Saturday, 11 March 2017

ಜಾರುಬಂಡಿ ಮತ್ತು ಶಾಲಾ ಮಟ್ಟದ ಹಲೋ ಇಂಗ್ಲೀಷ್ ಉಧ್ಘಾಟನೆ


















ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರುತೋಕೆ ಯಲ್ಲಿ ತಾರೀಕು 10 ಮಾರ್ಚ್ 2017 ರಂದು ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಜಾರುಬಂಡಿಯ ಹಾಗು ಹಲೋ ಇಂಗ್ಲೀಷ್ ನ ಉದ್ಘಾಟನಾ ಕಾರ್ಯಕ್ರಮ ಜರಗಿತು. ಜಾರುಬಂಡಿಯ ಉದ್ಙಾಟನೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಅಬ್ದುಲ್ ರಹೀಮಾನ್ ಹಾಗು ಹಲೋ ಇಂಗ್ಲೀಷ್ ನ ಉದ್ಘಾಟನೆಯನ್ನು ಮಂಜೇಶ್ವರ ಬ್ಲೋಕ್ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಎ ಕೆ ಯಂ ಅಶ್ರಫ್ ರವರು ನಡೆಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ವಾರ್ಡ ಸದಸ್ಯೆ ಶ್ರೀಮತಿ ಜೆಸಿಂತ ಡಿಸೋಜರವರುವಹಿಸಿ ಕಾರ್ಯಕ್ರಮಕ್ಕೆ ಶುಭಾಸಂಷನೆ ನೀಡಿದರು. ಶಾಲಾ ಅಭಿವೃಧಿ ಸಮೀತಿಯ ಕಾರ್ಯದರ್ಶಿ ಶ್ರೀ ತೃಶಾಂತ್, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಮುಸ್ತಫ್ ತೋಕೆ, ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ ಮುಂತಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಜೇಶ್ವರ ಉಪಜಿಲ್ಲೆಯ BPO ಶ್ರೀ ವಿಜಯ ಕುಮಾರ್ ರವರು ಕಾರ್ಯಕ್ರಮದ ಅತಿಥಿಗಳಾದ ಕಾರ್ಯಕ್ರಮವನ್ನು ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿದರು ಹಾಗು ಹಲೋ ಇಂಗ್ಲೀಷ್ ನ ಭಾಗವಾಗಿ ಶಾಲಾ ಶಿಕ್ಷಕಿ ಶ್ರೀಮತಿ ಚಿತ್ರಾರವರು ಮಕ್ಕಳಿಗೊಂದು ತರಬೇತಿಯನ್ನು ನೀಡಿದರು. ಈ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕ ಶ್ರೀ ಶೈಲೇಶ್ ರವರು ಧನ್ಯವಾದ ಹೇಳಿದರು.

Monday, 27 February 2017

ಹಳೆ ವಿದ್ಯಾರ್ಥಿಗಳ ಸಂಗಮ












ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಯಲ್ ಪಿ ಶಾಲೆ ಮುಡೂರುತೋಕೆಯಲ್ಲಿ ತಾರೀಕು 26 ಫೆಬ್ರವರಿ 2017ರಂದು ಅಪರಾಹ್ನ 2 ಗಂಟೆಗೆ ಸರಿಯಾಗಿ ಹಳೆ ವಿದ್ಯಾರ್ಥಿಗಳ ಸಂಗಮದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮೆನೇಜರರಾದ ಶ್ರೀಯುತ ದೇವಪ್ಪ ಶೆಟ್ಟಿವಹಿಸಿದರು. ಶಾಲಾ ಪಿ ಟಿ ಎ ಅದ್ಯಕ್ಷ ಶ್ರೀ ಅಬ್ದುಲ್ ರಹಿಮಾನ್ ಮಾಜಿ ಪಿ ಟಿ ಎ ಅದ್ಯಕ್ಷ ಶ್ರೀ ಸೋಮನಾಥ ಕಾರಂತ ಉಪಸ್ಥಿತರಿದ್ದರು. ಶಾಲೆಯ ಹಳೆವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಅನುಭವಗಳನ್ನು ಹಂಚಿದರು. ಬಳಿಕ ಹಳೆ ವಿದ್ಯಾರ್ಥಿಗಳ ಸಂಘ ಹಾಗು ಶಾಲಾಭಿವೃದ್ದಿ ಸಮಿತಿಯ ರೂಪೀಕರಣ ನಡೆಯಿತು. ಹಳೆ ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ಮಹಮ್ಮದ್ ಮುಸ್ತಾಫ ತೋಕೆ, ಉಪಾಧ್ಯಕ್ಷರಾಗಿ ಜಯಪ್ರಕಾಶ್ ತೌಡುಗೋಳಿ.  ಆನಂದ ನೀರೊಳಿಕೆ, ನವೀನ ಮುಡಿಮಾರು ಕಾರ್ಯದರ್ಶಿಯಾಗಿ ಮತ್ತು ಸದಸ್ಯರುಗಳನ್ನು ಆರಿಸಲಾಯಿತು. ಶಾಲಾಭಿವೃದ್ದಿಯ ಸಮಿತಿಯನ್ನು ರೂಪೀಸಲಾಯಿತು.

