Wednesday 29 June 2016

Our PTA meeting







ಪಿ.ಟಿ. ಎ ಮಹಾಸಭೆಯ ವರದಿ

ಎಸ್.ಎಸ್.ಎ. ಎಲ್.ಪಿ ಮೂಡೂರ್ ತೋಕೆಯಲ್ಲಿ 2016-17 ನೇ ಶೈಕ್ಷಣಿಕ ವರ್ಷದ ಮೊದಲ ಪಿ.ಟಿ.ಎ ಸಭೆಯು ದಿನಾಂಕ 29.6.2016 ರಂದು ಮಧ್ಯಾಹ್ನ 2.30 ಕ್ಕೆ ಸರಿಯಾಗಿ  ಜರಗಿತು.ಈ ಸಂದರ್ಭದಲ್ಲಿ ನಮ್ಮ ಶಾಲಾ ಮೇನೇಜರರಾದ  ಶ್ರೀಮಾನ್ ದೇವಪ್ಪ ಸರ್, ಪ್ರಸ್ತುತ ಪಿ.ಟಿ. ಎ ಅಧ್ಯಕ್ಷರರರಾದ  ಅಬ್ದುಲ್ ರಹಿಮಾನ್ ಉಸ್ತಾದ್ ರವರು ,ಮಾತೃ ಸಂಘದ ಅಧ್ಯಕ್ಷರಾದ ಸೆಫಿನಾ ರವರು,ರಕ್ಷಕರು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು. ಪ್ರಸ್ತುತ ಶಾಲಾ ಹಿರಿಮೆಗಳನ್ನು ,ಸಮಸ್ಯೆಗಳನ್ನು ಈ ಸಂಧರ್ಭದಲ್ಲಿ ಚರ್ಚಿಸಲಾಯಿತು.
ಮೊದಲ ಪಿ.ಟಿ. ಎ ಸಭೆಯ ಅಜೆಂಡಾಗಳು:
  ★ನೂತನ ಕಾರ್ಯಕಾರಿ ಸಮಿತಿಯ ರಚನೆ
  ★ತರಕಾರಿ ತೋಟದ ನಿರ್ಮಾಣ
ಈ ಎರಡು ಅಜೆಂಡಾಗಳನ್ನು ಚರ್ಚಿಸಲಾಯಿತು.
ಅಬ್ದುಲ್ ರಹಿಮಾನ್ ರವರನನ್ನು ಪುನಃ ನೂತನ ಪಿ.ಟಿ. ಎ ಅಧ್ಯಕ್ಷ ರನ್ನಾಗಿಯೂ ಉಸ್ಮಾನ್ ರವರನ್ನು ಉಪಾಧ್ಯಕ್ಷರನ್ನಾಗಿಯೂ ಆರಿಸಲಾಯಿತು.ಮಾತೃ ಸಂಘದ ಅಧ್ಯಕ್ಷರಾಗಿ ರೇಖರವರನ್ನು ಹಾಗೂ ಉಪಾಧ್ಯಕ್ಷರಾಗಿ ಸೆಫಿನಾರವರನ್ನು ಆರಿಸಲಾಯಿತು. ಬಳಿಕ 2ನೆಯ ಅಜೆಂಡಾ ವನ್ನು ಚರ್ಚಿಸಲಾಯಿತು .ಪಿ.ಟಿ. ಎ ಸಮ್ಮತಿಯ ಮೇರೆಗೆ ತರಕಾರಿ ತೋಟದ ಬದಲು ಪೆಡಗೋಜಿ ಪಾರ್ಕ್ ಮಾಡಲು ತೀರ್ಮಾನಿಸಲಾಯಿತು.ಅದಿಕ್ಕೆ ಬೇಕಾದ ಹಣ ಸಹಾಯವನ್ನು ರಕ್ಷಕರು,ಮೆನೇಜರ್,ಅಧ್ಯಾಪಕರು ಹಾಗು ಊರವರ ಸಹಾಯದಿಂದ ಮಾಡುವುದೆಂದು ತೀರ್ಮಾನಿಸಲಾಯಿತು.

