![]() |
Pre-Primary Section |
![]() |
4th Std Students |
ರಕ್ಷಕ-ಶಿಕ್ಷಕ ಸಂಘದ ಮಹಾಸಭೆ: ನೂತನ ಸಮಿತಿ ರೂಪೀಕರಣ
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ನೂತನ ಪಿ.ಟಿ.ಎ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಪಿ.ಟಿ. ಎ ನೂತನ ಅಧ್ಯಕ್ಷರಾಗಿ ನವೀನ್ ,ಉಪಾಧ್ಯಕ್ಷರಾಗಿ ಉಸ್ಮಾನ್ ರವರು ಆಯ್ಕೆಯಾದರು. ಬಳಿಕ ಮಾತೆಯರ ನೂತನ ಸಮಿತಿಯನ್ನೂ ರಚಿಸಲಾಯಿತು. ಅಧ್ಯಕ್ಷೆಯಾಗಿ ಸರಿತಾ, ಉಪಾಧ್ಯಕ್ಷೆಯಾಗಿ ರೇಖಾ ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯರಾದ ಶೈಲೇಶ್ ಸ್ವಾಗತಿಸಿದ ಸಭೆಗೆ ಅಧ್ಯಾಪಿಕೆ ಲಾವಣ್ಯ ವಂದಿಸಿದರು.
![]() |
New Committee |
ಶಾಲಾ ಮಂತ್ರಿ ಸಭೆ ರಚನೆ
ವರ್ಕಾಡಿ: ಎಸ್.ಎಸ್.ಎ. ಎಲ್.ಪಿ ಶಾಲೆ ಮುಡೂರು ತೋಕೆ ಶಾಲೆಯಲ್ಲಿ 2023ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆಯು ಜರಗಿತು. ಶಾಲಾ ಮಕ್ಕಳೇ ಪ್ರತಿನಿದಿಗಳಗಿ ಅವರೇ ಮತದರರಾಗಿ ಅವರಿಂದಲೇ ಚುನಾವಣಾ ಅಧಿಕಾರಿಗಳನ್ನು ಆರಿಸಿ ವಯಸ್ಕರ ಮತದಾನದ ರೀತಿಯಲ್ಲಿ ಚಟುವಟಿಕೆ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಿಕೆಯರು ಚಟುವಟಿಕೆಗೆ ನೇತೃತ್ವದ ವಹಿಸಿದರು. ಚುನಾವಣೆಯ ಬಳಿಕ ಮತ ಎಣಿಕೆ, ಪ್ರಮಾಣವಚನ ಸ್ವೀಕಾರ ಮುಂತಾದ ಹಂತಗಳ ಮೂಲಕ ಮಕ್ಕಳು ಹಾದುಹೋದರು. ಶಾಲಾ ನಾಯಕನಾಗಿ ಮೊಹಮ್ಮದ್ ಮನಾಸ್ ಹಾಗೂ ಉಪನಾಯಕಿಯಾಗಿ ವೃದ್ಧಿ ಆಯ್ಕೆಗೊಂಡರು. ಅದೇರೀತಿ ಇತರ ಚುನಾಯಿತ ಪ್ರತಿನಿಧಿಗಳಿಗೆ ವಿವಿಧ ಜವಾಬ್ದಾರಿ ಗಳನ್ನು ಹಂಚಿಕೊಡಲಾಯಿತು.
ಪ್ರಥಮ - ವೃದ್ಧಿ | ದ್ವಿತೀಯ - ಸಾದಿಕಾ ನಿಶಾ | ತೃತೀಯ - ಸೌಜನ್ಯ | ಅಭಿನಂದನೆಗಳು👏👏👏 |