Thursday 21 November 2019

ವಿದ್ಯಾಲಯ ಪ್ರತಿಭೆಗಳ ಕಡೆಗೆ

*ಮುಡೂರ್ ತೋಕೆ ಶಾಲೆ ಪ್ರತಿಭೆಗಳ ಕಡೆಗೆ*

ಮಂಜೇಶ್ವರ: ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆಯು ಕೇರಳ ಸರಕಾರ ದ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಭಾಗವಾಗಿ ನಡೆಸುವ ವಿದ್ಯಾಲಯ ಪ್ರತಿಭೆಗಳ ಕಡೆಗೆ ಎಂಬ ಕಾರ್ಯಕ್ರಮ ವನ್ನು ಹಮ್ಮಿಕೊಂಡು ಸಮೀಪದ ಪ್ರತಿಭೆ ಪ್ರೊಫೆಸರ್ ಶ್ರೀ ದಾನಪ್ಪರವರ ಗೃಹ ಸಂದರ್ಶನ ನಡೆಸಿದರು. ಸಂದರ್ಶನದಲ್ಲಿ ಶಾಲಾ ಮುಕ್ಯೋಪಾಧ್ಯಾಯಿನಿ ಹಾಗೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಭೌತ ಶಾಸ್ತ್ರ ದ ಉಪನ್ಯಾಸಕರಾದ ದಾನಪ್ಪರವರ ಪುಟ್ಟ ಪುಟ್ಟ ಸಂಶೋಧನೆ ಗಳು ಅಕ್ಕಳ ಮನಸೂರೆಗೊಂಡವು. ವಿಜ್ಞಾನದ ವಿಸ್ಮಯ ಗಳಲ್ಲಿ ಮಕ್ಕಳೇ ಪುಟ್ಟ ವಿಜ್ಞಾನಿಗಳಾಗಿ ಬದಲಾಗುವಂತೆ ದಾನಪ್ಪರವರ ಭೌತಶಾಸ್ತ ಪ್ರಯೋಗಾಲಯ ಸಹಾಯ ಮಾಡಿತು. ದಾನಪ್ಪರವರು ಚಿಕ್ಕಂದಿನಿಂದ ಇಲ್ಲಿವರೆಗೆ ಸಾಗಿಬಂದ ಬದುಕಿನ ದಾರಿಯನ್ನು ಬಹಳ ಸ್ವರಸ್ಯವಾಗಿ ಮಕ್ಕಳಿಗೆ ವಿವರಿಸಿದರು. ಶಾಲೆಯ ಜೈವಿಕ ಉದ್ಯಾನದಿಂದ ಕೀಳಿದ ಹೂಗಳಿಂದ ತಯಾರಿಸಿದ ಹೂ ಗುಚ್ಛ ವನ್ನು ಪುಟಾಣಿ ಮಕ್ಕಳು ದಾನಪ್ಪನವರಿಗೆ ನೀಡಿ ಅವರನ್ನು ಗೌರವಿಸಿದರು. ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಇದ್ದ ಸಂಶಯಗಳು ದಾನಪ್ಪರವರ ಮುಂದೆ ಪ್ರಶ್ನೆಗಳಾಗಿ ಕೇಳಿದಾಗ ಪುಟಾಣಿ ಮಕ್ಕಳಿಗೆ ಮನದಟ್ಟಾಗುವ ರೀತಿಯಲ್ಲಿ ಉತ್ತರಿಸಿದ ರು. ವಿಜ್ಞಾನದ ಬಗ್ಗೆ ಹೆಚ್ಚಿನ ಅರಿವನ್ನು ತಮ್ಮೊಂದಿಗೆ ಹಂಚಿಕೊಂಡ ದಾನಪ್ಪರವರಿಗೆ ಹೃತ್ಪೂರ್ವಕ ಧನ್ಯವಾದ ಸಮರ್ಪಿಸಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಶಾಲೆಗೆ ಮರಳಿದರು.


Childrens day 2019