![]() |
ವೊರ್ಕಾಡಿ ಪಂಚಾಯತ್ ಮಟ್ಟದ ಮಕ್ಕಳ ಹರಿತ ಸಭೆ ಯಲ್ಲಿ ಭಾಗವಹಿಸಿದ ನಮ್ಮ ಶಾಲಾ ಮಕ್ಕಳು... |
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ, ಕಲೋತ್ಸವಗಳಲ್ಲಿ ಬಹುಮಾನ ಗಳಿಸಿ ನಮ್ಮ ಶಾಲೆಯ ಕೀರ್ತಿ ಬೆಳಗಿಸಿದ ಪ್ರತಿಭಾವಂತ ಮಕ್ಕಳಿಗೆ ಅಭಿನಂದನೆಗಳು
![]() |
ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ waste material product ಸ್ಪರ್ಧೆಯಲ್ಲಿ ಭಾಗವಹಿಸಿ B ಗ್ರೇಡ್ ಗಳಿಸಿದ ಕುಮಾರಿ ಆಯಿಶಾತ್ ಶೈಮ ಇವಳಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು |
![]() |
ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ ಫ್ಯಾಬ್ರಿಕ್ ಪೈಂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ B ಗ್ರೇಡ್ ಗಳಿಸಿದ ಮಹಮ್ಮದ್ ಮನಾಸ್ ಇವನಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು |
![]() |
ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ Vegetable ಪ್ರಿಂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ A ಗ್ರೇಡ್ ಗಳಿಸಿದ ಕುಮಾರಿ ರುಖ್ಯಾತ್ ಸಹದಿಯ ಇವಳಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು |
![]() |
ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ EMBROIDARI ಸ್ಪರ್ಧೆಯಲ್ಲಿ ಭಾಗವಹಿಸಿ A ಗ್ರೇಡ್ ಪಡೆದ ಕುಮಾರಿ ಸಾಧಿಕಾ ನಿಶಾ ಇವಳಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು |
![]() |
ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ ಪೇಪರ್ craft ಸ್ಪರ್ಧೆ A ಗ್ರೇಡ್ ಪಡೆದ ಕುಮಾರಿ ಜುಮೈಲಾ ಇವಳಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು |
![]() |
ಸಮಾಜ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪ್ರಥಮ್ ಇವನಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು |
![]() |
ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ beads work ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಗಳಿಸಿದ ಕುಮಾರಿ ಸೌಜನ್ಯ ಇವಳಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು |
![]() |
ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ thread pattern ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಕುಮಾರಿ ವೃದ್ಧಿ ಕೆ ಇವಳಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು |
ವರ್ಕಾಡಿ : ಇಲ್ಲಿನ ಎಸ್.ಎಸ್.ಎ. ಎಲ್.ಪಿ.ಶಾಲೆ ಮುಡೂರುತೋಕೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್ ರವರು ಧ್ವಜಾರೋಹಣ ಗೈದರು. ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಹರಿತ ಕರ್ಮ ಸೇನಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು.ಸ್ವಾತಂತೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳ ಬಹುಮಾನ ವಿತರಣೆ ಕೂಡ ಜರಗಿತು. ಶಾಲಾ ಮಾತೃ ಪಿಟಿಎ ಅದ್ಯಕ್ಷೆ ಶ್ರೀಮತಿ ಸರಿತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಯರದ ಶ್ರೀ ಶೈಲೇಶ್ ಸ್ವಾಗತಿಸಿದ ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಚಿತ್ರಾ ನೀರೂಪಿಸಿ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ವಂದಿಸಿದರು.
ಆತ್ಮಿಯ ರಕ್ಷಕರೇ...
