Friday 23 December 2016

ಕ್ರಿಸ್ತ್ಮಸ್ ಆಚರಣೆ ಮತ್ತು ಸ್ಟಾರ್ ತಯಾರಿ  






Monday 12 December 2016

ಹರಿತ ಕಾರ್ಯಕ್ರಮದ ವರದಿ

ಹರಿತ ಕಾರ್ಯಕ್ರಮದ ವರದಿ 

    ದಿನಾಂಕ 8/12/2016 ನೇ ಗುರುವಾರದಂದು ನಮ್ಮ ಶಾಲೆಯಲ್ಲಿ ಹರಿತ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನೆರವೇರಿತು.ಸಮಯ ಸರಿಯಾಗಿ 10 ಗಂಟೆಗೆ ಎಂದಿನಂತೆ ಶಾಲಾ ಅಸಂಬ್ಲಿಯು ಆರಂಭಗೊಂಡಿತು.ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಚಂದ್ರಾವತಿ ಯವರು ಕಾರ್ಯಕ್ರಮದ ಬಗ್ಗೆ ಕಿರು ಮಾಹಿತಿ ನೀಡಿದರು.ಈ ಸಮಯದಲ್ಲಿ ಎಲ್ಲ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ  ಹರಿತ ಕಾರ್ಯಕ್ರಮದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.
        ಬಳಿಕ ಹರಿತ ಕಾರ್ಯಕ್ರಮದ ಉಧ್ಘಾಟನೆಯನ್ನು ಮಾಡಲಾಯಿತು.ಈ ಸಭೆಯಲ್ಲಿ ವಾರ್ಡ್ ಮೆಂಬರರಾದ ಶ್ರೀಮತಿ ಜೆಸಿಂತ ಡಿಸೋಜರವರು,ವರ್ಕಾಡಿ ಪಂಚಾಯತ್ ನ ಯೂತ್ ಕೊರ್ಡಿನೇಟರ್ ರಾದ ಶ್ರೀಮಾನ್ ಜಯ ಪ್ರಕಾಶ್ ,  ಅಂಗನವಾಡಿ ಕಾರ್ಯಕ್ರತೆಯರು,ಕುಟುಂಬ ಶ್ರೀ ಕಾರ್ಯಕರ್ತೆಯರು, ಅಧ್ಯಾಪಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.ಅಂಗನವಾಡಿ ಸದಸ್ಯರಾದ ಕುಮಾರಿ ಸರಿತರವರು ಸ್ವಾಗತ ವನ್ನು ನೇರವೇರಿಸಿದರು.



ಕುಮಾರಿ ಸರಿತರವರಿಂದ ಸ್ವಾಗತ 


ಬಳಿಕ ಚಂದ್ರಾವತಿ ಟೀಚರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ಹರಿತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.


ವಾರ್ಡ್ ಮೆಂಬರ್ ರಾದ ಶ್ರೀಮತಿ ಜೆಸಿಂತರವರು ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.


ಹೆಲ್ತ್ ನವರಾದ ಸಿಸ್ಟರ್ ಶೋಭಾ ರವರು ಉಪಯುಕ್ತ ಮಾಹಿತಿ ನೀಡಿ ಹಾಡು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.



ಪಂಚಾಯತ್ ನ ಯೂತ್ ಕೊರ್ಡಿನೇಟರ್ ರಾದ ಶ್ರೀಮಾನ್ ಜಯ ಪ್ರಕಾಶ್ ರವರು ಕೆಲ ಮಾಹಿತಿ ನೀಡಿದರು.



ಶ್ರೀಮತಿ ಶಶಿಕಲ ಟೀಚರ್ ರವರು ದನ್ಯವಾದ ಸಮರ್ಪಿಸಿದರು.

ಬಳಿಕ ಶಾಲಾ ಮಕ್ಕಳಿಂದ ಜನ ಜಾಗೃತಿ ಚಟುವಟಿಕೆಯ ಸಲುವಾಗಿ ಮೆರವಣಿಗೆಯನ್ನು ನಡೆಸಲಾಯಿತು.


ವಿದ್ಯಾರ್ಥಿಗಳು  ಹಾಗೂ ಅಧ್ಯಾಪಕರು ಸೇರಿ ಪರಿಸರ ಶುಚೀಕರಣ ಮಾಡಿದರು.


ಮಕ್ಕಳು ತಂದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಲಾಯಿತು.

