Tuesday, 26 July 2016

ಕಾರ್ಗಿಲ್ ವಿಜಯ ದಿನ



ಕಾರ್ಗಿಲ್ ಯುದ್ಧದ ವಿಜಯ ದಿವಸ. ಯುದ್ಧವಾಗಿ 17ವರ್ಷಗಳೇ ಕಳೆದಿವೆ. ತನ್ನಿಮಿತ್ಯ ಈ ಲೇಖನ
ವೀರ ಯೋದರಿಗೆ ಗೌರವದ ನಮನ.
ಕಾಶ್ಮೀರದ ಶ್ರೀನಗರದಿಂದ 205ಕಿ.ಮೀ.ಗಳ ದೂರದಲ್ಲಿರುವ ಕಾರ್ಗಿಲ್ ಕಠಿಣವಾದ ನೀರ್ಗಲ್ಲುಗಳಿಂದ ಆವೃತವಾದ, ಪ್ರಪಂಚದ ಕೆಲವು ಅತ್ಯಂತ ಎತ್ತರದ ಪರ್ವತಗಳಿಂದ ಕೂಡಿದ ಲಡಾಖ್ ಶ್ರೇಣಿಗೆ ಸೇರಿದ ಪ್ರದೇಶ. ಶ್ರೀನಗರ ಮತ್ತು ಲೇಹ್ ಪ್ರದೇಶಕ್ಕೆ ಇರುವ ಏಕೈಕ ಭೂಮಾರ್ಗ. ಅತ್ಯಂತ ಕ್ಲಿಷ್ಟ ಮತ್ತು ದುರ್ಗಮವಾದ ಭೂ ಸರಹದ್ದು. ವರ್ಷದ ಮುಕ್ಕಾಲು ಅವಧಿಯಲ್ಲಿ, 084 ದೀಗ್ರಿ ಸೆಲ್ಸಿಯಸ್ ತಾಪಮಾನವಿರುವ ಶೀತಲ ಮರಭೂಮಿ. 160ಕಿ.ಮೀ.ಗಳ ಹಿಮಚ್ಛಾದಿತ ಪರ್ವತ ಹೊಂದಿರುವ ಊಹಾತೀತ ಸ್ಥಳ.

Friday, 22 July 2016

ಚಾಂದ್ರ ದಿನ

ಚಾಂದ್ರದಿನ 


  • 1969 ಜುಲೈ 16 ಬೆಳಗ್ಗೆ 7 ಗಂಟೆ



ಅಪೋಲೋ 11- ಕೇಪ್ ಕೆನಡಿಯಿಂದ ಹೊರಟ  ಮೊದಲ ಬಾಹ್ಯಾಕಾಶ ನೌಕೆ 


ಅಮೇರಿಕದ ಕೇಪ್ ಕೆನಡಿ ರೋಕೆಟ್ ಉಡ್ಡಯನ ಕೇಂದ್ರದಿಂದ ರೋಕೆಟಿಗೆ ಜೋಡಿಸಿದ ನೌಕೆಯನ್ನು ಮೂವರು ಪ್ರವೇಶಿಸಿದರು-ನೀಲ್ ಆರ್ಮ್ ಸ್ಟ್ರಾಂಗ್,ಎಡ್ವಿನ್ ಆಲ್ಡ್ರಿನ್ ಮತ್ತು ಮೈಕಲ್ ಕೊಲಿನ್ಸ್ .ರೋಕೆಟ್ ಅಂತರಿಕ್ಷದತ್ತ ಹಾರಿತು .ಭೂಮಿಯ ಕೋಟಿಗಟ್ಟಲೆ ಜನರ ಮನದ ಆಕಾಂಕ್ಷೆಯನ್ನು ಹೊತ್ತ ನೌಕೆಯು ರೋಕೆಟ್ ನಿಂದ ಬೇರ್ಪಟ್ಟು ಚಂದ್ರನಲ್ಲಿಗೆ ಚಲಿಸಿತು. 

Wednesday, 20 July 2016

Months and Festivels of 2016

 
FESTIVAL CALENDER OF S S A L P S MUDOORTHOKE
 
2016
Jan
1 Friday New Year
12 Tuesday Swami Vivekananda     Jayanti
14 Thursday Makar Sankranti
14 Thursday Pongal
16 Saturday Guru Govind Singh Jayanti
23 Saturday Subhas Chandra Bose Jayanti
26 Tuesday Republic Day

Tuesday, 19 July 2016

World Population Day 2016

          ವಿಶ್ವ ಜನಸಂಖ್ಯಾ ದಿನ  

ಜನಸಂಖ್ಯೆ ಹೆಚ್ಚಳದಿಂದ  ಉಂಟಾಗುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು  ಉದ್ದೇಶದಿಂದ ಜುಲೈ ೧೧ ರಂದು ಪ್ರತಿ ವರ್ಷವು  ಜನಸಂಖ್ಯಾ ದಿನವನ್ನು  ಆಚರಿಸಲಾಗುತಿದೆ.

