Friday, 23 December 2016
Monday, 12 December 2016
ಹರಿತ ಕಾರ್ಯಕ್ರಮದ ವರದಿ
ಹರಿತ ಕಾರ್ಯಕ್ರಮದ ವರದಿ
ದಿನಾಂಕ 8/12/2016 ನೇ ಗುರುವಾರದಂದು ನಮ್ಮ ಶಾಲೆಯಲ್ಲಿ ಹರಿತ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನೆರವೇರಿತು.ಸಮಯ ಸರಿಯಾಗಿ 10 ಗಂಟೆಗೆ ಎಂದಿನಂತೆ ಶಾಲಾ ಅಸಂಬ್ಲಿಯು ಆರಂಭಗೊಂಡಿತು.ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಚಂದ್ರಾವತಿ ಯವರು ಕಾರ್ಯಕ್ರಮದ ಬಗ್ಗೆ ಕಿರು ಮಾಹಿತಿ ನೀಡಿದರು.ಈ ಸಮಯದಲ್ಲಿ ಎಲ್ಲ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಹರಿತ ಕಾರ್ಯಕ್ರಮದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.
ಬಳಿಕ ಹರಿತ ಕಾರ್ಯಕ್ರಮದ ಉಧ್ಘಾಟನೆಯನ್ನು ಮಾಡಲಾಯಿತು.ಈ ಸಭೆಯಲ್ಲಿ ವಾರ್ಡ್ ಮೆಂಬರರಾದ ಶ್ರೀಮತಿ ಜೆಸಿಂತ ಡಿಸೋಜರವರು,ವರ್ಕಾಡಿ ಪಂಚಾಯತ್ ನ ಯೂತ್ ಕೊರ್ಡಿನೇಟರ್ ರಾದ ಶ್ರೀಮಾನ್ ಜಯ ಪ್ರಕಾಶ್ , ಅಂಗನವಾಡಿ ಕಾರ್ಯಕ್ರತೆಯರು,ಕುಟುಂಬ ಶ್ರೀ ಕಾರ್ಯಕರ್ತೆಯರು, ಅಧ್ಯಾಪಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.ಅಂಗನವಾಡಿ ಸದಸ್ಯರಾದ ಕುಮಾರಿ ಸರಿತರವರು ಸ್ವಾಗತ ವನ್ನು ನೇರವೇರಿಸಿದರು.
ಕುಮಾರಿ ಸರಿತರವರಿಂದ ಸ್ವಾಗತ
ಬಳಿಕ ಚಂದ್ರಾವತಿ ಟೀಚರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ಹರಿತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ವಾರ್ಡ್ ಮೆಂಬರ್ ರಾದ ಶ್ರೀಮತಿ ಜೆಸಿಂತರವರು ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಹೆಲ್ತ್ ನವರಾದ ಸಿಸ್ಟರ್ ಶೋಭಾ ರವರು ಉಪಯುಕ್ತ ಮಾಹಿತಿ ನೀಡಿ ಹಾಡು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಶ್ರೀಮತಿ ಶಶಿಕಲ ಟೀಚರ್ ರವರು ದನ್ಯವಾದ ಸಮರ್ಪಿಸಿದರು.
ಬಳಿಕ ಶಾಲಾ ಮಕ್ಕಳಿಂದ ಜನ ಜಾಗೃತಿ ಚಟುವಟಿಕೆಯ ಸಲುವಾಗಿ ಮೆರವಣಿಗೆಯನ್ನು ನಡೆಸಲಾಯಿತು.
ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸೇರಿ ಪರಿಸರ ಶುಚೀಕರಣ ಮಾಡಿದರು.
ಬಳಿಕ ಶಾಲಾ ಮಕ್ಕಳಿಂದ ಜನ ಜಾಗೃತಿ ಚಟುವಟಿಕೆಯ ಸಲುವಾಗಿ ಮೆರವಣಿಗೆಯನ್ನು ನಡೆಸಲಾಯಿತು.
ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸೇರಿ ಪರಿಸರ ಶುಚೀಕರಣ ಮಾಡಿದರು.
ಮಕ್ಕಳು ತಂದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಲಾಯಿತು.
ಮಕ್ಕಳಿಗಾಗಿ ಚಿತ್ರ ರಚನೆ ,ಪ್ರಬಂಧ ರಚನೆ ,ರಸಪ್ರಶ್ನೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Subscribe to:
Posts (Atom)