Tuesday, 15 August 2023
Independence Day 2023 Celebration
ವರ್ಕಾಡಿ : ಇಲ್ಲಿನ ಎಸ್.ಎಸ್.ಎ. ಎಲ್.ಪಿ.ಶಾಲೆ ಮುಡೂರುತೋಕೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್ ರವರು ಧ್ವಜಾರೋಹಣ ಗೈದರು. ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಹರಿತ ಕರ್ಮ ಸೇನಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು.ಸ್ವಾತಂತೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳ ಬಹುಮಾನ ವಿತರಣೆ ಕೂಡ ಜರಗಿತು. ಶಾಲಾ ಮಾತೃ ಪಿಟಿಎ ಅದ್ಯಕ್ಷೆ ಶ್ರೀಮತಿ ಸರಿತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಯರದ ಶ್ರೀ ಶೈಲೇಶ್ ಸ್ವಾಗತಿಸಿದ ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಚಿತ್ರಾ ನೀರೂಪಿಸಿ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ವಂದಿಸಿದರು.
ALL ARE WELCOME
ಆತ್ಮಿಯ ರಕ್ಷಕರೇ...
ಅಗೋಸ್ಟ್ ತಿಂಗಳ 15 ನೇ ತಾರೀಕು ಎಲ್ಲರಿಗೂ ತಿಳಿದಿರುವಂತೆ ದೇಶದೆಲ್ಲೆಡೆ ಪ್ರತಿಯೊಬ್ಬ ದೇಶ ಪ್ರೇಮಿಯು ಹೆಮ್ಮೆಯಿಂದ ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ಯು ಇನ್ನು ಕೆಲವೇ ದಿನಗಳನ್ನು ಬರಲಿರುವುದು. ಅದರ ಅಂಗವಾಗಿ ಎಲ್ಲಾ ವರ್ಷದಂತೆ ಈ ವರ್ಷವೂ ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರೊಂದಿಗೆ ಪ್ರಿ ಪ್ರೈಮರಿ ಮಕ್ಕಳ ತರಗತಿ ಕೊಠಡಿಯ ಉದ್ಘಾಟನೆಯನ್ನು ಕೂಡ ನಿಶ್ಚಯಿಸಿದ್ದೇವೆ. ಸುನ್ನಂಗಳ ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್ ರವರು ಧ್ವಜಾರೋಹಣ ಹಾಗೂ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿಯವರು ವಹಿಸಲಿದ್ದಾರೆ. ಕೇದುಂಬಾಡಿ ವಾರ್ಡ್ ಸದಸ್ಯರಾದ ಶ್ರೀ ಶಿವರಾಜ್, ಶಾಲಾ ಪಿ. ಟಿ.ಎ ಅಧ್ಯಕ್ಷರಾದ ಶ್ರೀ ನವೀನ್, ಯಂ.ಪಿ.ಟಿ.ಎ ಅಧ್ಯಕ್ಷೆ ಸರಿತಾ ಮುಂತಾದವರು ಶುಭ ಹಾರೈಸಲಿರುವರು. ಈ ಕಾರ್ಯಕ್ರಮ ಕ್ಕೆ ತಮಗೆಲ್ಲರಿಗೂ ಹೃತ್ಪೂರ್ವಕವಾಗಿ ಸ್ವಾಗತ Baಯಸುತ್ತಿದ್ದೇವೆ.