Monday, 18 February 2019

OUR SCHOOL



kalikotsava 2018-19

ಮುಡೂರ್ ತೋಕೆ ಶಾಲೆಯಲ್ಲಿ ಕಲಿಕೋತ್ಸವ
ವರ್ಕಾಡಿ: ಎಸ್ ಎಸ್ ಎಲ್ ಪಿ ಶಾಲೆ ಮುಡೂರ್ ತೋಕೆ ಶಾಲೆಯಲ್ಲಿ ಮಕ್ಕಳ ಕಲಿಕೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು. ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿದ ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಜೆಸಿಂತಾ ಡಿಸೋಜ ರವರು ನೆರವೇರಿಸಿದರು. ಶಾಲಾ ಪ್ರಬಂಧಕ ಶ್ರೀ ದೇವಪ್ಪ ಶೆಟ್ಟಿ ಯವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪಿ ಟಿ ಎ ಅಧ್ಯಕ್ಷ ಶ್ರೀ ಸಿದ್ಧಿಕ್, ಪಿ ಇ ಸಿ ಕಾರ್ಯದರ್ಶಿ ಶ್ರೀಮತಿ ಚಂದ್ರಿಕಾ ರವರು ಶುಭ ಹಾರೈಸಿದರು. ಮಕ್ಕಳ ಕಲಿಕೋತ್ಸವ ವನ್ನು ವೀಕ್ಷಿಸಲು ಮಕ್ಕಳ ಹೆತ್ತವರು, ಊರವರು ಸೇರಿದ್ದರು. ಶಾಲಾ ಅದ್ಯಾಪಿಕೆ ಯರದ ಶ್ರೀಮತಿ ಶಶಿಕಲಾ, ಶ್ರೀಮತಿ ಚಿತ್ರ,ಶ್ರೀಮತಿ ಫೌಸಿಯ ಹಾಗೂ ಅಧ್ಯಾಪಕ ಶ್ರೀ ಶೈಲೇಶ್ ತರಗತಿಯನ್ನು ನಡೆಸಿಕೊಟ್ಟರು. ಶಾಲಾ ಶಿಕ್ಷಕಿ ಶ್ರೀಮತಿ ಶಶಿಕಲಾ ಕಾರ್ಯಕ್ರಮಕ್ಕೆ ಧನ್ಯವಾದ ಸಮರ್ಪಿಸಿದರು.











Friday, 11 January 2019

Udayavani report


*ಮುಡೂರು ತೋಕೆ ಶಾಲಾ ವಾರ್ಷಿಕೋತ್ಸವ*
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆ ಯಲ್ಲಿ 65ನೇ ವರ್ಷದ ಶಾಲಾ ವಾರ್ಷಿಕೋತ್ಸವ ವು ಬಹಳ ವಿಜೃಂಭಣೆಯಿಂದ  ಜರಗಿತು. ಪಿ.ಟಿ. ಎ ಅಧ್ಯಕ್ಷ ಶ್ರೀ ಅಬೂಬಕರ್ ಸಿದ್ಧಿಕ್ ಶಾಲಾ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ದ ಉದ್ಘಾಟನೆಯನ್ನು ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಅಬ್ದುಲ್ ಮಜೀದ್ ರವರು ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ ಅಲಂಕರಿಸಿ ದರು. ಕಾರ್ಯಕ್ರಮ ದ ಅತಿಥಿ ಗಳಗಿ ಸುಣ್ಣನಂಗಳ ವರ್ಡ್ ಸದಸ್ಯೆ ಶ್ರೀಮತಿ ಜೆಸಿಂತಾ ಡಿಸೋಜ ಹಾಗೂ ಮಂಜೇಶ್ವರ ಉಪಜಿಲ್ಲಾ ಬಿ ಪಿ ಓ ಆದಂತಹ ಶ್ರೀ ವಿಜಯ ಕುಮಾರ್. ಪಿ ಯವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ನಿವೃತಲಾಗಲಿರುವ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಾವತಿ ವಯವರಿಗೆ ಬೀಳ್ಕೊಡುಗೆ ಸಮಾರಂಭವು ಜರಗಿತು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು. ಶ್ರೀಮತಿ ಚಂದ್ರಾವತಿ ಯವರು ಸ್ವಾಗತಿಸಿದ ಕಾರ್ಯಕ್ರಮ ಕ್ಕೆ ಶಾಲಾ ಶಿಕ್ಷಕಿ ಶ್ರೀಮತಿ ಶಶಿಕಲಾ ರವರು ವಂದಿಸಿದರು.
ವಿದ್ಯಾರ್ಥಿಗಳಿಂದ ಸಂಸ್ಕೃತಿ ಕ ಕಾರ್ಯಕ್ರಮ ವು ಜರಗಿತು














Monday, 19 November 2018

PTA Generalbody meeting about Anual day 2018


2018-19 ನೇ ಶೈಕ್ಷಣಿಕ ವರ್ಷದ ಶಾಲಾ ವಾರ್ಷಿಕೋತ್ಸವದ ಬಗ್ಗೆ  ಪಿ ಟಿ ಎ ಸಭೆ ಸೇರಲಾಯಿತು





Childrens Day Nov 14


ಮಕ್ಕಳ ದಿನಾಚರಣೆಯ ಪ್ರಯುಕ್ತ ಆಟೋಟ ಸ್ಪರ್ಧೆಗಳು