Friday, 23 September 2016

ತೆಂಗಿನ ಎಲೆಯಿಂದ ಮೂಡಿದ ಆಟಿಕೆಗಳು 








Sunday, 18 September 2016

ಶಾಲಾ ಅಧ್ಯಾಪಕರು ಹಾಗು ವಿದ್ಯಾರ್ಥಿಗಳ ವತಿಯಿಂದ ಓಣಂ ಹಬ್ಬ ಆಚರಣೆ
ಕಾರ್ಯಕ್ರಮದ ಉದ್ಘಾಟನೆ ಯನ್ನು  ರಕ್ಷಕ ಶಿಕ್ಷಕ ಸಂಗದ ಅಧ್ಯಕ್ಷ ಅಬ್ದುಲ್ ರಹಿಮಾನ್ ನೆರವೇರಿಸಿದರು.  





ಅಧ್ಯಾಪಕರು ಹಾಗು ವಿದ್ಯಾರ್ಥಿಗಳ ಸಹಭಾಗಿತ್ವದಿಂದ  ಮಾಡಿದ ಪೋವೊಲಿ ... 

Thursday, 18 August 2016

Table distribution


DISTRIBUTION OF TABLES BY OUR MANEGER
ಸ್ವಾತಂತ್ರೋತ್ಸವ ದಿನದಂದು ನಮ್ಮ ಶಾಲಾ ಮನೇಜರ್ ರಾದ ಶ್ರೀ ದೇವಪ್ಪ ಶೆಟ್ಟಿಯವರು ಎಲ್ಲಾ ತರಗತಿಗಳಿಗೆ ಮೇಜನ್ನು ಉಡುಗೊರೆಯಾಗಿ  ನೀಡಿದರು.


Report of independence day 2016

ಸ್ವಾತಂತ್ರ್ಯ ದಿನಾಚರಣೆಯ ವರದಿ
              70 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಅದ್ಧೂರಿಯಾಗಿ  ಆಚರಿಸಲಾಯಿತು.ಸಮಯ ಸರಿಯಾಗಿ 9.30ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ಜೈಕಾರಗಳೊಂದಿಗೆ ಮೆರವಣಿಗೆ ನಡೆಸಲಾಯಿತು.ಬಳಿಕ ಶಾಲಾ ಅಸೆಂಬ್ಲಿ ನಡೆಸಲಾಯಿತು.ವಾರ್ಡ್  ಸದಸ್ಯರಾದ ಜೆಸಿಂತಾ ರವರಿಂದ ಧ್ವಜಾರೋಹಣ ನೆರವೇರಿತು. ಈ ಸಮಯದಲ್ಲಿ ವಿದ್ಯಾರ್ಥಿಗಳು,ಅಧ್ಯಾಪಕರು ಅಲ್ಲದೆ ಶಾಲಾ  ಹಳೆ ವಿದ್ಯಾರ್ಥಿಗಳು,ಮೆನೇಜರ್ ,ರಕ್ಷಕರು ,ಹಾಗೂ ಊರಿನ ಜನರು ಉಪಸ್ಥಿತರಿದ್ದರು.
            ಬಳಿಕ ಸಭಾ ಕಾರ್ಯಕ್ರಮ ನೆರವೇರಿತು.ಅತಿಥಿಗಳಾಗಿ ಮಾಜಿ ಬ್ಲೋಕ್ ಪಂಚಾಯತ್ ಸದಸ್ಯರಾದ ಮೂಸ kunhi ,ಮಾಜಿ ಪಂಚಾಯತ್ ಸದಸ್ಯರಾದ ನಿಕೋಲಸ್ ಮೊಂತೆರೋ, ಊರಿನ ಹಿರಿಯರಾದ ಟಿ.ಯಮ್.ಮೊಹಮ್ಮದ್ , ಪಿ,ಟಿ.ಎ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಉಸ್ತಾದ್, ಶಾಲಾ ಮೆನೇಜರ್ ರಾದ ದೇವಪ್ಪ ಮಾಸ್ಟರ್ ಉಪಸ್ಥಿತರಿದ್ದರು. ಶ್ರೀಮತಿ ಶಶಿಕಲ ಟೀಚರ್ ರವರು ಕಾರ್ಯಕ್ರಮ ನಿರೂಪಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಚಂದ್ರಾವತಿ ಟೀಚರ್ ಸ್ವಾಗತ ಕೋರಿದರು. ಎಲ್ಲಾ ಅಥಿತಿಗಳು ಕಾರ್ಯಕ್ರಮಕ್ಕೆ ಶುಭ ಕೋರಿದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಿರಿಮೆಯ ಅಂಗವಾಗಿ ನಡೆಸುವ ಯೋಜನೆಯ ಮಾಹಿತಿ ನೀಡಿ ದಾನಿಗಳ ಹೆಸರುಗಳನ್ನು ಓದಿ ಹೇಳಲಾಯಿತು. ಶೈಲೇಶ್ ಸರ್ ರವರು ಧನ್ಯವಾದ ಸಮರ್ಪಿಸಿದರು.

               ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಶಾಲಾ ವಿದ್ಯಾರ್ಥಿನಿಯಾದ  ಕುಮಾರಿ ಮಂಜುಶ್ರೀ  ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಂದ ದೇಶ ಭಕ್ತಿಗೀತೆ ,ನಾಟಕ,ಅಭಿನಯ ಗೀತೆ ,ಮಾಸ್ ಡ್ರಿಲ್,ನೃತ್ಯ ಮೊದಲಾದ ಕಾರ್ಯಕ್ರಮಗಳು ಜರುಗಿತು.ಈ ನಡುವೆ ಎಲ್ಲರಿಗೂ ಸಿಹಿ ತಿಂಡಿ ಹಂಚಲಾಯಿತು.ಕೊನೆಗೆ ರಾಷ್ಟಗೀತೆ ಹಾಡುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. 

Wednesday, 17 August 2016

Photos of independence day

PHOTOS OF 70TH INDEPENDENCE DAY CELEBRATOIN



ಶಾಲಾ ಮೆರವಣಿಗೆ

ಶಾಲಾ ಅಸೆಂಬ್ಲಿ

ದ್ವಜಾರೋಹಣ:ಜೆಸಿಂತಾ ರವರಿಂದ

ನೆರೆದಿರುವ ಸಭಿಕರು

ನಿರೂಪಣೆ:ಶ್ರೀಮತಿ ಶಶಿಕಲ ಟೀಚರ್ ರವರಿಂದ
ಸ್ವಾಗತ:ಮುಖ್ಯೋಪಾಧ್ಯಾಯರಿಂದ


ಅತಿಥಿಗಳ ಶುಭ ಹಾರೈಕೆ







ಸಾಂಸ್ಕೃತಿಕ ಕಾರ್ಯಕ್ರಮಗಳು


















ಸಿಹಿ ತಿಂಡಿ ವಿತರಣೆ

ಧನ್ಯವಾದ ಸಮರ್ಪಣೆ


-

Saturday, 13 August 2016

ತರಕಾರಿ ಬೀಜ ವಿತರಣೆ

ಮಕ್ಕಳಿಗೆ ತರಕಾರಿ ಬೀಜ ವಿತರಣೆ, ನಮ್ಮ ಶಾಲಾ ಮಾತೃ ಸಂಘದ ಅಧ್ಯಕ್ಷ ರಿಂದ




ಜಂತು ಹುಳ ನಿವಾರಣಾ ದಿನ

ಜಂತು ಹುಳ ನಿವಾರಣಾ ಸಲುವಾಗಿ ಆರೋಗ್ಯ ಕೆಂದ್ರ ದಿಂದ ಸಿಸ್ಟರ್ ಶೋಭಾ ರವರಿಂದ ಶಾಲೆಗೆ ಭೇಟಿ ಹಾಗೂ  ಮಕ್ಕಳಿಗೆ ಮಾತ್ರೆ ವಿತರಣೆ



Monday, 8 August 2016

ಹೀರೋಶಿಮಾ ದಿನಾಚರಣೆ

ಹೀರೋಶಿಮಾ ದಿನಾಚರಣೆ





ಹೀರೋಶಿಮಾ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಯುದ್ಧದ ದುಷ್ಪರಿಣಾಮಗಳು,ಅಣು ಬಾಂಬ್ ನ ದಾಳಿಗೆ ಸಿಲುಕಿದ ಹೀರೋಶಿಮಾ ಸ್ಥಿತಿಗತಿ ,ಮೊದಲಾದ ವಿಷಯನ್ನೂಳಗೊಂಡ Power point presentation ಪ್ರದರ್ಶಿಸಲಾಯಿತು.

Monday, 1 August 2016

ಆಟಿಮಾಸ...ಆಟೀತೊಂಜಿದಿನ...!


ಆಟಿ...