Wednesday 22 June 2016

ವಾಚನಾವಾರದ ಚಟುವಟಿಕೆಗಳು

ವಾಚನಾ ವಾರದ 1ನೇ ದಿನ :ಉದ್ಘಾಟನಾ ಸಮಾರಂಭ,ಪುಸ್ತಕ ಪ್ರದರ್ಶನ ಹಾಗೂ ಲೈಬ್ರರಿ ಸಜ್ಜೀಕರಣ


2ನೇ ದಿನ:ಪುಸ್ತಕ ಓದುವುದು


3ನೇ ದಿನ:ಒಗಟು ಸ್ಪರ್ಧೆ


Tuesday 21 June 2016

International yoga day:warm up exercise by Shailesh sir


ವಿಶ್ವ ಯೋಗ ದಿನ 

 ಶಾಲಾ ಅಧ್ಯಾಪಕಿ ಶ್ರೀಮತಿ ಚಿತ್ರಾ ರವರಿಂದ ಶಾಲಾ ವಿದ್ಯಾರ್ಥಿ ಗಳಿಗೆ ಯೋಗಾಭ್ಯಾಸ ನೀಡುವುದು ...! 




ವಿಶ್ವ ಯೋಗ ದಿನಾಚರಣೆಯ ವರದಿ

ಜೂನ್ 21;SSALPS Mudoorthoke ಯಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಯೋಗದ ಕುರಿತು ಮಾಹಿತಿ ನೀಡಲಾಯಿತು. ಯೋಗದ ಮಹತ್ವ ,ವ್ಯಾಯಾಮದ ಅವಶ್ಯಕತೆ,ಯೋಗದ ರೀತಿ ನೀತಿ ಮೊದಲಾದ ವಿಷಯಗಳ ಕುರಿತು ಶಾಲಾ ಅಧ್ಯಾಪಕ ವೃಂದದವರು  ಮಾಹಿತಿಗಳನ್ನು ನೀಡಿದರು.ಬಳಿಕ ವಿದ್ಯಾರ್ಥಿಗಳಿಗೆ ಕೆಲವು ಯೋಗಾಸನಗಳನ್ನು ಕಲಿಸಲಾಯಿತು.
ವಾಚನಾ ವಾರ ೨೦೧ 
ಮುಡೂರುತೋಕೆ  ಜೂನ್ ೨೦ ; ವಾಚನಾ ವಾರದ  ಅಂಗವಾಗಿ S S A L P ಶಾಲೆ ಮುಡೂರು ತೋಕೆ ಯಲ್ಲಿ ವಾಚನಾ ವಾರ ವನ್ನು ಉದ್ಘಾಟಿಸಲಾಯಿತು . ಶಾಲಾ HM ಶ್ರೀ ಮತಿ ಚಂದ್ರಾವತಿ , PTA ಅಧ್ಯಕ್ಷ ಅಬ್ದುಲ್ ರೆಹಿಮಾನ್  ಹಾಗೂ ಸಹಅಧ್ಯಾಪಕರು ಉಪಸ್ಥಿತರಿದರು.

Monday 20 June 2016

ವಾಚನಾವಾರದ  ಅಂಗವಾಗಿ S S A L P S MUDOORTHOKE ಯಲ್ಲಿ ಕಾರ್ಯಕ್ರಮದ ಉದ್ಘಾಟನೆಯ ಚಿತ್ರಗಳು ಇಲ್ಲಿವೆ. 



