Wednesday 14 December 2022

Vegetables for MID-DAY MEAL in December

 ಜನ್ಮದಿನದ ಅಂಗವಾಗಿ ಶಾಲಾ ಮಕ್ಕಳ ಮಧ್ಯಾನದೂಟ ಕ್ಕೆ ಮೊಹಮ್ಮದ್ ರಹೀಸ್ ಹಾಗೂ ಮನೆಯವರು ತರಕಾರಿ ಹಾಗೂ ತೆಂಗಿನಕಾಯಿ ಒದಗಿಸಿರುತ್ತಾರೆ. ಇವರಿಗೆ ತುಂಬುಹೃದಯದ ಧನ್ಯವಾದಗಳು🙏🏻



Thursday 1 December 2022

Trophy and Certificate Distribution

 ಉಪಜಿಲ್ಲಾ ಮಟ್ಟದ ಕಲೋತ್ಸವ ದಲ್ಲಿ ನಮ್ಮ ಶಾಲಾ ಮಕ್ಕಳ ಸಾಧನೆ... ಒಂದು ಪ್ರಥಮ, 1 ದ್ವಿತೀಯ , 1ತೃತೀಯ ಸ್ಥಾನಗಳೊಂದಿಗೆ ಹಲವು A ಗ್ರೇಡ್ ಗಳು ನಮ್ಮ ಶಾಲೆಗೆ ಲಭಿಸಿದೆ ಎಂಬುವುದು ಹೆಮ್ಮೆಯ ವಿಷಯ. 




Tuesday 15 November 2022

Children's Day 2022 and Curriculum Discussion

ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಮತ್ತು ಬಹುಮಾನ ವಿತರಣೆಯೂ ನಡೆಯಿತು . ಅದರೊಂದಿಗೆ ಪಠ್ಯಪದ್ದತಿ ಪರಿಷ್ಕರಣೆಯ ಬಗ್ಗೆ ಚರ್ಚಾ ಕೂಟವೂ ಜರಗಿತು . ಸಭೆಯ ಅಧ್ಯಕ್ಷತೆಯನ್ನು ಶಾಲಾ ಪಿ ಟಿ ಎ ಅಧ್ಯಕ್ಷ ಅಬೂಬಕರ್ ಸಿದ್ದಿಕ್ ವಹಿಸಿದರು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಭಂದಕರು ಶ್ರೀ ದೇವಪ್ಪ ಶೆಟ್ಟಿ ನೆರವೇರಿಸಿದರು ಅದೇರೀತಿ ಬಿ ಆರ್ ಸಿ ಕಾರ್ಡಿನೇಟರ್ ಶ್ರೀಮತಿ ಚಂದ್ರಿಕಾ ಹಾಗು ಯಂ .ಪಿ. ಟಿ . ಎ ಅಧ್ಯಕ್ಷೆ ಶ್ರೀ ಮತಿ ತೇಜಾಕ್ಷಿ ಮುಂತಾದವರು ಶುಭ ಹಾರೈಸಿದರು . ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಶೈಲೇಶ್ ಕಾರ್ಯಕ್ರಮಕ್ಕೆ ಸ್ವಾಗತ ಹೇಳಿದರು ಶಾಲಾ ಶಿಕ್ಷಕಿ ಶ್ರೀ ಮತಿ ಚಿತ್ರಾ ರವರು ರಕ್ಷಕರಿಗೆ ಪಠ್ಯಪದ್ದತಿಯಬಗ್ಗೆ ವಿವರವಾಗಿ ಮಾಹಿತಿ ನೀಡಿದರು .  




 















Monday 24 October 2022

Participants and Grade in Shastrotsavam 2022


 

1st Place in Thread Pattern @ Shastrotsavam 2022

 

ಸರಕಾರಿ ಪ್ರೌಢ ಶಾಲೆ ಬೇಕುರು ನಲ್ಲಿ ಜರಗಿದಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ 2022 ನೇ ಸಾಲಿನ ಪ್ರಾಥಮಿಕ ವಿಭಾಗದ ಮಕ್ಕಳ ವೃತ್ತಿ ಪರಿಚಯ ಮೇಳದ ಅಂಗವಾಗಿ ನಡೆದ ತ್ರೆ ಡ್ ಪ್ಯಾಟರ್ನ್ ಸ್ಪರ್ಧೆಯಲ್ಲಿ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ವೃದ್ಧಿ ಕೆ ಇವಳು A ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

Vridhi K


Friday 14 October 2022

Shastrotsavam 2K22 preparations

 ಶಾಸ್ತ್ರ ಮೇಳಗಳಿಗಿರುವ ತಯಾರಿಯಲ್ಲಿ ನಮ್ಮ ಶಾಲಾ ಮಕ್ಕಳು 






Vegetables for noon meal

ಒಕ್ಟೋಬರ್ ತಿಂಗಳ 2ನೇ ವಾರಕ್ಕೆ ತರಕಾರಿ ಒದಗಿಸಿದ ಆಶಿಕಾ ಳಿಗೆ ಧನ್ಯವಾದಗಳು 

 

Thursday 6 October 2022

ಮಾದಕ ಮುಕ್ತ ಕೇರಳ ಮಾಹಿತಿ ಶಿಬಿರ

 ಮಾದಕ ಮುಕ್ತ ಕೇರಳ ಮಾಹಿತಿ ಶಿಬಿರ

ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ ಲಹರಿ ಮುಕ್ತ ಕೇರಳ ಎಂಬ ನೂತನ ಅಭಿಯಾನದ ಪ್ರಯುಕ್ತ ಉದ್ಘಾಟನಾ ಕಾರ್ಯಕ್ರಮ ಹಾಗೂ ರಕ್ಷಕರಿಗೆ ಮಾಹಿತಿ ಶಿಬಿರವನ್ನು ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಭಂಧಕರಾದ ಶ್ರೀ ದೇವಪ್ಪ ಶೆಟ್ಟಿ ಯವರು ನೆರವೇರಿಸಿದರು. ಕೇದುಂಬಡಿ ವಾರ್ಡ್ ಸದಸ್ಯ ಶ್ರೀ ಶಿವರಾಜ್ ಹಾಗೂ ಮಾತೃ ಪಿ.ಟಿ. ಎ ಅಧ್ಯಕ್ಷೆ ಶ್ರೀಮತಿ ತೇಜಾಕ್ಷಿ ಯವರು ಶುಭ ಹಾರೈಸಿದರು. ಶಾಲಾ ಅಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿಯವರು ಹೆತ್ತವರಿಗೆ ಮಾದಕ ವಸ್ತುಗಳಿಂದ ಮಕ್ಕಳನ್ನು ಕಾಪಾಡುವುದರ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಶ್ರೀ ಶೈಲೇಶ್ ರವರು ಸ್ವಾಗತಿಸಿದ ಕಾರ್ಯಕ್ರಮ ಕ್ಕೆ ಶಾಲಾ ಅಧ್ಯಾಪಕಿ ಶ್ರೀ ಮತಿ ಫೌಸಿಯ ಧನ್ಯವಾದವಿತ್ತರು.





Friday 9 September 2022

House Visit By The Teachers on 09 Sep 2022


 

Onam 2022

 ಓಣಂ ಹಬ್ಬದ ಸಲುವಾಗಿ ಶಾಲೆಯಲ್ಲಿ ಜರಗಿದ ಕೆಲವು ಕಾರ್ಯಕ್ರಮಗಳ ಚಿತ್ರಗಳು