ಅಗೋಸ್ಟ್ ತಿಂಗಳ 15 ನೇ ತಾರೀಕು ಎಲ್ಲರಿಗೂ ತಿಳಿದಿರುವಂತೆ ದೇಶದೆಲ್ಲೆಡೆ ಪ್ರತಿಯೊಬ್ಬ ದೇಶ ಪ್ರೇಮಿಯು ಹೆಮ್ಮೆಯಿಂದ ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ಯು ಇನ್ನು ಕೆಲವೇ ದಿನಗಳನ್ನು ಬರಲಿರುವುದು. ಅದರ ಅಂಗವಾಗಿ ಎಲ್ಲಾ ವರ್ಷದಂತೆ ಈ ವರ್ಷವೂ ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರೊಂದಿಗೆ ಪ್ರಿ ಪ್ರೈಮರಿ ಮಕ್ಕಳ ತರಗತಿ ಕೊಠಡಿಯ ಉದ್ಘಾಟನೆಯನ್ನು ಕೂಡ ನಿಶ್ಚಯಿಸಿದ್ದೇವೆ. ಸುನ್ನಂಗಳ ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್ ರವರು ಧ್ವಜಾರೋಹಣ ಹಾಗೂ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿಯವರು ವಹಿಸಲಿದ್ದಾರೆ. ಕೇದುಂಬಾಡಿ ವಾರ್ಡ್ ಸದಸ್ಯರಾದ ಶ್ರೀ ಶಿವರಾಜ್, ಶಾಲಾ ಪಿ. ಟಿ.ಎ ಅಧ್ಯಕ್ಷರಾದ ಶ್ರೀ ನವೀನ್, ಯಂ.ಪಿ.ಟಿ.ಎ ಅಧ್ಯಕ್ಷೆ ಸರಿತಾ ಮುಂತಾದವರು ಶುಭ ಹಾರೈಸಲಿರುವರು. ಈ ಕಾರ್ಯಕ್ರಮ ಕ್ಕೆ ತಮಗೆಲ್ಲರಿಗೂ ಹೃತ್ಪೂರ್ವಕವಾಗಿ ಸ್ವಾಗತ Baಯಸುತ್ತಿದ್ದೇವೆ.
ರಕ್ಷಕ-ಶಿಕ್ಷಕ ಸಂಘದ ಮಹಾಸಭೆ: ನೂತನ ಸಮಿತಿ ರೂಪೀಕರಣ
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ನೂತನ ಪಿ.ಟಿ.ಎ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಪಿ.ಟಿ. ಎ ನೂತನ ಅಧ್ಯಕ್ಷರಾಗಿ ನವೀನ್ ,ಉಪಾಧ್ಯಕ್ಷರಾಗಿ ಉಸ್ಮಾನ್ ರವರು ಆಯ್ಕೆಯಾದರು. ಬಳಿಕ ಮಾತೆಯರ ನೂತನ ಸಮಿತಿಯನ್ನೂ ರಚಿಸಲಾಯಿತು. ಅಧ್ಯಕ್ಷೆಯಾಗಿ ಸರಿತಾ, ಉಪಾಧ್ಯಕ್ಷೆಯಾಗಿ ರೇಖಾ ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯರಾದ ಶೈಲೇಶ್ ಸ್ವಾಗತಿಸಿದ ಸಭೆಗೆ ಅಧ್ಯಾಪಿಕೆ ಲಾವಣ್ಯ ವಂದಿಸಿದರು.
![]() |
New Committee |
ಶಾಲಾ ಮಂತ್ರಿ ಸಭೆ ರಚನೆ
ವರ್ಕಾಡಿ: ಎಸ್.ಎಸ್.ಎ. ಎಲ್.ಪಿ ಶಾಲೆ ಮುಡೂರು ತೋಕೆ ಶಾಲೆಯಲ್ಲಿ 2023ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆಯು ಜರಗಿತು. ಶಾಲಾ ಮಕ್ಕಳೇ ಪ್ರತಿನಿದಿಗಳಗಿ ಅವರೇ ಮತದರರಾಗಿ ಅವರಿಂದಲೇ ಚುನಾವಣಾ ಅಧಿಕಾರಿಗಳನ್ನು ಆರಿಸಿ ವಯಸ್ಕರ ಮತದಾನದ ರೀತಿಯಲ್ಲಿ ಚಟುವಟಿಕೆ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಿಕೆಯರು ಚಟುವಟಿಕೆಗೆ ನೇತೃತ್ವದ ವಹಿಸಿದರು. ಚುನಾವಣೆಯ ಬಳಿಕ ಮತ ಎಣಿಕೆ, ಪ್ರಮಾಣವಚನ ಸ್ವೀಕಾರ ಮುಂತಾದ ಹಂತಗಳ ಮೂಲಕ ಮಕ್ಕಳು ಹಾದುಹೋದರು. ಶಾಲಾ ನಾಯಕನಾಗಿ ಮೊಹಮ್ಮದ್ ಮನಾಸ್ ಹಾಗೂ ಉಪನಾಯಕಿಯಾಗಿ ವೃದ್ಧಿ ಆಯ್ಕೆಗೊಂಡರು. ಅದೇರೀತಿ ಇತರ ಚುನಾಯಿತ ಪ್ರತಿನಿಧಿಗಳಿಗೆ ವಿವಿಧ ಜವಾಬ್ದಾರಿ ಗಳನ್ನು ಹಂಚಿಕೊಡಲಾಯಿತು.