![]() |
| BPC Vijaya Kumar @ Our School |
Friday, 22 July 2022
ಚಾಂದ್ರ ದಿನ 2022
Sunday, 17 July 2022
Congratulations
ALIF Arabic Talent Test - 2022 ಸ್ಪರ್ಧೆಯಲ್ಲಿ ಭಾಗವಹಿಸಿ A ಗ್ರೇಡ್ ಪಡೆದ ನಮ್ಮ ಶಾಲಾ ವಿದ್ಯಾರ್ಥಿನಿ ಮರಿಯ್ಯಮ್ ಮುಫೀದ ಳಿಗೆ ಅಭಿನಂದನೆಗಳು💐
Thursday, 30 June 2022
PTA General Body 2022
ಮುಡೂರು ತೋಕೆ ಶಾಲೆ ರಕ್ಷಕ-ಶಿಕ್ಷಕ ಸಂಘ ಪದಾಧಿಕಾರಿಗಳ ಆಯ್ಕೆ
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರು ತೋಕೆ ಶಾಲೆಯಲ್ಲಿ 2022-23ನೇ ಶೈಕ್ಷಣಿಕ ವರ್ಷದ ನೂತನ ಪಿ ಟಿ ಎ ಸಭೆಯನ್ನು ರಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ವಹಿಸಿದರು. ಕಾರ್ಯಕ್ರಮ ದ ಉದ್ಘಾಟನೆ ಯನ್ನು ಕೇದುಂಬಾಡಿ ವಾರ್ಡ್ ಸದಸ್ಯರಾದ ಶ್ರೀ ಶಿವರಾಜ್ ನೆರವೇರಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ ದೇವಪ್ಪ ಶೆಟ್ಟಿ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು. ಬಳಿಕ ನೂತನ ರಕ್ಷಕ ಶಿಕ್ಷಕ ಸಂಘದ ಸಮಿತಿಯ ರೂಪಿಕಾರಣ ನಡೆಸಲಾಯಿತು. ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದಿಕ್ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಶಿವರಾಜ್ ಕೇದುಂಬಾಡಿ ಆಯ್ಕೆಯಾದರು. ಮಾತೃ ಪಿ.ಟಿ. ಎ ಅಧ್ಯಕ್ಷರಾಗಿ ಶ್ರೀಮತಿ ತೇಜಾಕ್ಷಿ ಹಾಗೂ ಉಪಾಧ್ಯಕ್ಷೆ ಯಾಗಿ ಶ್ರೀಮತಿ ಸುಬೈದ ರವರು ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯ ರಾದ ಶ್ರೀ ಶೈಲೇಶ್ ಸ್ವಾಗತಿಸಿದ ಕಾರ್ಯಕ್ರಮ ಕ್ಕೆ ಶಾಲಾ ಶಿಕ್ಷಕಿ ಶ್ರೀ ಮತಿ ಜಯಲಕ್ಷ್ಮಿ ಧನ್ಯವಾದವಿತ್ತರು. ಶಾಲಾ ಶಿಕ್ಷಕಿ ಶ್ರೀ ಮತಿ ಲಾವಣ್ಯ ಕಾರ್ಯಕ್ರಮ ವನ್ನು ನಿರೂಪಿಸಿದರು.
Wednesday, 29 June 2022
Tuesday, 21 June 2022
School Parliament 2022
ಮುಡೂರುತೋಕೆ ಶಾಲಾ ಪಾರ್ಲಿಮೆಂಟ್
Monday, 6 June 2022
Sunday, 5 June 2022
Free Note Book Distribution
ಉಚಿತ ನೋಟ ಪುಸ್ತಕ ವಿತರಣೆ
ಎಸ್.ಎಸ್.ಎ. ಎಲ್.ಪಿ.ಶಾಲೆ ಮುಡೂರು ತೋಕೆ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಭಾಗವಾಗಿ ಶಾಲಾ ಮಕ್ಕಳಿಗೆ ಬರೆಯಲು ಅಗತ್ಯವಾದ ಎಲ್ಲಾ ನೋಟ್ ಪುಸ್ತಕಗಳನ್ನು ಪ್ರತೀ ವರ್ಷದಂತೆ ಈ ವರ್ಷವೂ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಶ್ರೀ ಜಯಪ್ರಕಾಶ್ ಭಂದರಮನೆ ಯವರು ಉಚಿತವಾಗಿ ಮಕ್ಕಳಿಗೆ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ರಕ್ಷಕರು, ಶಾಲಾ ಮುಖ್ಯ ಶಿಕ್ಷಕರೂ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
Thursday, 2 June 2022
ಉಚಿತ ಬ್ಯಾಗ್ ವಿತರಣೆ
ಎಸ್.ಎಸ್.ಎ. ಎಲ್.ಪಿ.ಶಾಲೆ ಮುಡೂರು ತೋಕೆ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಭಾಗವಾಗಿ ನವಾಗತರಿಗೆ ಸಾಂದ್ವನ ಎಂಬ ಸಹೃದಯಿ ಸಂಘಟನೆಯು ಉಚಿತವಾಗಿ ಬ್ಯಾಗ್ ವಿತರಿಸಿತು. ಕಾರ್ಯಕ್ರಮದಲ್ಲಿ ಸಾಂದ್ವನ ಸಂಘಟನೆಯ ಸದಸ್ಯರಾದ ಶ್ರೀ ತ್ರಿಶಾಂತ್ ಹಾಗೂ ಶ್ರೀ ಸೂರಜ್ ರವರು ಮಕ್ಕಳಿಗೆ ಬ್ಯಾಗ್ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ರಕ್ಷಕರು, ಶಾಲಾ ಮುಖ್ಯ ಶಿಕ್ಷಕರೂ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
![]() |
| Sri Trishanth |
![]() |
| Sri Sooraj |
![]() |
| School Bag Distribution |
![]() |
| Vote Of Thanks |
ಮುಡೂರುತೋಕೆ ಶಾಲಾ ಪ್ರವೇಶೋತ್ಸವ
ಎಸ್.ಎಸ್.ಎ. ಎಲ್.ಪಿ.ಶಾಲೆ ಮುಡೂರು ತೋಕೆ ಶಾಲೆಯಲ್ಲಿ 2022ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯ ಶ್ರೀ ಶಿವರಾಜ್ ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಕಾಡಮಿಕ್ ಮಾಸ್ಟರ್ ಪ್ಲಾನ್ ನನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕರಾದ ಶ್ರೀ ದೇವಪ್ಪ ಶೆಟ್ಟಿಯವರು ವಹಿಸಿದರು. ಪಿ ಟಿ ಎ ಅಧ್ಯಕ್ಷ ರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯಶಿಕ್ಷಕ ಶೈಲೇಶ್ ರವರು ಸ್ವಾಗತಿಸಿದ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಚಿತ್ರಾ ರವರು ನಿರೂಪಿಸಿದರು. ಶಿಕ್ಷಕಿ ಲವಣ್ಯರವರು ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.
































.jpeg)




.jpeg)




.jpeg)