Wednesday 19 September 2018


ಕಂಪ್ಯೂಟರ್,ಅನುಭಂದಿತಉಪಕರಣಗಳ ಉದ್ಘಾಟನಾ ಸಮಾರಂಭ


ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರುತೋಕೆ ಯಲ್ಲಿ ಲೋಕ ಸಭಾ ಸದಸ್ಯರ ಅನುದಾನ ನಿಧಿಯಿಂದ ಲಭಿಸಿದ ಕಂಪ್ಯೂಟರ್ ಹಾಗೂ ಅನುಬಂದಿತ ಉಪಕರಣಗಳ ಉದ್ಘಾಟನಾ ಕಾರ್ಯಕ್ರಮವು ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಸರಗೋಡು ಲೋಕ ಸಭಾ ಸದಸ್ಯರಾದ ಶ್ರೀ ಪಿ. ಕರುಣಾಕರನ್ ರವರು ಉದ್ಘಾಟಿಸಿದ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವರ್ಕಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೇ ಶ್ರೀ ಮತಿ ಡಿಸೋಜರವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯೆ ಶ್ರೀಮತಿ ಜೆಸಿಂತಾ ಡಿಸೋಜ ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು. ಶಾಲಾ ಪ್ರಬಂಧಕರಾದ ಶ್ರೀ ದೇವಪ್ಪ ಶೆಟ್ಟಿ ಸ್ವಾಗತಿಸಿ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಚಂದ್ರಾವತಿ ಯವರು ವಂದಿಸಿದ ಕಾರ್ಯಕ್ರಮ ವನ್ನು ಶಾಲಾ ಶಿಕ್ಷಕಿ ಶ್ರೀಮತಿ ಚಿತ್ರಾ ರವರು ನಿರೂಪಿಸಿದರು.

Some Pictures in connection with this programme is here.....>>>

  
 














No comments:

Post a Comment