![]() |
Nafeesath Hafilah |
Tuesday, 23 August 2022
Monday, 15 August 2022
ಕಾರ್ಯಕಾರಿ ಸಮಿತಿಯ ಸಭೆ
ಇಂದಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚರ್ಚಿಸಿದ ವಿಷಯಗಳು ಮತ್ತು ಕೈಗೊಂಡ ತೀರ್ಮಾನಗಳು
1️⃣ ಶಾಲಾ ತರಕಾರಿ ತೋಟ
ತಾರೀಕು 28/08/2022 ಆದಿತ್ಯವಾರದಂದು ಬೆಳಗ್ಗೆ 8.30ರಿಂದ ಶಾಲಾ ಮಕ್ಕಳ ಹೆತ್ತವರು ಅಧ್ಯಾಪಕರು ಸೇರಿ ಶ್ರಮಧಾನದ ಮೂಲಕ ಕೆಲಸ ನಿರ್ವಹಿಸುವುದು. ತರಕಾರಿ ತೋಟದ ಆವರಣ ಗೋಡೆಗೆ ತಗಲುವ ಖರ್ಚು ತಮ್ಮಿಂದ ಸಾಧ್ಯವಾದ ಮೊತ್ತವನ್ನು ನೀಡಿ ಎಲ್ಲರೂ ಸಹಕರಿಸುವುದು.
2️⃣ ಶಾಲಾ ಹಳೆವಿದ್ಯಾರ್ಥಿ ಸಂಘದ ಪುನಃರಚನೆ
ಓಣಂ ರಜೆಯ ಬಳಿಕ ಸಭೆ ಕರೆದು ಹೊಸ ಸಮಿತಿಯನ್ನು ರಚಿಸುವುದು.
3️⃣ ಶಾಲಾ ವಾರ್ಷಿಕೋತ್ಸವ ಮತ್ತು ನೂತನ ವೇಧಿಕೆಯ ನಿರ್ಮಾಣ
ಫೆಬ್ರವರಿ ತಿಂಗಳ ಕೋಣೆಯವರದಲ್ಲಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳುವುದು. ಅದರ ಮುಂಚೂಣಿಯಾಗಿ ಒಂದು ಸ್ಟೇಜ್/ತರಗತಿ ಕೋಣೆ ನಿರ್ಮಾಣ
4️⃣ ಓಣಂ ಹಬ್ಬದ ಆಚರಣೆ ಪ್ರತಿವರ್ಷದಂತೆ ಹಬ್ಬದ ಆಚರಣೆಯೊಂದಿಗೆ ಮಕ್ಕಳ ಹೆತ್ತವರಿಗೂ ಸ್ಪರ್ಧೆ ನಡೆಸಲು ತೀರ್ಮಾನಿಸುವುದು.
5️⃣ ವಿವಿಧ fair ಗಳಲ್ಲಿ ಮಕ್ಕಳ ಭಾಗವಹಿಸುವಿಕೆ
ಉಪಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಬೇಕಾದ ಸಾಮಗ್ರಿಗಳನ್ನು ಖರೀದಿಸಲು ತಗಲುವ ಖರ್ಚು ತರಕಾರಿ ತೋಟ ನಿರ್ಮಾಣಕ್ಕೆ ದೊರೆತ ಹಣ ಮತ್ತು ಬಾಕಿ ಮೂಲಗಳಿಂದ ಸಂಗ್ರಹಿಸಿದ ಹಣವನ್ನು ಉಪಯೋಗಿಸುವುದು.
ಮುಡೂರುತೋಕೆ ಶಾಲೆಯಲ್ಲಿ ಸ್ವಾತಂತ್ರೋತ್ಸವ 2022
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ ವಿಜೃಂಭಣೆಯಿಂದ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಸುನ್ನಂಗಳ ವಾರ್ಡ್ ಸದಸ್ಯ ಶ್ರೀ ಅಬ್ದುಲ್ ಲತೀಫ್ ರವರು ಧ್ವಜಾರೋಹಣಗೈದರು. ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ, ಕೇದುಂಬಾಡಿ ವಾರ್ಡ್ ಸದಸ್ಯ ಶ್ರೀ ಶಿವರಾಜ್ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಾಲಾ ಮಕ್ಕಳು, ಮಕ್ಕಳ ಹೆತ್ತವರು ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಕಾರ್ಯಕ್ರಮದ ಭಾಗಿಯದರು.