Wednesday, 7 March 2018

Prathibhotsava Report

ಶಾಲೆಗಳ ಬೆಳವಣಿಗೆಗೆ ಊರವರ ಸಹಕಾರ ಅತ್ಯಗತ್ಯ: ಅಬ್ದುಲ್ ಮಜೀದ್

ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಯಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿದ ವರ್ಕಾಡಿ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಬ್ದುಲ್ ಮಜೀದ್ ಬಿ ಎ ಯವರು ಶಾಲೆಗಳ ಸರ್ವೋತುಮುಖ ಅಭಿವರ್ಧಿಗೆ ಊರವರ ಸಹಕಾರ ಅತ್ಯಗತ್ಯ ಎಂದು ನುಡಿದರು. ಶಾಲಾ ಪ್ರಬಂಧಕ ಶ್ರೀ ದೇವಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲೆಯ ವಿದ್ಯಾಧಿಕಾರಿಗಳದ ಶ್ರೀ ದಿನೇಶ್ , ಮಂಜೇಶ್ವರ ಉಪಜಿಲ್ಲಾ ಬಿ ಪಿ ಓ ಶ್ರೀ ವಿಜಯಕುಮಾರ್ ಹಾಗೂ ಎ ಯು ಪಿ ಶಾಲೆ ಕಳಿಯೂರ್ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪವತಿ ಯವರು ಮುಖ್ಯ ಅತಿಥಿಗಳದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರವತಿ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು.





















Sunday, 25 February 2018

Prathibhostsva 2018-19

ಪ್ರಿಯರೇ,
        ಇದೆ ಬರುವ ತಾರೀಕು ೧ ಮಾರ್ಚ್ ೨೦೧೮ ನೇ ಬುಧವಾರದಂದು ನಮ್ಮಶಾಲೆ ಯಲ್ಲಿ "ಪ್ರತಿಭೋತ್ಸವ " ಕಾರ್ಯಕ್ರಮವು ನಡೆಯಲಿರುವುದು. ಸರ್ವರಿಗೂ ಆದಾರದ ಸುಸ್ವಾಗತ 


Thursday, 1 February 2018

Madhura Kannada And Parent Awarness Programme

 ಮಧುರ ಕನ್ನಡ  ಘೋಷಣೆ ಮತ್ತು ರಕ್ಷಕರಿಗೆ ತರಬೇತಿ 

ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುದೂರತೋಕೆಯಲಿ ತಾರೀಕು ೩೦/೦೧/೨೦೧೮  ರಂದು ಮಧುರಕನ್ನಡ ಘೋಷಣೆ ಹಾಗು ರಕ್ಷಕರಿಗೆ ತರಬೇತಿ ಕಾರ್ಯಕ್ರಮವು ಜರಗಿತು. ಸಭೆಯಲ್ಲಿ ಶಾಲಾ ಮುಖ್ಯಶಿಕ್ಷಕಿ ಶ್ರೀ ಮತಿ ಚಂದ್ರಾವತಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶಿವರಾಜ್ ಭಟ್ , ಮಾತೃ ಪಿ ಟಿ ಎ ಅಧ್ಯಕ್ಷರಾದ ಶ್ರೀ ಮತಿ ಮಮತಾ ಹಾಗು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಸ್ತಾಫಾ ಮುಂತಾದವರು ಉಪಸ್ಥಿತರಿದ್ದರು . ಶಾಲಾ ಮುಖ್ಯಶಿಕ್ಷಕಿ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಮಧುರಕನ್ನಡ ದ ಬಗ್ಗೆ ಶಾಲಾ ಶಿಕ್ಷಕ ಶೈಲೇಶ್ ಮಾತನಾಡಿದರು ಹಾಗು ಪೇರೆಂಟ್ ಅವರ್ನೆಸ್ ನ ಬಗ್ಗೆ ಶಾಲಾ ಶಿಕ್ಷಕಿಯರಾದ ಶ್ರೀಮತಿ ಚಿತ್ರ , ಶ್ರೀಮತಿ ಶಶಿಕಲಾ ರವರು ವಿವರಿಸಿದರು. 



Friday, 26 January 2018

Republic day

ಪ್ರಜಾಪ್ರಭುತ್ವ ದಿನ 2018
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರವತಿ ಯವರು ಧ್ವಜಾರೋಹಣ ನಡೆಸಿ ಪ್ರಜಾಪ್ರಭುತ್ವ ದಿನ ದ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ಬಳಿಕ ಸಿಹಿ ತಿಂಡಿಗಳನ್ನು ವಿತರಿಸಲಾಯಿತು.

Educational tour 2018

ಶೈಕ್ಷಣಿಕ ಪ್ರವಾಸ 2018
ತಾರೀಕು 25 ಜನವರಿ 2018 ರ ಗುರುವಾರದಂದು ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಹಾಗೂ ಎಂ ಜಿ ಎಲ್ ಸಿ ಕೇದುಂಬಾಡಿ ಶಾಲೆಯ ಸಹಭಾಗಿತ್ವದಲ್ಲಿ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ವಿಸ್ಮಯ ವಾಟರ್ ಪಾರ್ಕ್ ಕಣ್ಣೂರ ಗೆ ಹೋಗಲಾಯಿತು. ಈ ಎರಡು ಶಾಲಾ ಮಕ್ಕಳು, ಅಧ್ಯಾಪಕರು, ರಕ್ಷಕರು ಇದರಲ್ಲಿ ಪಾಲ್ಗೊಂಡರು.




Wednesday, 10 January 2018

Todays PTA Meeting about 2nd tearm Evaluation, educational tour, other maters

Friday, 22 December 2017

Christmass and new year celebration

ವರ್ಕಾಡಿ ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ Christmas ಹಬ್ಬವನ್ನು ಆಚರಿಸಲಾಯಿತು. ಮಕ್ಕಳಿಗೆ star ನಿರ್ಮಾಣ ರೀತಿ ತೋರಿಸಿಕೊಡಲಾಯಿತು. ಮತ್ತು ಮದ್ಯಾಹ್ನದ ಭೋಜನ ವ್ಯವಸ್ಥೆಯನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರವತಿ ಯವರು ತಮ್ಮ ಪುತ್ರನ ವಿವಾಹದ ಸವಿ ನೆನಪಿನ ಸಲುವಾಗಿ ಕೊಡುಗೆಯಾಗಿ ನೀಡಿದರು.

Thursday, 16 November 2017

Tuesday, 14 November 2017

CHILDRENS DAY 2017

ಮಕ್ಕಳ ಹಬ್ಬ 2017 

ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಬಾಲ ಸಭೆ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯ ರು ನಡೆಸಿದರು. 

 

 

Saturday, 30 September 2017

Monday, 4 September 2017

Onam celebration 2017

ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ಓಣಂ ಆಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೂ ರಕ್ಷಕರಿಗೂ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

Tuesday, 15 August 2017

71st Indian independence Celebration

71  ನೇ ಸ್ವಾತಂತ್ರೋತ್ಸವ ಆಚರಣೆ  
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಶಾಲೆಯಲ್ಲಿ 71 ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆಯನ್ನು ಬಹಳ ವಿಜೃಂಭಣೆ ಯಿಂದ ಆಚರಿಸಲಾಯಿತು. ಬೆಳಗ್ಗೆ 9.30 ಕ್ಕೆ ಶಾಲಾ ರಕ್ಷಕ-ಶಿಕ್ಷಕ  ಸಂಘದ ಅಧ್ಯಕ್ಷರಾದ ಶ್ರೀ ಶಿವರಾಜ್ ಭಟ್ಟ್ ರವರು ಧ್ವಜಾರೋಹಣ ನಡೆಸಿದರು. ಬಳಿಕ ಸಭಾ ಕಾರ್ಯಕ್ರಮವು ಜರಗಿತು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಪ್ರಬಂಧಕರಾದ ಶ್ರೀ ದೇವಪ್ಪ ಶೆಟ್ಟಿ ಯವರು ವಹಿಸಿದರು ಅತಿಥಿಗಳಾಗಿ ಶಾಲಾ ಹಳೆ ವಿದ್ಯಾರ್ಥಿ ಸಂಘ ದ ಅಧ್ಯಕ್ಷ ಮುಸ್ತಾಫ್ತ್ , ಮಾಜಿ ಪಿ ಟಿ ಎ ಅಧ್ಯಕ್ಷರುಗಳಾದ ಸೋಮನಾಥ್ ಕಾರಂತ್ ,ಅಬ್ದುಲ್ ರಹಿಮಾನ್ ಮುಂತಾದವರು ಭಾಗವಹಿಸಿದ ಕಾರ್ಯಕ್ರಮಕ್ಕೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಕೆ ಯವರು ಸ್ವಾಗತಿಸಿ ಶಾಲಾ ಶಿಕ್ಷಕಿ ಶ್ರೀಮತಿ ಶಶಿಕಲಾ ರವರು ಧನ್ಯವಾದವಿತ್ತರು . ಶಾಲಾ ಶಿಕ್ಷಕ ಶೈಲೇಶ್ ಹಾಗು ಶಿಕ್ಷಕಿಯಾದ ಫೌಸಿಯ  ಕಾರ್ಯಕ್ರಮದ  ನಿರೂಪಣೆಯನ್ನು ನಡೆಸಿಕೊಟ್ಟರು. ಇದರೊಂದಿಗೆ ಶಾಲಾ ವಿದ್ಯಾರ್ಥಿಗಳಿಕೆ ಶಾಲಾಮಟ್ಟದಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಣೆಯು ಜರಗಿತು. ಬಳಿಕ ಶಾಲಾ ಪುಟಾಣಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕಿ ಶ್ರೀಮತಿ ಚಿತ್ರಾ ರವರು ನಡೆಸಿಕೊಟ್ಟರು . 

ಕಾರ್ಯಕ್ರಮದ ಕೆಲವು ಚಿತ್ರ ಗಳು 

 
  

Tuesday, 1 August 2017

ತರಕಾರಿ ಬೀಜ ವಿತರಣೆ  
ವರ್ಕಾಡಿ ಕೃಷಿ ಇಲಾಖೆಯಿಂದ ದೊರೆತ ಉಚಿತ ತರಕಾರಿ ಬೀಜವನ್ನು ವಿತರಿಸುವುದು