Thursday 30 June 2022

PTA General Body 2022

ಮುಡೂರು ತೋಕೆ ಶಾಲೆ ರಕ್ಷಕ-ಶಿಕ್ಷಕ ಸಂಘ ಪದಾಧಿಕಾರಿಗಳ ಆಯ್ಕೆ 

ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರು ತೋಕೆ ಶಾಲೆಯಲ್ಲಿ 2022-23ನೇ ಶೈಕ್ಷಣಿಕ ವರ್ಷದ ನೂತನ ಪಿ ಟಿ ಎ ಸಭೆಯನ್ನು  ರಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ವಹಿಸಿದರು. ಕಾರ್ಯಕ್ರಮ ದ ಉದ್ಘಾಟನೆ ಯನ್ನು ಕೇದುಂಬಾಡಿ ವಾರ್ಡ್ ಸದಸ್ಯರಾದ ಶ್ರೀ ಶಿವರಾಜ್ ನೆರವೇರಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ ದೇವಪ್ಪ ಶೆಟ್ಟಿ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು. ಬಳಿಕ ನೂತನ ರಕ್ಷಕ ಶಿಕ್ಷಕ ಸಂಘದ ಸಮಿತಿಯ ರೂಪಿಕಾರಣ ನಡೆಸಲಾಯಿತು. ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದಿಕ್ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಶಿವರಾಜ್ ಕೇದುಂಬಾಡಿ ಆಯ್ಕೆಯಾದರು. ಮಾತೃ ಪಿ.ಟಿ. ಎ ಅಧ್ಯಕ್ಷರಾಗಿ ಶ್ರೀಮತಿ ತೇಜಾಕ್ಷಿ ಹಾಗೂ ಉಪಾಧ್ಯಕ್ಷೆ ಯಾಗಿ ಶ್ರೀಮತಿ ಸುಬೈದ ರವರು ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯ ರಾದ ಶ್ರೀ ಶೈಲೇಶ್ ಸ್ವಾಗತಿಸಿದ ಕಾರ್ಯಕ್ರಮ ಕ್ಕೆ ಶಾಲಾ ಶಿಕ್ಷಕಿ ಶ್ರೀ ಮತಿ ಜಯಲಕ್ಷ್ಮಿ ಧನ್ಯವಾದವಿತ್ತರು. ಶಾಲಾ ಶಿಕ್ಷಕಿ ಶ್ರೀ ಮತಿ ಲಾವಣ್ಯ ಕಾರ್ಯಕ್ರಮ ವನ್ನು ನಿರೂಪಿಸಿದರು.
















Tuesday 21 June 2022

School Parliament 2022

 ಮುಡೂರುತೋಕೆ ಶಾಲಾ ಪಾರ್ಲಿಮೆಂಟ್

ವರ್ಕಾಡಿ : ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆ ಯಲ್ಲಿ 2022-23ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆಯು ವಯಸ್ಕರ ಮತದಾನದ ರೀತಿಯಲ್ಲಿ ಹಾಗೂ ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ಆಗಿ ನಡೆಸಲಾಯಿತು. ಇದಕ್ಕಾಗಿ ಸಮ್ಮತಿ ಎಂಬ ಉಬುಂಟು ಸಾಫ್ಟ್ವೇರ್ ನ್ನು ಬಳಸಲಾಯಿತು. ಚುನಾವಣೆಯ ಎಲ್ಲಾ ಹಂತಗಳನ್ನು ಪಾಲಿಸಿ ವಿದ್ಯಾರ್ಥಿಗಳಿಗೆ ಚುನಾವಣೆಯ ಜಾಗ್ರತಿ ಮೂಡಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಚುನಾವಣೆಗೆ ಚಾಲನೆ ನೀಡಿದರು. ಚುನಾವಣೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಮುಂತಾದ ಎಲ್ಲಾ ಪಾತ್ರ ಗಳನ್ನು ಅಧ್ಯಾಪಕರ ಸಲಹೆಯಂತೆ ಮಕ್ಕಳೇ ನಿರ್ವಹಿಸುವ ಮೂಲಕ ಚುನಾವಣೆಯ ಅರಿವು ಮಕ್ಕಳ ಎಳೆ ಮನಸಿನಲ್ಲಿ ಅಚೋಟ್ಟುವಂತಾಯಿತು. ಚುನಾವಣೆ ಬಳಿಕ ಮತ ಎಣಿಕೆಯನ್ನು ಮಕ್ಕಳ ಸಾನಿಧ್ಯದಲ್ಲಿಯೇ ಸಾಫ್ಟ್ವೇರ್ ಸಹಾಯದಿಂದ ನಡೆಸಲಾಯಿತು. ಮುಖ್ಯ ಚುನಾವಣಾಧಿಕಾರಿಯವರಿಂದ ವಿಜೇತ ಅಭ್ಯರ್ಥಿ ಯ ಹೆಸರನ್ನು ಘೋಷಣೆ ಮಾಡಲಾಯಿತು. ಶಾಲಾ ನಾಯಕನಾಗಿ ಸಲ್ಮಾನ್ ಫಾರಿಶ್ ಹಾಗೂ ಉಪ ನಾಯಕನಾಗಿ ಕೌಶಿಕ್ ಆಯ್ಕೆಯಾದರು. ಬಳಿಕ ಮಂತ್ರಿ ಮಂಡಲ ರಚನೆ ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯ ರಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣವಚನ ಭೋದಿಸಲಾಯಿತು.
Nomination by Kowshik