Monday, 20 February 2017

Thursday, 9 February 2017

ಪ್ರಿಯರೇ 
             ಇದೇ ಬರುವ ತಾರೀಕು 10/2/2017 ಶುಕ್ರವಾರ ದಂದು ಬೆಳಗ್ಗೆ 10.30 ಕ್ಕೆ ಸರಿಯಾಗಿ ಶಾಲಾ ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆಯಲಾಗಿದೆ. ತಾವು ಈ ಸಭೆಗೆ ಕ್ಲಿಪ್ತ ಸಮಯದಲ್ಲಿ ಆಗಮಿಸಿ ಸೂಕ್ತ ಸಲಹೆಗಳನ್ನು ನೀಡಬೇಕಾಗಿ ಅಪೇಕ್ಷೆ. 

                                                                                  ಇತೀ 
                                                                                ಮುಖ್ಯೋಪಾಧ್ಯಾಯಿನಿ 
                                                                           SSALPS Mudoorthoke
ಪ್ರಿಯರೇ ಇದೇ ಬರುವ ತಾರೀಕು 10/2/2017 ಶುಕ್ರವಾರ ದಂದು ಬೆಳಗ್ಗೆ 10.30 ಕ್ಕೆ ಸರಿಯಾಗಿ ಶಾಲಾ ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆಯಲಾಗಿದೆ. ತಾವು ಈ ಸಭೆಗೆ ಕ್ಲಿಪ್ತ ಸಮಯದಲ್ಲಿ ಆಗಮಿಸಿ ಸೂಕ್ತ ಸಲಹೆಗಳನ್ನು ನೀಡಬೇಕಾಗಿ ಅಪೇಕ್ಷೆ. ಇತೀ ಮುಖ್ಯೋಪಾಧ್ಯಾಯಿನಿ SSALPS Mudoorthoke

Monday, 30 January 2017

ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ 

ತಾರೀಕು 27/01/2017 ನೇ ಶುಕ್ರವಾರ 11 ಗಂಟೆಗೆ ಸರಿಯಾಗಿ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ದ ಶಾಲಾಮಟ್ಟದ ಕಾರ್ಯಕ್ರಮ ನಮ್ಮ ಶಾಲೆಯಲಿ ಜರಗಿತು. ಸಾರ್ವಜನಿಕ ಶಿಕ್ಷಣ ವಲಯವನ್ನು ಬಲಗೊಳಿಸುವ ಸರಕಾರದ ಉದ್ದೇಶಕನುಸಾರವಾಗಿ ಹಳೆವಿದ್ಯಾರ್ಥಿಗಳ,ರಕ್ಷಕರು,ಊರವರ ಮಹಾಸಂಗಮ ನಡೆಯಿತು. 

Tuesday, 24 January 2017

Saturday, 21 January 2017

4ನೇ ತರಗತಿಯ ವಿದ್ಯಾರ್ಥಿಗಳಿಂದ  ಅಂಚೆ ಕಛೇರಿ ಸಂದರ್ಶನ 

೪ನೇ ತರಗತಿಯ ಕನ್ನಡ ಪಾಠ ಭಾಗಕ್ಕೆ ಸಂಬಂಧಿಸಿ ಶ್ರೀ ಸುಬ್ರಹ್ಮಣ್ಯ ಕಿರಿಯ ಅನುದಾನಿತ ಶಾಲೆ ಮುಡೂರ್ ತೋಕೆ ಯಾ ವಿದ್ಯಾರ್ಥಿ ಗಳು ಸಮೀಪದ ನರಿಂಗಾನ ಅಂಚೆ ಕಛೇರಿ ಸಂದರ್ಶಿಸಿದರು . ಹಾಗು ತಾವು ಕೈಗೊಳ್ಳುವ ಶೈಕ್ಷಣಿಕ  ಪ್ರವಾಸದ ಕುರಿತು ಅಮ್ಮನಿಗೆ ಪಾತ್ರ ಬರೆದು ಪಾತ್ರವನ್ನು ಪೋಸ್ಟ್ ಮಾಡಿದರು . 


Thursday, 12 January 2017

೨೦೧೭ ನೇ ಸಾಲಿನ  ಮೊದಲ ಪಿ ಟಿ ಎ ಮಹಾಸಭೆ ಹಾಗು ಸಿ ಪಿ ಟಿ ಎ 

ತಾರೀಕು ೧೨/೦೧/೨೦೧೭ ರ ಗುರುವಾರದಂದು ನಮ್ಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾ ಸಭೆ ಹಾಗು ತರಗತಿ ಪಿ ಟಿ ಎ ಸಭೆ ಯು ಜರಗಿತು. ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ ಹಾಗು ಪಿ ಟಿ ಎ ಅಧ್ಯಕ್ಷ ರಾದ ಶ್ರೀ ಅದ್ಬುಲ್ ರಹಿಮಾನ್ ರವರು ಉಪಸ್ಥಿತ ರಿದ್ದರು. ಶಾಲಾ ಹಿರಿಯ ಶಿಕ್ಷಕಿ ಶ್ರೀ ಮತಿ ಶಶಿಕಲಾ ರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಕ್ಷಕರಿಗೂ ಶಾಲಾ ವಿದ್ಯಾರ್ಥಿಗಳಿಗೂ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿತು . 




