Monday, 30 January 2017

ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ 

ತಾರೀಕು 27/01/2017 ನೇ ಶುಕ್ರವಾರ 11 ಗಂಟೆಗೆ ಸರಿಯಾಗಿ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ದ ಶಾಲಾಮಟ್ಟದ ಕಾರ್ಯಕ್ರಮ ನಮ್ಮ ಶಾಲೆಯಲಿ ಜರಗಿತು. ಸಾರ್ವಜನಿಕ ಶಿಕ್ಷಣ ವಲಯವನ್ನು ಬಲಗೊಳಿಸುವ ಸರಕಾರದ ಉದ್ದೇಶಕನುಸಾರವಾಗಿ ಹಳೆವಿದ್ಯಾರ್ಥಿಗಳ,ರಕ್ಷಕರು,ಊರವರ ಮಹಾಸಂಗಮ ನಡೆಯಿತು. 

Tuesday, 24 January 2017

Saturday, 21 January 2017

4ನೇ ತರಗತಿಯ ವಿದ್ಯಾರ್ಥಿಗಳಿಂದ  ಅಂಚೆ ಕಛೇರಿ ಸಂದರ್ಶನ 

೪ನೇ ತರಗತಿಯ ಕನ್ನಡ ಪಾಠ ಭಾಗಕ್ಕೆ ಸಂಬಂಧಿಸಿ ಶ್ರೀ ಸುಬ್ರಹ್ಮಣ್ಯ ಕಿರಿಯ ಅನುದಾನಿತ ಶಾಲೆ ಮುಡೂರ್ ತೋಕೆ ಯಾ ವಿದ್ಯಾರ್ಥಿ ಗಳು ಸಮೀಪದ ನರಿಂಗಾನ ಅಂಚೆ ಕಛೇರಿ ಸಂದರ್ಶಿಸಿದರು . ಹಾಗು ತಾವು ಕೈಗೊಳ್ಳುವ ಶೈಕ್ಷಣಿಕ  ಪ್ರವಾಸದ ಕುರಿತು ಅಮ್ಮನಿಗೆ ಪಾತ್ರ ಬರೆದು ಪಾತ್ರವನ್ನು ಪೋಸ್ಟ್ ಮಾಡಿದರು . 


Thursday, 12 January 2017

೨೦೧೭ ನೇ ಸಾಲಿನ  ಮೊದಲ ಪಿ ಟಿ ಎ ಮಹಾಸಭೆ ಹಾಗು ಸಿ ಪಿ ಟಿ ಎ 

ತಾರೀಕು ೧೨/೦೧/೨೦೧೭ ರ ಗುರುವಾರದಂದು ನಮ್ಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾ ಸಭೆ ಹಾಗು ತರಗತಿ ಪಿ ಟಿ ಎ ಸಭೆ ಯು ಜರಗಿತು. ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ ಹಾಗು ಪಿ ಟಿ ಎ ಅಧ್ಯಕ್ಷ ರಾದ ಶ್ರೀ ಅದ್ಬುಲ್ ರಹಿಮಾನ್ ರವರು ಉಪಸ್ಥಿತ ರಿದ್ದರು. ಶಾಲಾ ಹಿರಿಯ ಶಿಕ್ಷಕಿ ಶ್ರೀ ಮತಿ ಶಶಿಕಲಾ ರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಕ್ಷಕರಿಗೂ ಶಾಲಾ ವಿದ್ಯಾರ್ಥಿಗಳಿಗೂ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿತು .