Thursday, 9 March 2017
Monday, 27 February 2017
ಹಳೆ ವಿದ್ಯಾರ್ಥಿಗಳ ಸಂಗಮ
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಯಲ್ ಪಿ ಶಾಲೆ ಮುಡೂರುತೋಕೆಯಲ್ಲಿ ತಾರೀಕು 26 ಫೆಬ್ರವರಿ 2017ರಂದು ಅಪರಾಹ್ನ 2 ಗಂಟೆಗೆ ಸರಿಯಾಗಿ ಹಳೆ ವಿದ್ಯಾರ್ಥಿಗಳ ಸಂಗಮದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮೆನೇಜರರಾದ ಶ್ರೀಯುತ ದೇವಪ್ಪ ಶೆಟ್ಟಿವಹಿಸಿದರು. ಶಾಲಾ ಪಿ ಟಿ ಎ ಅದ್ಯಕ್ಷ ಶ್ರೀ ಅಬ್ದುಲ್ ರಹಿಮಾನ್ ಮಾಜಿ ಪಿ ಟಿ ಎ ಅದ್ಯಕ್ಷ ಶ್ರೀ ಸೋಮನಾಥ ಕಾರಂತ ಉಪಸ್ಥಿತರಿದ್ದರು. ಶಾಲೆಯ ಹಳೆವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಅನುಭವಗಳನ್ನು ಹಂಚಿದರು. ಬಳಿಕ ಹಳೆ ವಿದ್ಯಾರ್ಥಿಗಳ ಸಂಘ ಹಾಗು ಶಾಲಾಭಿವೃದ್ದಿ ಸಮಿತಿಯ ರೂಪೀಕರಣ ನಡೆಯಿತು. ಹಳೆ ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ಮಹಮ್ಮದ್ ಮುಸ್ತಾಫ ತೋಕೆ, ಉಪಾಧ್ಯಕ್ಷರಾಗಿ ಜಯಪ್ರಕಾಶ್ ತೌಡುಗೋಳಿ. ಆನಂದ ನೀರೊಳಿಕೆ, ನವೀನ ಮುಡಿಮಾರು ಕಾರ್ಯದರ್ಶಿಯಾಗಿ ಮತ್ತು ಸದಸ್ಯರುಗಳನ್ನು ಆರಿಸಲಾಯಿತು. ಶಾಲಾಭಿವೃದ್ದಿಯ ಸಮಿತಿಯನ್ನು ರೂಪೀಸಲಾಯಿತು.
Thursday, 9 February 2017
Monday, 30 January 2017
Tuesday, 24 January 2017
Thursday, 12 January 2017
೨೦೧೭ ನೇ ಸಾಲಿನ ಮೊದಲ ಪಿ ಟಿ ಎ ಮಹಾಸಭೆ ಹಾಗು ಸಿ ಪಿ ಟಿ ಎ
ತಾರೀಕು ೧೨/೦೧/೨೦೧೭ ರ ಗುರುವಾರದಂದು ನಮ್ಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾ ಸಭೆ ಹಾಗು ತರಗತಿ ಪಿ ಟಿ ಎ ಸಭೆ ಯು ಜರಗಿತು. ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ ಹಾಗು ಪಿ ಟಿ ಎ ಅಧ್ಯಕ್ಷ ರಾದ ಶ್ರೀ ಅದ್ಬುಲ್ ರಹಿಮಾನ್ ರವರು ಉಪಸ್ಥಿತ ರಿದ್ದರು. ಶಾಲಾ ಹಿರಿಯ ಶಿಕ್ಷಕಿ ಶ್ರೀ ಮತಿ ಶಶಿಕಲಾ ರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಕ್ಷಕರಿಗೂ ಶಾಲಾ ವಿದ್ಯಾರ್ಥಿಗಳಿಗೂ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿತು .

Monday, 12 December 2016
ಹರಿತ ಕಾರ್ಯಕ್ರಮದ ವರದಿ
ಹರಿತ ಕಾರ್ಯಕ್ರಮದ ವರದಿ
ದಿನಾಂಕ 8/12/2016 ನೇ ಗುರುವಾರದಂದು ನಮ್ಮ ಶಾಲೆಯಲ್ಲಿ ಹರಿತ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನೆರವೇರಿತು.ಸಮಯ ಸರಿಯಾಗಿ 10 ಗಂಟೆಗೆ ಎಂದಿನಂತೆ ಶಾಲಾ ಅಸಂಬ್ಲಿಯು ಆರಂಭಗೊಂಡಿತು.ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಚಂದ್ರಾವತಿ ಯವರು ಕಾರ್ಯಕ್ರಮದ ಬಗ್ಗೆ ಕಿರು ಮಾಹಿತಿ ನೀಡಿದರು.ಈ ಸಮಯದಲ್ಲಿ ಎಲ್ಲ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಹರಿತ ಕಾರ್ಯಕ್ರಮದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.
ಬಳಿಕ ಹರಿತ ಕಾರ್ಯಕ್ರಮದ ಉಧ್ಘಾಟನೆಯನ್ನು ಮಾಡಲಾಯಿತು.ಈ ಸಭೆಯಲ್ಲಿ ವಾರ್ಡ್ ಮೆಂಬರರಾದ ಶ್ರೀಮತಿ ಜೆಸಿಂತ ಡಿಸೋಜರವರು,ವರ್ಕಾಡಿ ಪಂಚಾಯತ್ ನ ಯೂತ್ ಕೊರ್ಡಿನೇಟರ್ ರಾದ ಶ್ರೀಮಾನ್ ಜಯ ಪ್ರಕಾಶ್ , ಅಂಗನವಾಡಿ ಕಾರ್ಯಕ್ರತೆಯರು,ಕುಟುಂಬ ಶ್ರೀ ಕಾರ್ಯಕರ್ತೆಯರು, ಅಧ್ಯಾಪಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.ಅಂಗನವಾಡಿ ಸದಸ್ಯರಾದ ಕುಮಾರಿ ಸರಿತರವರು ಸ್ವಾಗತ ವನ್ನು ನೇರವೇರಿಸಿದರು.
ಕುಮಾರಿ ಸರಿತರವರಿಂದ ಸ್ವಾಗತ
ಬಳಿಕ ಚಂದ್ರಾವತಿ ಟೀಚರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ಹರಿತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ವಾರ್ಡ್ ಮೆಂಬರ್ ರಾದ ಶ್ರೀಮತಿ ಜೆಸಿಂತರವರು ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಹೆಲ್ತ್ ನವರಾದ ಸಿಸ್ಟರ್ ಶೋಭಾ ರವರು ಉಪಯುಕ್ತ ಮಾಹಿತಿ ನೀಡಿ ಹಾಡು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಶ್ರೀಮತಿ ಶಶಿಕಲ ಟೀಚರ್ ರವರು ದನ್ಯವಾದ ಸಮರ್ಪಿಸಿದರು.
ಬಳಿಕ ಶಾಲಾ ಮಕ್ಕಳಿಂದ ಜನ ಜಾಗೃತಿ ಚಟುವಟಿಕೆಯ ಸಲುವಾಗಿ ಮೆರವಣಿಗೆಯನ್ನು ನಡೆಸಲಾಯಿತು.
ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸೇರಿ ಪರಿಸರ ಶುಚೀಕರಣ ಮಾಡಿದರು.
ಬಳಿಕ ಶಾಲಾ ಮಕ್ಕಳಿಂದ ಜನ ಜಾಗೃತಿ ಚಟುವಟಿಕೆಯ ಸಲುವಾಗಿ ಮೆರವಣಿಗೆಯನ್ನು ನಡೆಸಲಾಯಿತು.
ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸೇರಿ ಪರಿಸರ ಶುಚೀಕರಣ ಮಾಡಿದರು.
ಮಕ್ಕಳು ತಂದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಲಾಯಿತು.
ಮಕ್ಕಳಿಗಾಗಿ ಚಿತ್ರ ರಚನೆ ,ಪ್ರಬಂಧ ರಚನೆ ,ರಸಪ್ರಶ್ನೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Subscribe to:
Posts (Atom)