Wednesday 10 July 2019

SCHOOL PARLIMENT 2019

ಮುಡೂರ್ ತೋಕೆ ಶಾಲಾ ಪಾರ್ಲಿಮೆಂಟ್ ರಚನೆ

ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ 2019-20ನೇ ಸಾಲಿನ ಶಾಲಾ ಚುನಾವಣೆಯು ವಯಸ್ಕರ ಮತದಾನದ ರೀತಿಯಲ್ಲಿ ಜರಗಿತು. ಚುನಾವಣೆಯ ಎಲ್ಲಾ ಹಂತಗಳನ್ನು ಪಾಲಿಸಿ ವಿದ್ಯಾರ್ಥಿಗಳಿಗೆ ಮತದಾನದ ಜಾಗ್ರತಿ ಮೂಡಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಮುಖ್ಯ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಚುನಾವಣೆಯ ಎಲ್ಲಾ ಹಂತಗಳನ್ನು ಮಕ್ಕಳೇ ನಿರ್ವಹಿಸುದರ ಮೂಲಕ ಚುನಾವಣೆಯ ಅರಿವು ಎಳೆ ಮನಸಿನಲ್ಲಿ ಅಚೋತ್ತುವಂತಯಿತು. ಬಳಿಕ ಮುಖ್ಯಚುನಾವಣಾಧಿಕಾರಿಯ ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು. ಮುಖ್ಯಚುನಾವಣಾಧಿಕಾರಿಯು ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದಂತೆ ಎಲ್ಲಾ ವಿದ್ಯಾರ್ಥಿಗಳ ಮುಖದಲ್ಲೂ ಸಂತೋಷ ತುಂಬಿತು. ಶಾಲಾ ನಾಯಕಿಯಾಗಿ ಕುಮಾರಿ ಧನ್ಯ ಹಾಗೂ ಶಾಲಾಉಪ ನಾಯಕನಾಗಿ ಮೊಹಮದ್ ಮಿಕ್ಡದ್ ಆಯ್ಕೆಯಾದರು. ವಿದ್ಯಾಭ್ಯಾಸ ಮಂತ್ರಿಯಾಗಿ ಮುಬಾಸಿರ್, ಆಹಾರ ಮಂತ್ರಿಯಾಗಿ ಹೃತ್ವಿಕ್, ಕ್ರೀಡಾ ಮಂತ್ರಿಯಾಗಿ ಸಾಹಿಮ್ ಆಯ್ಕೆಯಾದರು. ಮುಖ್ಯಚುನಾವಣಾಧಿಕಾರಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣವಚನ ಭೋದಿಸಿದರು. ಬಳಿಕ ವಿಜೇತ ಅಭ್ಯರ್ಥಿ ಗಳು ಸಿಹಿತಿಂಡಿ ಮಕ್ಕಳಿಗೆ ವಿತರಿಸುವ ಮೂಲಕ ಸಂತೋಷ ಹಂಚಿಕೊಂಡರು. ಶಾಲಾ ಚುನಾವಣೆಯಲ್ಲಿ ಅಧ್ಯಾಪಕ ವೃಂದ ಉಪಸ್ಥಿತರಿದ್ದು ಸಹಕರಿಸಿದರು.

No comments:

Post a Comment