ಚಾಂದ್ರದಿನ
- 1969 ಜುಲೈ 16 ಬೆಳಗ್ಗೆ 7 ಗಂಟೆ

ಅಪೋಲೋ 11- ಕೇಪ್ ಕೆನಡಿಯಿಂದ ಹೊರಟ ಮೊದಲ ಬಾಹ್ಯಾಕಾಶ ನೌಕೆ
ಅಮೇರಿಕದ ಕೇಪ್ ಕೆನಡಿ ರೋಕೆಟ್ ಉಡ್ಡಯನ ಕೇಂದ್ರದಿಂದ ರೋಕೆಟಿಗೆ ಜೋಡಿಸಿದ ನೌಕೆಯನ್ನು ಮೂವರು ಪ್ರವೇಶಿಸಿದರು-ನೀಲ್ ಆರ್ಮ್ ಸ್ಟ್ರಾಂಗ್,ಎಡ್ವಿನ್ ಆಲ್ಡ್ರಿನ್ ಮತ್ತು ಮೈಕಲ್ ಕೊಲಿನ್ಸ್ .ರೋಕೆಟ್ ಅಂತರಿಕ್ಷದತ್ತ ಹಾರಿತು .ಭೂಮಿಯ ಕೋಟಿಗಟ್ಟಲೆ ಜನರ ಮನದ ಆಕಾಂಕ್ಷೆಯನ್ನು ಹೊತ್ತ ನೌಕೆಯು ರೋಕೆಟ್ ನಿಂದ ಬೇರ್ಪಟ್ಟು ಚಂದ್ರನಲ್ಲಿಗೆ ಚಲಿಸಿತು.
- ಜುಲೈ 21 ಬೆಳಗ್ಗೆ 1.48 ಗಂಟೆ
ಅಪೋಲೋ 11 ಯಾತ್ರಿಗಳು :ಕಮಾಂಡರ್ ನೀಲ್ ಆರ್ಮ್ ಸ್ಟ್ರಾಂಗ್,ಕಮಾಂಡ್ ಮೊಡ್ಯೂಲ್ ಪೈಲೆಟ್ ಮೈಕಲ್ ಕೊಲಿನ್ಸ್ ,ಲೂನಾರ್ ಮೊಡ್ಯೂಲ್ ಪೈಲೆಟ್ ಎಡ್ವಿನ್ ಆಲ್ಡ್ರಿನ್
ಚಂದ್ರನಲ್ಲಿಯ 'ಪ್ರಶಾಂತ ಸಾಗರ ' ಎಂದು ಹೆಸರಿಸಲ್ಪಟ್ಟ ಸ್ಥಳದಲ್ಲಿ ನೌಕೆಯು ಇಳಿಯಿತು. ನೀಲ್ ಆರ್ಮ್ ಸ್ಟ್ರಾಂಗ್ ಮೊದಲಾಗಿ ಚಂದ್ರನಲ್ಲಿಗೆ ಪಾದಾರ್ಪಣೆಗೈದನು .ಸ್ವಲ್ಪ ಸಮಯದ ಬಳಿಕ ಎಡ್ವಿನ್ ಆಲ್ಡ್ರಿನ್ ಕೂಡಾ ಇಳಿದನು. ಈ ಸಮಯದಲ್ಲಿ ಮೈಕಲ್ ಕೊಲಿನ್ಸ್ ನೌಕೆಯಲ್ಲಿ ಕುಳಿತುಕೊಂಡು ಚಂದ್ರನನ್ನು ಸುತ್ತುವರಿಯುತ್ತಿದ್ದನು. ಮೂರು ಗಂಟೆ ಹೊತ್ತು ಅಲ್ಲೇ ಕಳೆದು ಅಲ್ಲಿನ ಕಲ್ಲು ,ಮಣ್ಣುಗಳನ್ನು ಸಂಗ್ರಹಿಸಿ ಅವರು ಹಿಂತಿರುಗಿದರು. ಜುಲೈ 24ನೇ ರಾತ್ರಿ 10.19 ಕ್ಕೆ ಸರಿಯಾಗಿ ಶಾಂತ ಸಾಗರದಲ್ಲಿ ಬಂದಿಳಿದರು.ಹೀಗೆ ಚಂದ್ರನೆಡೆಗೆ ಮಾನವನ ಮೊದಲ ಯಾತ್ರೆ ಯಶಸ್ವಿಯಾಗಿ ಕೊನೆಗೊಂಡಿತು.
ಚಾಂದ್ರ ದಿನ ನಮ್ಮ ಶಾಲೆಯಲ್ಲಿ
ಚಾಂದ್ರ ದಿನದಂದು ನಮ್ಮ ಶಾಲಾ ಅಸೆಂಬ್ಲಿಯಲ್ಲಿ ಮಕ್ಕಳಿಗೆ ದಿನ ವಿಶೇಷತೆಯನ್ನು ಶ್ರೀಮತಿ ಶಶಿಕಲ ಟೀಚರ್ ರವರು ತಿಳಿಸಿಕೊಟ್ಟರು.
No comments:
Post a Comment