PTA  ಅಧ್ಯಕ್ಷ  ಅಬ್ದುಲ್ ರೆಹಮಾನ್  ಕಾರ್ಯಕ್ರಮದ ಉದ್ಘಾಟನೆ ಯನ್ನು ನೆರವೇರಿಸುವುದು







             ವಾಚನಾ ಸಪ್ತಾಹ ೨೦೧೬
          


ವಾಚನಾ ವಾರ- ಪಿ.ಎನ್. ಪಣಿಕ್ಕರ್ ಚರಮದಿನ
ಶ್ರೀಯುತ ಪಿ.ಎನ್.ಪಣಿಕ್ಕರ್ 1909 ಮಾರ್ಚ್ 1 ರಂದು ಗೋವಿಂದ ಪಿಳ್ಳೆ ಮತ್ತು ಜಾನಕಿ ಅಮ್ಮ ರವರ ಪುತ್ರನಾಗಿ ಕೇರಳದ ಕೋಟ್ಟಾಯಂ ಜಿಲ್ಲೆಯ ನೀಲಂಪೇರೂರುನಲ್ಲಿ ಜನಿಸಿದರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು. ಅವರು ತನ್ನ ಬಾಲ್ಯ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಅನುಭವಿಸಿದ ಪುಸ್ತಕಗಳ ಕೊರತೆ ಮುಂದಿನ ಸಮಾಜಕ್ಕೆ ಉಂಟಾಗ ಬಾರದು ಎಂಬ ಮಹತ್ವಾಕಾಂಕ್ಷೆಯಿಂದ ಸನಾತನ ಧರ್ಮಂ ಲೈಬ್ರೆರಿಯನ್ನು ತನ್ನ ಹುಟ್ಟೂರಲ್ಲಿ 1926ರಲ್ಲಿ ಆರಂಭಿಸಿದರು.
ಶ್ರೀಯುತ ಪಣಿಕ್ಕರ್ ರವರು 1945 ರಲ್ಲಿ ತಿರುವಿತಾಂಕೂರು ಗ್ರಂಥಶಾಲಾ ಸಂಘಂ
( Travancore Library Association)ಸ್ಥಾಪಿಸಿ 47 ಗ್ರಾಮೀಣ ಲೈಬ್ರೆರಿಗಳನ್ನು ಸ್ಥಾಪಿದರು. ಈ ಸಂಘದ ಘೋಷಣಾ ವಾಕ್ಯವೇ "ಓದಿರಿ ಮತ್ತು ಬೆಳೆಯಿರಿ" ಎಂಬುದಾಗಿತ್ತು. 1956ರಲ್ಲಿ ಕೇರಳ ರಾಜ್ಯದ ಉದಯವಾದಾಗ ಇದು ಕೇರಳ ಗ್ರಂಥಶಾಲಾ ಸಂಘವಾಗಿ ಗರೂಪೀಕರಣಗೊಂಡಿತು.
. ಶ್ರೀಯುತ ಪಿ.ಎನ್ ಪಣಿಕ್ಕರ್ ಓದುವಿಕೆಯ ಅಗತ್ಯ ಮತ್ತು ಗ್ರಂಥಾಲಯ ಗಳ ಅಗತ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತಾ ಕೇರಳ ರಾಜ್ಯದ ಗ್ರಾಮ ಗ್ರಾಮಗಳಲ್ಲಿ ಸಂಚರಿಸಿ ಜನರನ್ನು ಒಟ್ಟುಗೂಡಿಸಿ ಅಲ್ಲಲ್ಲಿ ಲೈಬ್ರೆರಿ ಸ್ಥಾಪಿಸಲು ಪ್ರೇರಣೆ ನೀಡಿದರು. ಇದರಿಂದ ಪ್ರೇರೇಪಿತರಾಗಿ ಸಾಧಾರಣ 6000 ಲೈಬ್ರೆರಿಗಳು ಈ ಶೃಂಖಲೆಯಲ್ಲಿ ಸೇರಿದವು.
