ಎಸ್ ಎಸ್ ಎ ಎಲ್ ಪಿ ಶಾಲೆ ಮುಡೂರುತೋಕೆಯಲ್ಲಿ ಪರಿಸರ ದಿನಾಚರಣೆ ಯನ್ನು ಆಚರಿಸಲಾಯಿತು.ಶಾಲಾ ಅಸೆಂಬ್ಲಿಯಲ್ಲಿ ಮುಖ್ಯೋಪಾಧ್ಯಾಯರು ಪರಿಸರ ದಿನದ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಟ್ಟರು.ಪರಿಸರವನ್ನು ಸಂರಕ್ಷಿಸುವ ಪ್ರತಿಜ್ಞೆ ಕೈಗೊಳ್ಳಲಾಯಿತು.ತರಗತಿ ಮಟ್ಟದಲ್ಲಿ ಪೋಸ್ಟರ್ ನಿರ್ಮಾಣ,ಪರಿಸರಕ್ಕೆ ಸಂಬಂಧಿಸಿದ ಚಿತ್ರ ರಚನೆ, ಘೋಷಣಾ ವಾಕ್ಯಗಳ ರಚನೆ ಮೊದಲಾದ ಚಟುವಟಿಕೆಗಳನ್ನು ನಡೆಸಲಾಯಿತು. ಕೃಷಿ ಭವನದಿಂದ ಲಭಿಸಿದ ಗಿಡವನ್ನು ಶಾಲಾ ಪರಿಸರದಲ್ಲಿ ನಡಲಾಯಿತು.ಮಕ್ಕಳು ತಂದಂತಹ ಗಿಡಗಳನ್ನು ಶಾಲಾ ಕೃಷಿ ತೋಟದಲ್ಲಿ ಮಕ್ಕಳೇ ನೆಟ್ಟು ಸಂಭ್ರಮಿಸಿದರು.


No comments:
Post a Comment