ಮಕ್ಕಳಿಗಾಗಿ ಚಿತ್ರ ರಚನೆ ,ಪ್ರಬಂಧ ರಚನೆ ,ರಸಪ್ರಶ್ನೆ ಮೊದಲಾದ  ಕಾರ್ಯಕ್ರಮಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Friday 2 December 2016

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ದಲ್ಲಿ ಕರ್ನಾಟಕದ ಕಲೆಯಾದ ಕಂಸಾಳೆ  ನೃತ್ಯ ವನ್ನು ಆಡಿತೋರಿಸಿದ ನಮ್ಮ ಶಾಲಾ ವಿದ್ಯಾರ್ಥಿಗಳು

Tuesday 22 November 2016

ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ಆಟಗಳ ಹಾಗು ಬಹುಮಾನ ವಿತರಣೆಯ ಚಿತ್ರಗಳು... 

ಮಂಜೇಶ್ವರ  ಉಪಜಿಲ್ಲಾ ವಿಜ್ಞಾನೋಸ್ತ್ಸವ ದಲ್ಲಿ  ಫ್ರಾಬ್ರಿಕ್ ಪನೈಟಿಂಗ್ನಲ್ಲಿ ದ್ವಿತೀಯ ಸ್ಥಾನ ಪಡೆದ ಮುಬಾಸಿರ್ ಗೆ ಅಭಿನಂದನಾ  ಪತ್ರ ಹಾಗು ಟ್ರೋಫಿ 

Sunday 30 October 2016


ಬೆಳಕಿನ ಹಬ್ಬವಾದ "ದೀಪಾವಳೀಯ ಶುಭಾಶಯಗಳು...

Tuesday 25 October 2016

Some other results of Shastrostavam 2016

*Waste materials Product- Megha (4th std) got A grade
*Book Binding- Shwetha (4th std) got B grade
*Coconut shell product- Mohammad Mayz (3rd std) got B grade
*Metal Engraving- Ibrahim Sufyan (3rd std) got C grade
*In Social science we got 3 points


In FABRIC PAINT we got A grade with 2nd place Congrates Mubassir 4th std

Monday 24 October 2016


We got anthor 6 points in Maths Congrates to Kadeejath Raiyana Grade B with 3 point and Nafeesathul Azmina grade B with 3 points

Congratulations Manjushree
Congratulations to Manjushree 4th std Got C grade with 1 point in Science "simple expariment" in Manjeshwara Sub-district Shastrostvam 2016....

Tuesday 18 October 2016

ನಿರ್ಮಣದ ಹಂತದಲ್ಲಿ ಮಕ್ಕಳಿಗೆ ಜಾರು ಬಂಡಿ

Thursday 6 October 2016

ಶಾಸ್ತ್ರೋತ್ಸವ ದ ತಯಾರಿಯಲ್ಲಿ  ವಿದ್ಯಾರ್ಥಿಗಳು





Friday 23 September 2016

ತೆಂಗಿನ ಎಲೆಯಿಂದ ಮೂಡಿದ ಆಟಿಕೆಗಳು 








Sunday 18 September 2016

ಶಾಲಾ ಅಧ್ಯಾಪಕರು ಹಾಗು ವಿದ್ಯಾರ್ಥಿಗಳ ವತಿಯಿಂದ ಓಣಂ ಹಬ್ಬ ಆಚರಣೆ
ಕಾರ್ಯಕ್ರಮದ ಉದ್ಘಾಟನೆ ಯನ್ನು  ರಕ್ಷಕ ಶಿಕ್ಷಕ ಸಂಗದ ಅಧ್ಯಕ್ಷ ಅಬ್ದುಲ್ ರಹಿಮಾನ್ ನೆರವೇರಿಸಿದರು.  





ಅಧ್ಯಾಪಕರು ಹಾಗು ವಿದ್ಯಾರ್ಥಿಗಳ ಸಹಭಾಗಿತ್ವದಿಂದ  ಮಾಡಿದ ಪೋವೊಲಿ ... 

Thursday 18 August 2016

Table distribution


DISTRIBUTION OF TABLES BY OUR MANEGER
ಸ್ವಾತಂತ್ರೋತ್ಸವ ದಿನದಂದು ನಮ್ಮ ಶಾಲಾ ಮನೇಜರ್ ರಾದ ಶ್ರೀ ದೇವಪ್ಪ ಶೆಟ್ಟಿಯವರು ಎಲ್ಲಾ ತರಗತಿಗಳಿಗೆ ಮೇಜನ್ನು ಉಡುಗೊರೆಯಾಗಿ  ನೀಡಿದರು.


