Thursday 18 August 2016

Report of independence day 2016

ಸ್ವಾತಂತ್ರ್ಯ ದಿನಾಚರಣೆಯ ವರದಿ
              70 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಅದ್ಧೂರಿಯಾಗಿ  ಆಚರಿಸಲಾಯಿತು.ಸಮಯ ಸರಿಯಾಗಿ 9.30ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ಜೈಕಾರಗಳೊಂದಿಗೆ ಮೆರವಣಿಗೆ ನಡೆಸಲಾಯಿತು.ಬಳಿಕ ಶಾಲಾ ಅಸೆಂಬ್ಲಿ ನಡೆಸಲಾಯಿತು.ವಾರ್ಡ್  ಸದಸ್ಯರಾದ ಜೆಸಿಂತಾ ರವರಿಂದ ಧ್ವಜಾರೋಹಣ ನೆರವೇರಿತು. ಈ ಸಮಯದಲ್ಲಿ ವಿದ್ಯಾರ್ಥಿಗಳು,ಅಧ್ಯಾಪಕರು ಅಲ್ಲದೆ ಶಾಲಾ  ಹಳೆ ವಿದ್ಯಾರ್ಥಿಗಳು,ಮೆನೇಜರ್ ,ರಕ್ಷಕರು ,ಹಾಗೂ ಊರಿನ ಜನರು ಉಪಸ್ಥಿತರಿದ್ದರು.
            ಬಳಿಕ ಸಭಾ ಕಾರ್ಯಕ್ರಮ ನೆರವೇರಿತು.ಅತಿಥಿಗಳಾಗಿ ಮಾಜಿ ಬ್ಲೋಕ್ ಪಂಚಾಯತ್ ಸದಸ್ಯರಾದ ಮೂಸ kunhi ,ಮಾಜಿ ಪಂಚಾಯತ್ ಸದಸ್ಯರಾದ ನಿಕೋಲಸ್ ಮೊಂತೆರೋ, ಊರಿನ ಹಿರಿಯರಾದ ಟಿ.ಯಮ್.ಮೊಹಮ್ಮದ್ , ಪಿ,ಟಿ.ಎ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಉಸ್ತಾದ್, ಶಾಲಾ ಮೆನೇಜರ್ ರಾದ ದೇವಪ್ಪ ಮಾಸ್ಟರ್ ಉಪಸ್ಥಿತರಿದ್ದರು. ಶ್ರೀಮತಿ ಶಶಿಕಲ ಟೀಚರ್ ರವರು ಕಾರ್ಯಕ್ರಮ ನಿರೂಪಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಚಂದ್ರಾವತಿ ಟೀಚರ್ ಸ್ವಾಗತ ಕೋರಿದರು. ಎಲ್ಲಾ ಅಥಿತಿಗಳು ಕಾರ್ಯಕ್ರಮಕ್ಕೆ ಶುಭ ಕೋರಿದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಿರಿಮೆಯ ಅಂಗವಾಗಿ ನಡೆಸುವ ಯೋಜನೆಯ ಮಾಹಿತಿ ನೀಡಿ ದಾನಿಗಳ ಹೆಸರುಗಳನ್ನು ಓದಿ ಹೇಳಲಾಯಿತು. ಶೈಲೇಶ್ ಸರ್ ರವರು ಧನ್ಯವಾದ ಸಮರ್ಪಿಸಿದರು.

               ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಶಾಲಾ ವಿದ್ಯಾರ್ಥಿನಿಯಾದ  ಕುಮಾರಿ ಮಂಜುಶ್ರೀ  ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಂದ ದೇಶ ಭಕ್ತಿಗೀತೆ ,ನಾಟಕ,ಅಭಿನಯ ಗೀತೆ ,ಮಾಸ್ ಡ್ರಿಲ್,ನೃತ್ಯ ಮೊದಲಾದ ಕಾರ್ಯಕ್ರಮಗಳು ಜರುಗಿತು.ಈ ನಡುವೆ ಎಲ್ಲರಿಗೂ ಸಿಹಿ ತಿಂಡಿ ಹಂಚಲಾಯಿತು.ಕೊನೆಗೆ ರಾಷ್ಟಗೀತೆ ಹಾಡುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. 

No comments:

Post a Comment