.
ವಿಧ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗು ಪಾಠ ಪುಸ್ತಕ ವಿತರಿಸಲಾಯಿತು.

Saturday, 11 March 2017

ಜಾರುಬಂಡಿ ಮತ್ತು ಶಾಲಾ ಮಟ್ಟದ ಹಲೋ ಇಂಗ್ಲೀಷ್ ಉಧ್ಘಾಟನೆ


















ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರುತೋಕೆ ಯಲ್ಲಿ ತಾರೀಕು 10 ಮಾರ್ಚ್ 2017 ರಂದು ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಜಾರುಬಂಡಿಯ ಹಾಗು ಹಲೋ ಇಂಗ್ಲೀಷ್ ನ ಉದ್ಘಾಟನಾ ಕಾರ್ಯಕ್ರಮ ಜರಗಿತು. ಜಾರುಬಂಡಿಯ ಉದ್ಙಾಟನೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಅಬ್ದುಲ್ ರಹೀಮಾನ್ ಹಾಗು ಹಲೋ ಇಂಗ್ಲೀಷ್ ನ ಉದ್ಘಾಟನೆಯನ್ನು ಮಂಜೇಶ್ವರ ಬ್ಲೋಕ್ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಎ ಕೆ ಯಂ ಅಶ್ರಫ್ ರವರು ನಡೆಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ವಾರ್ಡ ಸದಸ್ಯೆ ಶ್ರೀಮತಿ ಜೆಸಿಂತ ಡಿಸೋಜರವರುವಹಿಸಿ ಕಾರ್ಯಕ್ರಮಕ್ಕೆ ಶುಭಾಸಂಷನೆ ನೀಡಿದರು. ಶಾಲಾ ಅಭಿವೃಧಿ ಸಮೀತಿಯ ಕಾರ್ಯದರ್ಶಿ ಶ್ರೀ ತೃಶಾಂತ್, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಮುಸ್ತಫ್ ತೋಕೆ, ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ ಮುಂತಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಜೇಶ್ವರ ಉಪಜಿಲ್ಲೆಯ BPO ಶ್ರೀ ವಿಜಯ ಕುಮಾರ್ ರವರು ಕಾರ್ಯಕ್ರಮದ ಅತಿಥಿಗಳಾದ ಕಾರ್ಯಕ್ರಮವನ್ನು ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿದರು ಹಾಗು ಹಲೋ ಇಂಗ್ಲೀಷ್ ನ ಭಾಗವಾಗಿ ಶಾಲಾ ಶಿಕ್ಷಕಿ ಶ್ರೀಮತಿ ಚಿತ್ರಾರವರು ಮಕ್ಕಳಿಗೊಂದು ತರಬೇತಿಯನ್ನು ನೀಡಿದರು. ಈ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕ ಶ್ರೀ ಶೈಲೇಶ್ ರವರು ಧನ್ಯವಾದ ಹೇಳಿದರು.