ಸಂಪ್ರದಾಯ ಪದ್ದತಿಗಳನ್ನು ಗಮನಿಸುವಾಗ ತುಳು ಜಾನಪದ ಸಂಸ್ಕೃತಿಯನ್ನು ಹೊಂದಿದ ಈ ಕರಾವಳಿಯಲ್ಲಿ  ’ಆಟಿ’ ತಿಂಗಳಲ್ಲಿ ಈ ವಿಶಿಷ್ಟ ಆಚರಣೆಯು ಕಂಡು ಬರುತ್ತದೆ.
August 2: Happy Birth Anniversary.... to the flag designer

Tribute to freedom fighter & designer of our national flag Pingali Venkayya on his birth anniversary


Tuesday, 26 July 2016

ಕಾರ್ಗಿಲ್ ವಿಜಯ ದಿನ



ಕಾರ್ಗಿಲ್ ಯುದ್ಧದ ವಿಜಯ ದಿವಸ. ಯುದ್ಧವಾಗಿ 17ವರ್ಷಗಳೇ ಕಳೆದಿವೆ. ತನ್ನಿಮಿತ್ಯ ಈ ಲೇಖನ
ವೀರ ಯೋದರಿಗೆ ಗೌರವದ ನಮನ.
ಕಾಶ್ಮೀರದ ಶ್ರೀನಗರದಿಂದ 205ಕಿ.ಮೀ.ಗಳ ದೂರದಲ್ಲಿರುವ ಕಾರ್ಗಿಲ್ ಕಠಿಣವಾದ ನೀರ್ಗಲ್ಲುಗಳಿಂದ ಆವೃತವಾದ, ಪ್ರಪಂಚದ ಕೆಲವು ಅತ್ಯಂತ ಎತ್ತರದ ಪರ್ವತಗಳಿಂದ ಕೂಡಿದ ಲಡಾಖ್ ಶ್ರೇಣಿಗೆ ಸೇರಿದ ಪ್ರದೇಶ. ಶ್ರೀನಗರ ಮತ್ತು ಲೇಹ್ ಪ್ರದೇಶಕ್ಕೆ ಇರುವ ಏಕೈಕ ಭೂಮಾರ್ಗ. ಅತ್ಯಂತ ಕ್ಲಿಷ್ಟ ಮತ್ತು ದುರ್ಗಮವಾದ ಭೂ ಸರಹದ್ದು. ವರ್ಷದ ಮುಕ್ಕಾಲು ಅವಧಿಯಲ್ಲಿ, 084 ದೀಗ್ರಿ ಸೆಲ್ಸಿಯಸ್ ತಾಪಮಾನವಿರುವ ಶೀತಲ ಮರಭೂಮಿ. 160ಕಿ.ಮೀ.ಗಳ ಹಿಮಚ್ಛಾದಿತ ಪರ್ವತ ಹೊಂದಿರುವ ಊಹಾತೀತ ಸ್ಥಳ.

Friday, 22 July 2016

ಚಾಂದ್ರ ದಿನ

ಚಾಂದ್ರದಿನ 


  • 1969 ಜುಲೈ 16 ಬೆಳಗ್ಗೆ 7 ಗಂಟೆ



ಅಪೋಲೋ 11- ಕೇಪ್ ಕೆನಡಿಯಿಂದ ಹೊರಟ  ಮೊದಲ ಬಾಹ್ಯಾಕಾಶ ನೌಕೆ 


ಅಮೇರಿಕದ ಕೇಪ್ ಕೆನಡಿ ರೋಕೆಟ್ ಉಡ್ಡಯನ ಕೇಂದ್ರದಿಂದ ರೋಕೆಟಿಗೆ ಜೋಡಿಸಿದ ನೌಕೆಯನ್ನು ಮೂವರು ಪ್ರವೇಶಿಸಿದರು-ನೀಲ್ ಆರ್ಮ್ ಸ್ಟ್ರಾಂಗ್,ಎಡ್ವಿನ್ ಆಲ್ಡ್ರಿನ್ ಮತ್ತು ಮೈಕಲ್ ಕೊಲಿನ್ಸ್ .ರೋಕೆಟ್ ಅಂತರಿಕ್ಷದತ್ತ ಹಾರಿತು .ಭೂಮಿಯ ಕೋಟಿಗಟ್ಟಲೆ ಜನರ ಮನದ ಆಕಾಂಕ್ಷೆಯನ್ನು ಹೊತ್ತ ನೌಕೆಯು ರೋಕೆಟ್ ನಿಂದ ಬೇರ್ಪಟ್ಟು ಚಂದ್ರನಲ್ಲಿಗೆ ಚಲಿಸಿತು. 

Wednesday, 20 July 2016

Months and Festivels of 2016

 
FESTIVAL CALENDER OF S S A L P S MUDOORTHOKE
 
2016
Jan
1 Friday New Year
12 Tuesday Swami Vivekananda     Jayanti
14 Thursday Makar Sankranti
14 Thursday Pongal
16 Saturday Guru Govind Singh Jayanti
23 Saturday Subhas Chandra Bose Jayanti
26 Tuesday Republic Day