Nomination by Salman Farish

Nomination by Yathish Kumar
--------------------------------------------------------------------------------------------------------------------------

Sunday 5 June 2022

Free Note Book Distribution

 ಉಚಿತ ನೋಟ ಪುಸ್ತಕ ವಿತರಣೆ

ಎಸ್.ಎಸ್.ಎ. ಎಲ್.ಪಿ.ಶಾಲೆ ಮುಡೂರು ತೋಕೆ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಭಾಗವಾಗಿ ಶಾಲಾ ಮಕ್ಕಳಿಗೆ ಬರೆಯಲು ಅಗತ್ಯವಾದ ಎಲ್ಲಾ ನೋಟ್ ಪುಸ್ತಕಗಳನ್ನು ಪ್ರತೀ ವರ್ಷದಂತೆ ಈ ವರ್ಷವೂ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಶ್ರೀ ಜಯಪ್ರಕಾಶ್ ಭಂದರಮನೆ ಯವರು ಉಚಿತವಾಗಿ ಮಕ್ಕಳಿಗೆ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ರಕ್ಷಕರು, ಶಾಲಾ ಮುಖ್ಯ ಶಿಕ್ಷಕರೂ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.



Thursday 2 June 2022

ಉಚಿತ ಬ್ಯಾಗ್ ವಿತರಣೆ

 ಎಸ್.ಎಸ್.ಎ. ಎಲ್.ಪಿ.ಶಾಲೆ ಮುಡೂರು ತೋಕೆ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಭಾಗವಾಗಿ ನವಾಗತರಿಗೆ ಸಾಂದ್ವನ ಎಂಬ ಸಹೃದಯಿ ಸಂಘಟನೆಯು ಉಚಿತವಾಗಿ ಬ್ಯಾಗ್ ವಿತರಿಸಿತು. ಕಾರ್ಯಕ್ರಮದಲ್ಲಿ ಸಾಂದ್ವನ ಸಂಘಟನೆಯ ಸದಸ್ಯರಾದ ಶ್ರೀ ತ್ರಿಶಾಂತ್ ಹಾಗೂ ಶ್ರೀ ಸೂರಜ್ ರವರು  ಮಕ್ಕಳಿಗೆ ಬ್ಯಾಗ್ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ರಕ್ಷಕರು, ಶಾಲಾ ಮುಖ್ಯ ಶಿಕ್ಷಕರೂ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Sri Trishanth 

Sri Sooraj

School Bag Distribution



Vote Of Thanks 


ಮುಡೂರುತೋಕೆ ಶಾಲಾ ಪ್ರವೇಶೋತ್ಸವ

 ಎಸ್.ಎಸ್.ಎ. ಎಲ್.ಪಿ.ಶಾಲೆ ಮುಡೂರು ತೋಕೆ ಶಾಲೆಯಲ್ಲಿ 2022ನೇ  ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯ ಶ್ರೀ ಶಿವರಾಜ್ ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಕಾಡಮಿಕ್ ಮಾಸ್ಟರ್ ಪ್ಲಾನ್ ನನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕರಾದ ಶ್ರೀ ದೇವಪ್ಪ ಶೆಟ್ಟಿಯವರು ವಹಿಸಿದರು. ಪಿ ಟಿ ಎ ಅಧ್ಯಕ್ಷ ರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯಶಿಕ್ಷಕ ಶೈಲೇಶ್ ರವರು ಸ್ವಾಗತಿಸಿದ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಚಿತ್ರಾ ರವರು ನಿರೂಪಿಸಿದರು. ಶಿಕ್ಷಕಿ ಲವಣ್ಯರವರು ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.