Report of independence day 2016

ಸ್ವಾತಂತ್ರ್ಯ ದಿನಾಚರಣೆಯ ವರದಿ
              70 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಅದ್ಧೂರಿಯಾಗಿ  ಆಚರಿಸಲಾಯಿತು.ಸಮಯ ಸರಿಯಾಗಿ 9.30ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ಜೈಕಾರಗಳೊಂದಿಗೆ ಮೆರವಣಿಗೆ ನಡೆಸಲಾಯಿತು.ಬಳಿಕ ಶಾಲಾ ಅಸೆಂಬ್ಲಿ ನಡೆಸಲಾಯಿತು.ವಾರ್ಡ್  ಸದಸ್ಯರಾದ ಜೆಸಿಂತಾ ರವರಿಂದ ಧ್ವಜಾರೋಹಣ ನೆರವೇರಿತು. ಈ ಸಮಯದಲ್ಲಿ ವಿದ್ಯಾರ್ಥಿಗಳು,ಅಧ್ಯಾಪಕರು ಅಲ್ಲದೆ ಶಾಲಾ  ಹಳೆ ವಿದ್ಯಾರ್ಥಿಗಳು,ಮೆನೇಜರ್ ,ರಕ್ಷಕರು ,ಹಾಗೂ ಊರಿನ ಜನರು ಉಪಸ್ಥಿತರಿದ್ದರು.
            ಬಳಿಕ ಸಭಾ ಕಾರ್ಯಕ್ರಮ ನೆರವೇರಿತು.ಅತಿಥಿಗಳಾಗಿ ಮಾಜಿ ಬ್ಲೋಕ್ ಪಂಚಾಯತ್ ಸದಸ್ಯರಾದ ಮೂಸ kunhi ,ಮಾಜಿ ಪಂಚಾಯತ್ ಸದಸ್ಯರಾದ ನಿಕೋಲಸ್ ಮೊಂತೆರೋ, ಊರಿನ ಹಿರಿಯರಾದ ಟಿ.ಯಮ್.ಮೊಹಮ್ಮದ್ , ಪಿ,ಟಿ.ಎ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಉಸ್ತಾದ್, ಶಾಲಾ ಮೆನೇಜರ್ ರಾದ ದೇವಪ್ಪ ಮಾಸ್ಟರ್ ಉಪಸ್ಥಿತರಿದ್ದರು. ಶ್ರೀಮತಿ ಶಶಿಕಲ ಟೀಚರ್ ರವರು ಕಾರ್ಯಕ್ರಮ ನಿರೂಪಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಚಂದ್ರಾವತಿ ಟೀಚರ್ ಸ್ವಾಗತ ಕೋರಿದರು. ಎಲ್ಲಾ ಅಥಿತಿಗಳು ಕಾರ್ಯಕ್ರಮಕ್ಕೆ ಶುಭ ಕೋರಿದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಿರಿಮೆಯ ಅಂಗವಾಗಿ ನಡೆಸುವ ಯೋಜನೆಯ ಮಾಹಿತಿ ನೀಡಿ ದಾನಿಗಳ ಹೆಸರುಗಳನ್ನು ಓದಿ ಹೇಳಲಾಯಿತು. ಶೈಲೇಶ್ ಸರ್ ರವರು ಧನ್ಯವಾದ ಸಮರ್ಪಿಸಿದರು.

               ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಶಾಲಾ ವಿದ್ಯಾರ್ಥಿನಿಯಾದ  ಕುಮಾರಿ ಮಂಜುಶ್ರೀ  ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಂದ ದೇಶ ಭಕ್ತಿಗೀತೆ ,ನಾಟಕ,ಅಭಿನಯ ಗೀತೆ ,ಮಾಸ್ ಡ್ರಿಲ್,ನೃತ್ಯ ಮೊದಲಾದ ಕಾರ್ಯಕ್ರಮಗಳು ಜರುಗಿತು.ಈ ನಡುವೆ ಎಲ್ಲರಿಗೂ ಸಿಹಿ ತಿಂಡಿ ಹಂಚಲಾಯಿತು.ಕೊನೆಗೆ ರಾಷ್ಟಗೀತೆ ಹಾಡುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. 

Wednesday 17 August 2016

Photos of independence day

PHOTOS OF 70TH INDEPENDENCE DAY CELEBRATOIN



ಶಾಲಾ ಮೆರವಣಿಗೆ

ಶಾಲಾ ಅಸೆಂಬ್ಲಿ

ದ್ವಜಾರೋಹಣ:ಜೆಸಿಂತಾ ರವರಿಂದ

ನೆರೆದಿರುವ ಸಭಿಕರು

ನಿರೂಪಣೆ:ಶ್ರೀಮತಿ ಶಶಿಕಲ ಟೀಚರ್ ರವರಿಂದ
ಸ್ವಾಗತ:ಮುಖ್ಯೋಪಾಧ್ಯಾಯರಿಂದ


ಅತಿಥಿಗಳ ಶುಭ ಹಾರೈಕೆ







ಸಾಂಸ್ಕೃತಿಕ ಕಾರ್ಯಕ್ರಮಗಳು


















ಸಿಹಿ ತಿಂಡಿ ವಿತರಣೆ

ಧನ್ಯವಾದ ಸಮರ್ಪಣೆ


-