Tuesday 21 June 2022

School Parliament 2022

 ಮುಡೂರುತೋಕೆ ಶಾಲಾ ಪಾರ್ಲಿಮೆಂಟ್

ವರ್ಕಾಡಿ : ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆ ಯಲ್ಲಿ 2022-23ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆಯು ವಯಸ್ಕರ ಮತದಾನದ ರೀತಿಯಲ್ಲಿ ಹಾಗೂ ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ಆಗಿ ನಡೆಸಲಾಯಿತು. ಇದಕ್ಕಾಗಿ ಸಮ್ಮತಿ ಎಂಬ ಉಬುಂಟು ಸಾಫ್ಟ್ವೇರ್ ನ್ನು ಬಳಸಲಾಯಿತು. ಚುನಾವಣೆಯ ಎಲ್ಲಾ ಹಂತಗಳನ್ನು ಪಾಲಿಸಿ ವಿದ್ಯಾರ್ಥಿಗಳಿಗೆ ಚುನಾವಣೆಯ ಜಾಗ್ರತಿ ಮೂಡಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಚುನಾವಣೆಗೆ ಚಾಲನೆ ನೀಡಿದರು. ಚುನಾವಣೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಮುಂತಾದ ಎಲ್ಲಾ ಪಾತ್ರ ಗಳನ್ನು ಅಧ್ಯಾಪಕರ ಸಲಹೆಯಂತೆ ಮಕ್ಕಳೇ ನಿರ್ವಹಿಸುವ ಮೂಲಕ ಚುನಾವಣೆಯ ಅರಿವು ಮಕ್ಕಳ ಎಳೆ ಮನಸಿನಲ್ಲಿ ಅಚೋಟ್ಟುವಂತಾಯಿತು. ಚುನಾವಣೆ ಬಳಿಕ ಮತ ಎಣಿಕೆಯನ್ನು ಮಕ್ಕಳ ಸಾನಿಧ್ಯದಲ್ಲಿಯೇ ಸಾಫ್ಟ್ವೇರ್ ಸಹಾಯದಿಂದ ನಡೆಸಲಾಯಿತು. ಮುಖ್ಯ ಚುನಾವಣಾಧಿಕಾರಿಯವರಿಂದ ವಿಜೇತ ಅಭ್ಯರ್ಥಿ ಯ ಹೆಸರನ್ನು ಘೋಷಣೆ ಮಾಡಲಾಯಿತು. ಶಾಲಾ ನಾಯಕನಾಗಿ ಸಲ್ಮಾನ್ ಫಾರಿಶ್ ಹಾಗೂ ಉಪ ನಾಯಕನಾಗಿ ಕೌಶಿಕ್ ಆಯ್ಕೆಯಾದರು. ಬಳಿಕ ಮಂತ್ರಿ ಮಂಡಲ ರಚನೆ ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯ ರಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣವಚನ ಭೋದಿಸಲಾಯಿತು.
Nomination by Kowshik

Nomination by Salman Farish

Nomination by Yathish Kumar
--------------------------------------------------------------------------------------------------------------------------
ಮತ ಯಾಚನೆ 👇👇👇👇👇







-----------------------------------------------------------------------------

Ballot paper 👇

Voting machine 👆



ಮುಖ್ಯೋಪಾಧ್ಯಾಯರಿಂದ ಮತದಾನದ ಬಗ್ಗೆ ಮಾಹಿತಿ.
ಮುಖ್ಯ ಚುನಾವಣಾ ಅಧಿಕಾರಿಯಾಗಿ ಮುಫೀದಾ 
ಚುನಾವಣಾ ಅಧಿಕಾರಿಗಳಾಗಿ ಜುಮೈಲಾ , ವೃದ್ಧಿ , ಪ್ರಥಮ್  

 









Voting






ಶಾಲಾ ನಾಯಕನ ಪ್ರಮಾಣವಚನ 



No comments:

Post a Comment