1975ರಲ್ಲಿ ಯುನೆಸ್ಕೋ (UNESCO) ಸಂಸ್ಥೆಯಿಂದ ಕೇರಳ ಗ್ರಂಥಶಾಲಾ ಸಂಘಕ್ಕೆ ಕೃಪಾಸಖಾಯ ಅವಾರ್ಡ್ ಲಭಿಸಿತು. ಶ್ರೀಯುತ ಪಿ.ಎನ್. ಪಣಿಕ್ಕರ್ ರವರು .1977ರ ತನಕ ಸುಧೀರ್ಘ 32 ವರ್ಷಗಳ ಕಾಲ ಗ್ರಂಥಶಾಲಾ ಸಂಘದ ಪ್ರಧಾನ
ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. 1977ರಲ್ಲಿ ಈ ಗ್ರಂಥಶಾಲಾ ಸಂಘವು ಕೇರಳ ಸರಕಾರದ ಆಧೀನಕ್ಕೆ ಸೇರಿತು. ನಂತರ ಈ ಸಂಘವನ್ನು ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್ ( Kerala State Library Coucil)ಎಂದು ಹೆಸರಿಸಿ ಪ್ರಜಾಪ್ರಭುತ್ವ ಚೌಕಟ್ಟು ನೀಡಿ ಹಣಕಾಸು ನೆರವು ನೀಡಲಾರಂಬಿಸಿತು.
1977ರಲ್ಲಿ ಅವರು ಕೇರಳ ಎಸೋಸಿಯೇಶನ್ ಫೋರ್ ನೋನ್ ಫಾರ್ಮಲ್ ಎಜುಕೇಶನ್ ಎಂಡ್ ಡೆವೆಲಪ್ ಮೆಂಟ್ ( ) ಸ್ಥಾಪಿಸಿದರು. ಇದು ಕೇರಳ ಸಾಕ್ಷರತಾ ಮಿಷನ್ ಆರಂಭಕ್ಕೆ ನಾಂದಿ ಹಾಡಿತು.
ಪಿ.ಎನ್ ಪಣಿಕ್ಕರ್ ರವರು 1995 ಜೂನ್ 19ರಂದು ಅವರ 86 ನೇ ವಯಸ್ಸಿನಲ್ಲಿ ವಿಧಿವಶರಾದರು. ಅವರ ಗೌರವಾರ್ಥ ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಅಪಾರ ಸೇವೆಯ ಸ್ಮರಣೆಗಾಗಿ ಕೇರಳ ಸರಕಾರ ಪ್ರತೀ ವರ್ಷ ಜೂನ್ 19ರಂದು ಎಲ್ಲಾ ಶಾಲೆ,ಕಾಲೇಜು ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ವಾಚನಾ ದಿನ ( Reading Day)ವಾಗಿಯೂ ಅಂದಿನಿಂದ ಒಂದು ವಾರದ ತನಕ ವಾಚನಾ ಸಪ್ತಾಹ ಆಚರಿಸುತ್ತಾ ಮಕ್ಕಳಲ್ಲೂ ಸಾರ್ವಜನಿಕರಲ್ಲೂ ಓದಿನ ಮಹತ್ವವನ್ನು ನೆನಪಿಸಿ ಸಾಹಿತ್ಯ ಲೋಕದೆಡೆಗೆ ಆಕರ್ಷಿಸುವ ಪ್ರಯತ್ನ ನಡೆಸಲು ಪ್ರೋತ್ಸಾಹಿಸುತ್ತದೆ.
ಬನ್ನಿ ಗೆಳೆಯರೇ ಮುಂದಿನ ಪೀಳಿಗೆಯಲ್ಲಿ ಓದಿನ ಅಗತ್ಯವನ್ನು ಒತ್ತಿ ಹೇಳಲು ನಾವೂ ವಾಚನಾ ದಿನ/ ವಾರವನ್ನು ವೈವಿಧ್ಯಮಯವಾಗಿ ಆಚರಿಸೋಣವೇ