Sunday, 26 February 2023
ELA (Enhancing Learning Ambiance )
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಯಲ್ಲಿ ತಾರೀಕು 17/02/2023 ರಂದು ಸಮಗ್ರ ಶಿಕ್ಷಾ ಕೇರಳದ ವತಿಯಿಂದ ಆಯೋಜಿಸಿದ ELA (Enhancing Learning Ambiance ) ಎಂಬ ಕಾರ್ಯಯೋಜನೆಯ ಉದ್ಘಾಟನೆ ಹಾಗೂ ಪ್ರಾತ್ಯಕ್ಷಿಕ ತರಬೇತಿ ಕೂಡ ಜರಗಿತು.ತಾರೀಕು 17/02/2023 ರಂದು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಮಾಹಿತಿ ತರಬೇತಿ ಜರಗಿತು. ಶಾಲಾ ಮುಖ್ಯೋಪದ್ಯಯರಾದ ಶ್ರೀ ಶೈಲೇಶ್ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವರ್ಕಾಡಿ ಪಂಚಾಯತ್ ಸಿ ಆರ್ ಸಿ ಕಾರ್ಡಿನೆಟರ್ ಅದ ಶ್ರೀ ಮತಿ ಚಂದ್ರಿಕಾ ರವರು ನೆರವೇರಿಸಿದರು. ಬಳಿಕ ಡಾ. ದೇವಕೀಯವರಿಂದ 1 ಗಂಟೆಗಳಷ್ಟು ಹೊತ್ತಿನ ಒಂದು ಉತ್ತಮ ತರಬೇತಿಯು ಮಕ್ಕಳಿಗೆ ಲಭಿಸಿತು. ಪ್ರಥಮ ಚಿಕಿತ್ಸೆ ಯಾಕೆ? ಹೇಗೆ? ಎಂಬುದರಬಗ್ಗೆ ಸವಿಸ್ತಾರವಾಗಿ ಹೇಳಿಕೊಟ್ಟರು. ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಏನೆಲ್ಲ ಇರಬೇಕು ಎಂಬುದರ ಕುರಿತು ಹೇಳಿಕೊಟ್ಟರು. ಒಂದು ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಶಾಲೆಯಲ್ಲಿ ನಿರ್ಮಿಸಲಾಯಿತು.
ಸಿರಿದಾನ್ಯ ಖಾದ್ಯಗಳ ಪ್ರದರ್ಶನ
ವರ್ಕಾಡಿ : ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ಸಿರಿದಾನ್ಯವರ್ಷದ ಅಂಗವಾಗಿ ಮಕ್ಕಳಿಗೆ ಖಾದ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು. ಐವತ್ತಕ್ಕೂ ಹೆಚ್ಚು ಬಗೆಯ ಖಾದ್ಯಗಳು ಮೇಳದಲ್ಲಿದ್ದವು. ರಾಗಿ ಪಾಯಸ, ರಾಗಿ ಮುದ್ದೆ, ಜೋಳದ ರೊಟ್ಟಿ ಮುಂತಾದವುಗಳು ಮೇಳದಲ್ಲಿ ಮಕ್ಕಳ ಮನಸೆಳೆದವು. ಶಾಲಾ ಮುಖ್ಯೋಪಾದ್ಯಯರಾದ ಶ್ರೀ ಶೈಲೇಶ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಾಲಾ ಶಿಕ್ಷಕಿಯಾರಾದ ಚಿತ್ರಾ, ಲಾವಣ್ಯ, ಫೌಸಿಯ, ಜಯಲಕ್ಷ್ಮಿ ಮುಂತಾದವರು ಮಕ್ಕಳಿಗೆ ಸಿರಿದಾನ್ಯಗಳ ಕುರಿತು ಮಾರ್ಗದರ್ಶನ ನೀಡಿದರು.