Saturday 9 July 2016

ಪಯರ್

ಅಂತಾರಾಷ್ತ್ರೀಯ ದ್ವಿದಳ ಧಾನ್ಯ ವರ್ಷ 

"ಸುಸ್ಥಿರ ಭವಿಷ್ಯಕ್ಕೆ ಪೋಷಕಗಳಿಂದ ಕೂಡಿದ ಬೀಜ "

 2015 ಜೀವಿಗಳ ಅಸ್ತಿತ್ವಕ್ಕೆ ಆಧಾರವಾದ ಮಣ್ಣು ಬೆಳಕು ಎಂಬಿವುಗಳಿಗೆ ಸಂಬಂಧಿಸಿದ ವರ್ಷಾಚರಣೆಯಾದರೆ  2016ನ್ನು ಅಂತಾರಾಷ್ತ್ರೀಯ ದ್ವಿದಳ ಧಾನ್ಯ ವರ್ಷವಾಗಿ ಯು.ಎನ್.ಜನರಲ್ ಎಸಂಬ್ಲಿಯ ಅಂಗೀಕಾರದೊಂದಿಗೆ ಆಚರಿಸಲಾಗುತ್ತದೆ.ಸಾರ್ವಜನಿಕ ಆರೋಗ್ಯ,ಆರೋಗ್ಯಸಂರಕ್ಷಣೆಯನ್ನು ಧೃಡಪಡಿಸುವುದು ಎಂಬುವುದು ವರ್ಷಾಚರಣೆ ಕಾರ್ಯಕ್ರಮದ ಪ್ರಧಾನ ಉದ್ದೇಶವಾಗಿದೆ. ಪ್ರೊಟೀನ್,ಪೋಲಿಕ್  ಆಸಿಡ್ ,ಅಮಿನೋ ಆಸಿಡ್ ಏ0ಟಿ ಓಕ್ಸಿಡೆಂಟ್ ಗಳು ಎಂಬಿವುಗಳಿಂದ  ದ್ವಿದಳ ಧಾನ್ಯಗಳು ಸಮೃಧ್ಧವಾಗಿದೆ .
ದ್ವಿದಳ ಧಾನ್ಯಗಳು ನಮ್ಮ ಪ್ರಧಾನ ಆಹಾರ ವಸ್ತುವಾಗಿದೆ. ಭಾರತವು ಲೋಕದಲ್ಲಿ ಅತೀ ಹೆಚ್ಚು ದ್ವಿದಳ ಧಾನ್ಯಗಳ ಉತ್ಪಾದನೆಯನ್ನೂ,ಉಪಯೋಗವನ್ನೂ ಮಾಡುವ ದೇಶವಾಗಿದೆ.ಆದರೆ ಅಂತಾರಾಷ್ತ್ರೀಯ ಗುಣಮಟ್ಟದೊಂದಿಗೆ ಹೋಲಿಸುವಾಗ ಭಾರತದ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗಿದೆ.ಮಳೆ ನೇರವಾಗಿ ಲಭಿಸುವ ಭೂಮಿಯಲ್ಲಿ ಮಾತ್ರ  ಭಾರತದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯು 85%  ನಡೆಯುವುದು ,ಬಾಕಿ 15% ನೀರಾವರಿ  ನಡೆಸುವ ಭೂಮಿಯಲ್ಲಿಯೂ ಧಾನ್ಯಗಳ ಉತ್ಪಾದನೆಯಲ್ಲಿ  1950ರಿಂದ  2013ರ ವರೆಗಿನ ಕಾಲಾವಧಿಯನ್ನು ತೆಗೆದುಕೊಂಡರೆ ಸರಾಸರಿ ಹೆಚ್ಚಳ  ಒಂದು ಶೇಕಡಾಕ್ಕಿಂತ ಸ್ವಲ್ಪ ಹೆಚ್ಚು ಮಾತ್ರ ಎಂಬುದನ್ನು  ಕಂಡುಕೊಳ್ಳಬಹುದು .
ಶರೀರದ ಬೆಳವಣಿಗೆಗೆ ಪ್ರೊಟೀನ್ ಅತ್ಯಾವಶ್ಯಕವಾಗಿರುವುದರಿಂದ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ದ್ವಿದಳ ಧಾನ್ಯವನ್ನು ಸೇವಿಸಿ ಪೋಷಕಾಹಾರ ಕೊರತೆಯಿಂದ ಉಂಟಾಗುವ ರೋಗಗಳಿಂದ ಮುಕ್ತಿ ಪಡೆಯಲಿ ಎಂದು ಬಯಸುವ, 
ಅಧ್ಯಾಪಕ ಹಾಗೂ ವಿದ್ಯಾರ್ಥಿಗಳ ವೃಂದ 
ಎಸ್,ಎಸ್,ಎ,ಎಲ್,ಪಿ,ಎಸ್,ಮೂಡೂರ್ ತೋಕೆ


"Payar" in our school  
 
                                       

No comments:

Post a Comment