Sunday, 25 February 2018
Thursday, 1 February 2018
Madhura Kannada And Parent Awarness Programme
ಮಧುರ ಕನ್ನಡ ಘೋಷಣೆ ಮತ್ತು ರಕ್ಷಕರಿಗೆ ತರಬೇತಿ
ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುದೂರತೋಕೆಯಲಿ ತಾರೀಕು ೩೦/೦೧/೨೦೧೮ ರಂದು ಮಧುರಕನ್ನಡ ಘೋಷಣೆ ಹಾಗು ರಕ್ಷಕರಿಗೆ ತರಬೇತಿ ಕಾರ್ಯಕ್ರಮವು ಜರಗಿತು. ಸಭೆಯಲ್ಲಿ ಶಾಲಾ ಮುಖ್ಯಶಿಕ್ಷಕಿ ಶ್ರೀ ಮತಿ ಚಂದ್ರಾವತಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶಿವರಾಜ್ ಭಟ್ , ಮಾತೃ ಪಿ ಟಿ ಎ ಅಧ್ಯಕ್ಷರಾದ ಶ್ರೀ ಮತಿ ಮಮತಾ ಹಾಗು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಸ್ತಾಫಾ ಮುಂತಾದವರು ಉಪಸ್ಥಿತರಿದ್ದರು . ಶಾಲಾ ಮುಖ್ಯಶಿಕ್ಷಕಿ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಮಧುರಕನ್ನಡ ದ ಬಗ್ಗೆ ಶಾಲಾ ಶಿಕ್ಷಕ ಶೈಲೇಶ್ ಮಾತನಾಡಿದರು ಹಾಗು ಪೇರೆಂಟ್ ಅವರ್ನೆಸ್ ನ ಬಗ್ಗೆ ಶಾಲಾ ಶಿಕ್ಷಕಿಯರಾದ ಶ್ರೀಮತಿ ಚಿತ್ರ , ಶ್ರೀಮತಿ ಶಶಿಕಲಾ ರವರು ವಿವರಿಸಿದರು.Friday, 26 January 2018
Friday, 22 December 2017
Tuesday, 14 November 2017
Saturday, 30 September 2017
Monday, 4 September 2017
Tuesday, 15 August 2017
71st Indian independence Celebration
71 ನೇ ಸ್ವಾತಂತ್ರೋತ್ಸವ ಆಚರಣೆ
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಶಾಲೆಯಲ್ಲಿ 71 ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆಯನ್ನು ಬಹಳ ವಿಜೃಂಭಣೆ ಯಿಂದ ಆಚರಿಸಲಾಯಿತು. ಬೆಳಗ್ಗೆ 9.30 ಕ್ಕೆ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶಿವರಾಜ್ ಭಟ್ಟ್ ರವರು ಧ್ವಜಾರೋಹಣ ನಡೆಸಿದರು. ಬಳಿಕ ಸಭಾ ಕಾರ್ಯಕ್ರಮವು ಜರಗಿತು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಪ್ರಬಂಧಕರಾದ ಶ್ರೀ ದೇವಪ್ಪ ಶೆಟ್ಟಿ ಯವರು ವಹಿಸಿದರು ಅತಿಥಿಗಳಾಗಿ ಶಾಲಾ ಹಳೆ ವಿದ್ಯಾರ್ಥಿ ಸಂಘ ದ ಅಧ್ಯಕ್ಷ ಮುಸ್ತಾಫ್ತ್ , ಮಾಜಿ ಪಿ ಟಿ ಎ ಅಧ್ಯಕ್ಷರುಗಳಾದ ಸೋಮನಾಥ್ ಕಾರಂತ್ ,ಅಬ್ದುಲ್ ರಹಿಮಾನ್ ಮುಂತಾದವರು ಭಾಗವಹಿಸಿದ ಕಾರ್ಯಕ್ರಮಕ್ಕೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಕೆ ಯವರು ಸ್ವಾಗತಿಸಿ ಶಾಲಾ ಶಿಕ್ಷಕಿ ಶ್ರೀಮತಿ ಶಶಿಕಲಾ ರವರು ಧನ್ಯವಾದವಿತ್ತರು . ಶಾಲಾ ಶಿಕ್ಷಕ ಶೈಲೇಶ್ ಹಾಗು ಶಿಕ್ಷಕಿಯಾದ ಫೌಸಿಯ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು. ಇದರೊಂದಿಗೆ ಶಾಲಾ ವಿದ್ಯಾರ್ಥಿಗಳಿಕೆ ಶಾಲಾಮಟ್ಟದಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಣೆಯು ಜರಗಿತು. ಬಳಿಕ ಶಾಲಾ ಪುಟಾಣಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕಿ ಶ್ರೀಮತಿ ಚಿತ್ರಾ ರವರು ನಡೆಸಿಕೊಟ್ಟರು .
Monday, 3 July 2017
PTA General Body
ಶಾಲಾ ರಕ್ಷಕ ಶಿಕ್ಷಕ ಮಹಾಸಭೆ
ತಾರೀಕು 30/06/2017 ರ ಶುಕ್ರವಾರದಂದು ಅಪರಾಹ್ನ ೩ ಗಂಟೆಗೆ ಸರಿಯಾಗಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಜರಗಿತು. ೨೦೧೭-೧೮ ಶಾಲಿನ ಶೈಕ್ಷಣಿಕ ವರ್ಷದ ನೂತನ ಪಿ ಟಿ ಎ ಅಧ್ಯಕ್ಷರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಸಿ ನೂತನ ಅಧ್ಯಕ್ಷರಾಗಿ ಶ್ರೀ ಶಿವರಾಜ್ ಬೋಳಪದವು ಹಾಗು ಉಪ ಪಿ ಟಿ ಎ ಅಧ್ಯಕ್ಷರಾಗಿ ಶ್ರೀ ಮೊಹಮ್ಮದ್ ಕೆದುಂಬಾಡಿ ರವರು ಆಯ್ಕೆ ಗೊಂಡರು. ಹಾಗು ಮಾತೃ ಪಿ ಟಿ ಎ ಅಧ್ಯಕ್ಷರಾಗಿ ಶ್ರೀಮತಿ ಮಮತಾ ರವರು ಉಪ ಮಾತೃ ಪಿ ಟಿ ಎ ಯಾಗಿ ಶ್ರೀಮತಿ ಮಂಜುಳಾ ರವರು ಆಯ್ಕೆ ಗೊಂಡರು. ಕಾರ್ಯಕ್ರಮಕ್ಕೆ ಶುಭ ಹಾರೈಸಲು ಶಾಲಾ ಪ್ರಬಂಧಕರು ಹಾಗು ಮಾಜಿ ಪಿ ಟಿ ಎ ಅಧ್ಯಕ್ಷರು ಉಪಸ್ಥಿತರಿದ್ದರು. ಇದರೊಂದಿಗೆ ಶಾಲಾ ವಿದ್ಯಾರ್ಥಿಗಳಿಗಿರುವ ಉಚಿತ ಸಮವಸ್ತ್ರವನ್ನು ರಕ್ಷಕರ ಸಾನಿಧ್ಯದಲ್ಲಿ ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿ ಶಾಲಾ ಶಿಕ್ಷಕಿ ಶಶಿಕಲಾರವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಮುಕ್ತಯವಾಯಿತು.
Subscribe to:
Posts (Atom)





