Thursday, 14 July 2016

ಸಮವಸ್ತ್ರ ವಿತರಣೆ

ಸಮವಸ್ತ್ರ ವಿತರಣೆ



1ನೇ ತರಗತಿಯ ವಿದ್ಯಾರ್ಥಿಗಳಿಗೆ ಅಧ್ಯಾಪಕರ ವತಿಯಿಂದ ಸಮವಸ್ತ್ರ ವಿತರಿಸಲಾಯಿತು.

Our first CPTA meeting

ಪ್ರಥಮ CPTA ಸಭೆ

Tuesday, 12 July 2016

ಚುನಾವಣಾ ಪ್ರಕ್ರಿಯೆ

ಚುನಾವಣಾ ಬೆಳಕಲ್ಲಿ ಮುಡೂರು ತೋಕೆ

ಮಂಜೇಶ್ವರ ಜು ೧೨:  ವರ್ಕಾಡಿ ಗ್ರಾಮದ ಲ್ಲಿ ರುವ ಶ್ರೀ ಸುಬ್ರಮಣ್ಯ  ಎ ಯಲ್ ಪಿ ಶಾಲೆ ಮುಡೂರು ತೋಕೆ ಶಾಲೆ ಯಲ್ಲಿ ೧೨.೦೭.೨೦೧೬  ಮಂಗಳವಾರದಂದು ಮಕ್ಕಳ ಪಾರ್ಲಿಮೆಂಟ್ ಚುನಾವಣೆ ವಯಸ್ಕರ ಮತದಾನ ಮಾದರಿಯಂತೆ ನಡೆದ ಈ ಚುನಾವಣೆಯಲ್ಲಿ ಮಕ್ಕಳನ್ನೇ ಚುನಾವಣಾ ಅಧಿಕಾರಿಗಳಾಗಿ ನೇಮಿಸಲಾಯಿತು. 

Sunday, 10 July 2016

ಶಾಲಾ ಚುನಾವಣೆ:ನಾಮ ಪತ್ರ ಸಲ್ಲಿಕೆ

ಶಾಲಾ ಚುನಾವಣೆ

ಮುಡೂರ್ ತೋಕೆ ಜು 8:ಎಸ್.ಎಸ್.ಎ.ಎಲ್.ಪಿ.ಎಸ್.ಮುಡೂರ್ ತೋಕೆಯಲ್ಲಿ 2016-17ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಮಂತ್ರಿ ಮಂಡಲ ಚುನಾವಣೆಯ ಭಾಗವಾಗಿ ಮೊದಲ ಹಂತದಲ್ಲಿ ಮಕ್ಕಳಿಂದ ಶಾಲಾ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಚಂದ್ರಾವತಿಯವರು ನಾಮಪತ್ರವನ್ನು ಸ್ವೀಕರಿಸಿದರು.


Saturday, 9 July 2016

ಪಯರ್

ಅಂತಾರಾಷ್ತ್ರೀಯ ದ್ವಿದಳ ಧಾನ್ಯ ವರ್ಷ 

"ಸುಸ್ಥಿರ ಭವಿಷ್ಯಕ್ಕೆ ಪೋಷಕಗಳಿಂದ ಕೂಡಿದ ಬೀಜ "

