Friday, 6 September 2019

ಮುಡೂರ್ ತೋಕೆ ಶಾಲೆಯಲ್ಲಿ ಲ್ಯಾಪ್ಟಾಪ್ ಪ್ರಾಜೆಕ್ಟರ್ ಉದ್ಘಾಟನೆ ಹಾಗೂ ಓಣಂ ಆಚರಣೆ


ವರ್ಕಾಡಿ: ಶ್ರೀ ಸುಬ್ರಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆಯಲ್ಲಿ ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ದ ಭಾಗವಾಗಿ ಲಭಿಸಿದ ಲ್ಯಾಪ್ಟಾಪ್ ಹಾಗೂ ಪ್ರಾಜೆಕ್ಟರ್ ಗಳ ಉದ್ಘಾಟನೆ ಮತ್ತು ಓಣಂ ಹಬ್ಬದ ಆಚರಣೆಯು ಬಹಳ ವಿಜ್ರಂಭಣೆಯಿಂದ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಉಪ ಜಿಲ್ಲಾ ಬಿಪಿಓ ಕುಮಾರ್ ನೆರವೇರಿಸಿದರು. ಲ್ಯಾಪ್ಟಾಪ್ ಪ್ರೊಜೆಕ್ಟ್ರ್ ಗಳ ಉದ್ಘಾಟನೆಯನ್ನು ನಿವೃತ ಮುಕ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರವತಿ ನೆರವೇರಿಸಿದರು. ಶಾಲಾ ಪಿ ಟಿ ಎ ಅಧ್ಯಕ್ಷ ಶ್ರೀ ಅಬೂಬಕ್ಕರ್ ಸಿಧ್ಧಿಕ್ ಹಾಗೂ ಮಾತೃ ಪಿ ಟಿ ಎ ಅಧ್ಯಕ್ಷೆ ಶ್ರೀಮತಿ ಮಮತಾ ರವರು ಶುಭ ಹಾರೈಸಿದರು. ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆ ಹಾಗೂ ಇತರ ಆಟೋಟ ಸ್ಪರ್ಧೆ ಮಕ್ಕಳಿಗೂ ಮಕ್ಕಳ ಹೆತ್ತವರಿಗೂ ನಡೆಸಲಾಯಿತು. ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಶಶಿಕಲಾ ಸ್ವಾಗತಿಸಿದ ಕಾರ್ಯಕ್ರಮ ವನ್ನು ಶಾಲಾ ಶಿಕ್ಷಕಿ ಶ್ರೀಮತಿ ಲಾವಣ್ಯ ನಿರೂಪಿಸಿದರು. ಶಾಲಾ ಶಿಕ್ಷಕ ಶ್ರೀ ಶೈಲೇಶ್ ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.







Wednesday, 10 July 2019

SCHOOL PTA GENERAL BODY 2019


SCHOOL PARLIMENT 2019

ಮುಡೂರ್ ತೋಕೆ ಶಾಲಾ ಪಾರ್ಲಿಮೆಂಟ್ ರಚನೆ

ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ 2019-20ನೇ ಸಾಲಿನ ಶಾಲಾ ಚುನಾವಣೆಯು ವಯಸ್ಕರ ಮತದಾನದ ರೀತಿಯಲ್ಲಿ ಜರಗಿತು. ಚುನಾವಣೆಯ ಎಲ್ಲಾ ಹಂತಗಳನ್ನು ಪಾಲಿಸಿ ವಿದ್ಯಾರ್ಥಿಗಳಿಗೆ ಮತದಾನದ ಜಾಗ್ರತಿ ಮೂಡಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಮುಖ್ಯ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಚುನಾವಣೆಯ ಎಲ್ಲಾ ಹಂತಗಳನ್ನು ಮಕ್ಕಳೇ ನಿರ್ವಹಿಸುದರ ಮೂಲಕ ಚುನಾವಣೆಯ ಅರಿವು ಎಳೆ ಮನಸಿನಲ್ಲಿ ಅಚೋತ್ತುವಂತಯಿತು. ಬಳಿಕ ಮುಖ್ಯಚುನಾವಣಾಧಿಕಾರಿಯ ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು. ಮುಖ್ಯಚುನಾವಣಾಧಿಕಾರಿಯು ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದಂತೆ ಎಲ್ಲಾ ವಿದ್ಯಾರ್ಥಿಗಳ ಮುಖದಲ್ಲೂ ಸಂತೋಷ ತುಂಬಿತು. ಶಾಲಾ ನಾಯಕಿಯಾಗಿ ಕುಮಾರಿ ಧನ್ಯ ಹಾಗೂ ಶಾಲಾಉಪ ನಾಯಕನಾಗಿ ಮೊಹಮದ್ ಮಿಕ್ಡದ್ ಆಯ್ಕೆಯಾದರು. ವಿದ್ಯಾಭ್ಯಾಸ ಮಂತ್ರಿಯಾಗಿ ಮುಬಾಸಿರ್, ಆಹಾರ ಮಂತ್ರಿಯಾಗಿ ಹೃತ್ವಿಕ್, ಕ್ರೀಡಾ ಮಂತ್ರಿಯಾಗಿ ಸಾಹಿಮ್ ಆಯ್ಕೆಯಾದರು. ಮುಖ್ಯಚುನಾವಣಾಧಿಕಾರಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣವಚನ ಭೋದಿಸಿದರು. ಬಳಿಕ ವಿಜೇತ ಅಭ್ಯರ್ಥಿ ಗಳು ಸಿಹಿತಿಂಡಿ ಮಕ್ಕಳಿಗೆ ವಿತರಿಸುವ ಮೂಲಕ ಸಂತೋಷ ಹಂಚಿಕೊಂಡರು. ಶಾಲಾ ಚುನಾವಣೆಯಲ್ಲಿ ಅಧ್ಯಾಪಕ ವೃಂದ ಉಪಸ್ಥಿತರಿದ್ದು ಸಹಕರಿಸಿದರು.