Friday, 23 December 2016

ಕ್ರಿಸ್ತ್ಮಸ್ ಆಚರಣೆ ಮತ್ತು ಸ್ಟಾರ್ ತಯಾರಿ  






Monday, 12 December 2016

ಹರಿತ ಕಾರ್ಯಕ್ರಮದ ವರದಿ

ಹರಿತ ಕಾರ್ಯಕ್ರಮದ ವರದಿ 

    ದಿನಾಂಕ 8/12/2016 ನೇ ಗುರುವಾರದಂದು ನಮ್ಮ ಶಾಲೆಯಲ್ಲಿ ಹರಿತ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನೆರವೇರಿತು.ಸಮಯ ಸರಿಯಾಗಿ 10 ಗಂಟೆಗೆ ಎಂದಿನಂತೆ ಶಾಲಾ ಅಸಂಬ್ಲಿಯು ಆರಂಭಗೊಂಡಿತು.ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಚಂದ್ರಾವತಿ ಯವರು ಕಾರ್ಯಕ್ರಮದ ಬಗ್ಗೆ ಕಿರು ಮಾಹಿತಿ ನೀಡಿದರು.ಈ ಸಮಯದಲ್ಲಿ ಎಲ್ಲ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ  ಹರಿತ ಕಾರ್ಯಕ್ರಮದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.
        ಬಳಿಕ ಹರಿತ ಕಾರ್ಯಕ್ರಮದ ಉಧ್ಘಾಟನೆಯನ್ನು ಮಾಡಲಾಯಿತು.ಈ ಸಭೆಯಲ್ಲಿ ವಾರ್ಡ್ ಮೆಂಬರರಾದ ಶ್ರೀಮತಿ ಜೆಸಿಂತ ಡಿಸೋಜರವರು,ವರ್ಕಾಡಿ ಪಂಚಾಯತ್ ನ ಯೂತ್ ಕೊರ್ಡಿನೇಟರ್ ರಾದ ಶ್ರೀಮಾನ್ ಜಯ ಪ್ರಕಾಶ್ ,  ಅಂಗನವಾಡಿ ಕಾರ್ಯಕ್ರತೆಯರು,ಕುಟುಂಬ ಶ್ರೀ ಕಾರ್ಯಕರ್ತೆಯರು, ಅಧ್ಯಾಪಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.ಅಂಗನವಾಡಿ ಸದಸ್ಯರಾದ ಕುಮಾರಿ ಸರಿತರವರು ಸ್ವಾಗತ ವನ್ನು ನೇರವೇರಿಸಿದರು.



ಕುಮಾರಿ ಸರಿತರವರಿಂದ ಸ್ವಾಗತ 


ಬಳಿಕ ಚಂದ್ರಾವತಿ ಟೀಚರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ಹರಿತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.


ವಾರ್ಡ್ ಮೆಂಬರ್ ರಾದ ಶ್ರೀಮತಿ ಜೆಸಿಂತರವರು ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.


ಹೆಲ್ತ್ ನವರಾದ ಸಿಸ್ಟರ್ ಶೋಭಾ ರವರು ಉಪಯುಕ್ತ ಮಾಹಿತಿ ನೀಡಿ ಹಾಡು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.



ಪಂಚಾಯತ್ ನ ಯೂತ್ ಕೊರ್ಡಿನೇಟರ್ ರಾದ ಶ್ರೀಮಾನ್ ಜಯ ಪ್ರಕಾಶ್ ರವರು ಕೆಲ ಮಾಹಿತಿ ನೀಡಿದರು.



ಶ್ರೀಮತಿ ಶಶಿಕಲ ಟೀಚರ್ ರವರು ದನ್ಯವಾದ ಸಮರ್ಪಿಸಿದರು.

ಬಳಿಕ ಶಾಲಾ ಮಕ್ಕಳಿಂದ ಜನ ಜಾಗೃತಿ ಚಟುವಟಿಕೆಯ ಸಲುವಾಗಿ ಮೆರವಣಿಗೆಯನ್ನು ನಡೆಸಲಾಯಿತು.


ವಿದ್ಯಾರ್ಥಿಗಳು  ಹಾಗೂ ಅಧ್ಯಾಪಕರು ಸೇರಿ ಪರಿಸರ ಶುಚೀಕರಣ ಮಾಡಿದರು.


ಮಕ್ಕಳು ತಂದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಲಾಯಿತು.

ಮಕ್ಕಳಿಗಾಗಿ ಚಿತ್ರ ರಚನೆ ,ಪ್ರಬಂಧ ರಚನೆ ,ರಸಪ್ರಶ್ನೆ ಮೊದಲಾದ  ಕಾರ್ಯಕ್ರಮಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.