 2015 ಜೀವಿಗಳ ಅಸ್ತಿತ್ವಕ್ಕೆ ಆಧಾರವಾದ ಮಣ್ಣು ಬೆಳಕು ಎಂಬಿವುಗಳಿಗೆ ಸಂಬಂಧಿಸಿದ ವರ್ಷಾಚರಣೆಯಾದರೆ  2016ನ್ನು ಅಂತಾರಾಷ್ತ್ರೀಯ ದ್ವಿದಳ ಧಾನ್ಯ ವರ್ಷವಾಗಿ ಯು.ಎನ್.ಜನರಲ್ ಎಸಂಬ್ಲಿಯ ಅಂಗೀಕಾರದೊಂದಿಗೆ ಆಚರಿಸಲಾಗುತ್ತದೆ.ಸಾರ್ವಜನಿಕ ಆರೋಗ್ಯ,ಆರೋಗ್ಯಸಂರಕ್ಷಣೆಯನ್ನು ಧೃಡಪಡಿಸುವುದು ಎಂಬುವುದು ವರ್ಷಾಚರಣೆ ಕಾರ್ಯಕ್ರಮದ ಪ್ರಧಾನ ಉದ್ದೇಶವಾಗಿದೆ. ಪ್ರೊಟೀನ್,ಪೋಲಿಕ್  ಆಸಿಡ್ ,ಅಮಿನೋ ಆಸಿಡ್ ಏ0ಟಿ ಓಕ್ಸಿಡೆಂಟ್ ಗಳು ಎಂಬಿವುಗಳಿಂದ  ದ್ವಿದಳ ಧಾನ್ಯಗಳು ಸಮೃಧ್ಧವಾಗಿದೆ .
ದ್ವಿದಳ ಧಾನ್ಯಗಳು ನಮ್ಮ ಪ್ರಧಾನ ಆಹಾರ ವಸ್ತುವಾಗಿದೆ. ಭಾರತವು ಲೋಕದಲ್ಲಿ ಅತೀ ಹೆಚ್ಚು ದ್ವಿದಳ ಧಾನ್ಯಗಳ ಉತ್ಪಾದನೆಯನ್ನೂ,ಉಪಯೋಗವನ್ನೂ ಮಾಡುವ ದೇಶವಾಗಿದೆ.ಆದರೆ ಅಂತಾರಾಷ್ತ್ರೀಯ ಗುಣಮಟ್ಟದೊಂದಿಗೆ ಹೋಲಿಸುವಾಗ ಭಾರತದ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗಿದೆ.ಮಳೆ ನೇರವಾಗಿ ಲಭಿಸುವ ಭೂಮಿಯಲ್ಲಿ ಮಾತ್ರ  ಭಾರತದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯು 85%  ನಡೆಯುವುದು ,ಬಾಕಿ 15% ನೀರಾವರಿ  ನಡೆಸುವ ಭೂಮಿಯಲ್ಲಿಯೂ ಧಾನ್ಯಗಳ ಉತ್ಪಾದನೆಯಲ್ಲಿ  1950ರಿಂದ  2013ರ ವರೆಗಿನ ಕಾಲಾವಧಿಯನ್ನು ತೆಗೆದುಕೊಂಡರೆ ಸರಾಸರಿ ಹೆಚ್ಚಳ  ಒಂದು ಶೇಕಡಾಕ್ಕಿಂತ ಸ್ವಲ್ಪ ಹೆಚ್ಚು ಮಾತ್ರ ಎಂಬುದನ್ನು  ಕಂಡುಕೊಳ್ಳಬಹುದು .
ಶರೀರದ ಬೆಳವಣಿಗೆಗೆ ಪ್ರೊಟೀನ್ ಅತ್ಯಾವಶ್ಯಕವಾಗಿರುವುದರಿಂದ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ದ್ವಿದಳ ಧಾನ್ಯವನ್ನು ಸೇವಿಸಿ ಪೋಷಕಾಹಾರ ಕೊರತೆಯಿಂದ ಉಂಟಾಗುವ ರೋಗಗಳಿಂದ ಮುಕ್ತಿ ಪಡೆಯಲಿ ಎಂದು ಬಯಸುವ, 
ಅಧ್ಯಾಪಕ ಹಾಗೂ ವಿದ್ಯಾರ್ಥಿಗಳ ವೃಂದ 
ಎಸ್,ಎಸ್,ಎ,ಎಲ್,ಪಿ,ಎಸ್,ಮೂಡೂರ್ ತೋಕೆ


"Payar" in our school  
 
                                       

ಪ್ರಥಮ ಬಾಲಸಭೆಯ ವರದಿ

ಪ್ರಥಮ ಬಾಲಸಭೆಯ ವರದಿ
              ದಿನಾಂಕ 30/6/2016  ನೇ ಗುರುವಾರದಂದು ನಮ್ಮ ಶಾಲೆಯಲ್ಲಿ ಈ  ಶೈಕ್ಷಣಿಕ ವರ್ಷದ ಪ್ರಥಮ ಬಾಲ ಸಭೆಯನ್ನು ಉದ್ಘಾಟಿಸಲಾಯಿತು.ನಮ್ಮ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಚಂದ್ರಾವತಿ ಟೀಚರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,4ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಮಂಜುಶ್ರೀಯವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಮರಿಯಮ್ಮ ರಾಹಿಲರವರು ಸ್ವಾಗತ ಕೋರಿದರು,ಬಳಿಕ ಮಕ್ಕಳ ವಿವಿಧ ಕಾರ್ಯಕ್ರಮಗಳು ಜರುಗಿತು.ನಾಜಿಹರವರು ದನ್ಯವಾದ ಸಮರ್ಪಿಸಿದರು .

Tuesday, 5 July 2016


ರಂಜಾನ್ ಹಬ್ಬದ ಶುಭಾಶಯಗಳು....
ರಂಜನ್ ಹಬ್ಬದ ಪ್ರಯುಕ್ತ ಮಕ್ಕಳಿಂದ "ಮೆಹಂದಿ" ಅಲಂಕಾರ