OLD STUDENTS ASSOSIATION ANNUAL MEETING 2019


Thursday, 4 July 2019

URGENT SSG Meeting

ಶಾಲಾ ಅಭಿವೃದ್ಧಿ  ಸಮಿತಿ ಯ ತುರ್ತು ಸಭೆ ಯನ್ನು ತಾರೀಕು 4/07/2019 ನೇ ಗುರುವಾರದಂದು ಕರೆಯಲಾಯಿತು ಸಭೆಯಲ್ಲಿ ಶಾಲಾ ಹಿತೇಶಿಗಳು,ಪ್ರಬಂಧಕರು,ಮುಖ್ಯೋಪಾಧ್ಯಾಯಿನಿ ,ಅಧ್ಯಾಪಕರು ಭಾಗವಹಿಸಿದರು. ಶಾಲೆಯನ್ನು ಅಭಿವೃದ್ಧಿ ಗೊಳಿಸುವ ಸಲುವಾಗಿ ಹಳೆ ವಿದ್ಯಾರ್ಥಿ ಸಭೆಯನ್ನು ತಾರೀಕು ೧೨/೦೭/೨೦೧೯ ರಂದು ನಡೆಸಲು ತೀರ್ಮಾನಿಸಲಾಯಿತು .

 

YOGA DAY 2019


Saturday, 8 June 2019

ಮುಡೂರ್ ತೋಕೆ ಶಾಲೆಯಲ್ಲಿ ಸಂಭ್ರಮದ ಪ್ರವೇಶೋತ್ಸವ

ಮುಡೂರ್ ತೋಕೆ ಶಾಲೆಯಲ್ಲಿ ಸಂಭ್ರಮದ ಪ್ರವೇಶೋತ್ಸವ

 ವರ್ಕಾಡಿ: ಎಸ್ ಎಸ್ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ಶಾಲಾ ಪ್ರವೇಶೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು. ಪ್ರವೇಶೋತ್ಸವದ ಜೊತೆಯಲ್ಲಿ ಶಾಸಕರ ನಿಧಿಯಿಂದ ಲಭಿಸಿದ ಲ್ಯಾಪ್ ಟಾಪ್ ಉದ್ಘಾಟನೆ ಹಾಗೂ ವಿಮುಕ್ತಿ ಕಾರ್ಯಕ್ರಮ ವು ಜರಗಿತು. ವಾರ್ಡ್ ಸದಸ್ಯೆ ಶ್ರೀ ಮತಿ ಜೆಸಿಂತ ಡಿಸೋಜ, ಮಾಜಿ ಬ್ಲಾಕ್ ಪಂಚಾಯತ್ ಅಧ್ಯಕ್ಷ ಶ್ರೀ ಮೂಸ, ಶಾಲಾ ಪ್ರಬಂದಕರಾದ ಶ್ರೀ ದೇವಪ್ಪ ಶೆಟ್ಟಿ, ಶಾಲಾ ಪಿ ಟಿ ಎ ಅಧ್ಯಕ್ಷ ಶ್ರೀ ಸಿದ್ದಿಕ್ ಮುಂತಾದವರು ಭಾಗವಹಿಸಿದರು.ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶಶಿಕಲಾ ಸ್ವಾಗತಿಸಿದ ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕ ಶ್ರೀ ಶೈಲೇಶ್ ನಡೆಸಿ ಶಾಲಾ ಶಿಕ್ಷಕಿ ಶ್ರೀಮತಿ ಫೌಸಿಯ ಧನ್ಯವಾದವಿತ್ತರು.