೨೦೨೧-೨೨ ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತೀರ್ಣನಾದ ಶ್ರೀನಿಧಿ ಗೆ ಸನ್ಮಾನ ಕಾರ್ಯಕ್ರಮ...
Thursday, 17 March 2022
ಬೀಳ್ಕೊಡುಗೆ ಸಮಾರಂಭ
ವರ್ಕಾಡಿ : ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆಯಲ್ಲಿ ಶಾಲಾ ಮುಖ್ಯಶಿಕ್ಷಕಿ ಶ್ರೀ ಮತಿ ಶಶಿಕಲಾ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಜರಗಿತು. ಸುಮಾರು 30 ವರ್ಷಗಳ ಕಾಲ ಶಿಕ್ಷಕಿಯಾಗಿಯೂ ಮುಖ್ಯೋಪಾಧ್ಯಾಯಿನಿಯಾಗಿಯೂ ಸೇವೆ ಸಲ್ಲಿಸಿ ಇದೇ ಮಾರ್ಚ್ 31ರಂದು ಸೇವೆಯಿಂದ ನಿವೃತ್ತಿ ಹೊಂದುವ ಶಶಿಕಲಾ ಟೀಚರ್ ರವರಿಗೆ ಶಾಲಾ ಪರವಾಗಿ ಬೀಳ್ಕೊಡುಗೆ ಸಮಾರಂಭ ವನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯ ಶ್ರೀ ಅಬ್ದುಲ್ ಲತೀಫ್ ನೆರವೇರಿಸಿದರು. ಮಂಜೇಶ್ವರ ಉಪಜಿಲ್ಲಾ ಬಿ. ಪಿ. ಸಿ ಶ್ರೀ ವಿಜಯಕುಮಾರ್ ಪವಾಳ ಹಾಗೂ ವಾರ್ಡ್ ಸದಸ್ಯ ಶ್ರೀ ಶಿವರಾಜ್ ರವರು ಕಾರ್ಯಕ್ರಮದ ಅತಿಥಿಗಳಾದರು. ನಿವೃತ್ತ ಮುಖ್ಯಶಿಕ್ಷಕಿ ಶ್ರೀಮತಿ ಚಂದ್ರವತಿ, ಶ್ರೀಮತಿ ಕಸ್ತೂರಿ ದೇವಿ ಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿಯವರು ವಹಿಸಿದರು. ಶಾಲಾ ಶಿಕ್ಷಕಿ ಚಿತ್ರಾ ರವರು ಸ್ವಾಗತಿಸಿ, ಶಿಕ್ಷಕಿ ಲಾವಣ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮಕ್ಕೆ ಶಿಕ್ಷಕಿ ಫೌಸಿಯ ರವರು ಧನ್ಯವಾದವಿತ್ತರು.
MASTER OF CEREMONY |